Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಟಕೋಮಪಾರ್ಕ್, ವಾಷಿಂಗ್ಟನ್, ಅಮೇರಿಕಾ

    ಅಮೇರಿಕಾ ದೇಶದ ವಾಷಿಂಗ್ಟನ್ ನಗರದ ಟಕೋಮಾ ಪಾರ್ಕ್‌ನಲ್ಲಿರುವ ನಮ್ಮ ಶಾಲೆ ಹಾಗೂ ಆಸ್ಪತ್ರೆಯು ಪ್ರಶಸ್ತವಾದ ಸ್ಥಳದಲ್ಲಿದೆ. ಈ ಸ್ಥಳವು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಿದ ಸ್ಥಳವೇ ಆಗಿತ್ತು. ಎರಡೂ ಸಂಸ್ಥೆಗಳಿಗೂ ಸಾಕಾಗುವಷ್ಟು ವಿಶಾಲವಾದ ಸ್ಥಳ ಅಲ್ಲಿದೆ. ಅಲ್ಲಿನ ಪರಿಸರ ಮತ್ತು ನೀರು - ಎರಡೂ ಉತ್ತಮವಾಗಿದೆ. ಟಕೋಮಾ ಪಾರ್ಕ್‌ನಲ್ಲಿ ಉತ್ತರದಿಂದ ದಕ್ಷಿಣಕ್ಕೆ ನಮ್ಮ ಸ್ಥಳದ ನಡುವೆ ಒಂದು ಸುಂದರವಾದ ತೊರೆಯು ಹರಿಯುತ್ತದೆ. ಈ ತೊರೆಯು ಚಿನ್ನ ಬೆಳ್ಳಿಗಿಂತಲೂ ಅಮೂಲ್ಯವಾದದ್ದು.ಕೊಕಾಘ 61.2

    ಒಂದು ದಿನ ಶ್ರೀಮತಿ ವೈಟಮ್ಮನರು ಇತರ ಕೆಲವರೊಂದಿಗೆ ಟಕೋಮಾಪಾರ್ಕ್ ಪ್ರದೇಶ ನೋಡಲು ಹೋದರು. ಅಲ್ಲಿನ ವಿಶಾಲವಾದ ಭಾಗವು ನೈಸರ್ಗಿಕವಾದ ಅರಣ್ಯವಾಗಿತ್ತು. ಮನೆಗಳು ಒತ್ತೊತ್ತಾಗಿರಲಿಲ್ಲ. ಬದಲಾಗಿ ವಿಶಾಲವಾಗಿದ್ದು ವಾಸಿಸಲು ಅನುಕೂಲವಾಗಿದ್ದವು. ಅವುಗಳ ಸುತ್ತಲೂ ಪ್ರಯೋಜನಕರವಾದ ದೇವದಾರು, ಓಕ್ಸ್, ಮೇಪಲ್ಸ್ ಹಾಗೂ ಸುಂದರವಾದ ಇತರ ಮರಗಳಿದ್ದವು. ಇಲ್ಲಿನ ಮನೆಗಳ ಮಾಲಿಕರಲ್ಲಿ ಹೆಚ್ಚಿನವರು ವ್ಯಾಪಾರ, ವ್ಯವಹಾರ ಮಾಡುವವರು ಹಾಗೂ ವಾಷಿಂಗ್ಟನ್ ನಗರದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನವೂ ನಗರಕ್ಕೆ ಹೋಗಿ ಕೆಲಸ ಮುಗಿದ ನಂತರ ಸಂಜೆ ಪ್ರಶಾಂತವಾದ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು.ಕೊಕಾಘ 61.3

    ಅಲ್ಲಿ ಒಂದು ಪ್ರಿಂಟಿಂಗ್ ಪ್ರೆಸ್ ಹಾಗೂ ಸಭಾಂಗಣಕ್ಕೆ ಸ್ಥಳ ನೋಡಲಾಯಿತು. ಅಂಚೆ ಕಚೇರಿ ಸಮೀಪದಲ್ಲಿತ್ತು. ಟಕೋಮಾಪಾರ್ಕ್, ಅಡ್ವೆಂಟಿಸ್ಟರಾದ ನಮಗೋಸ್ಕರ ವಿಶೇಷವಾಗಿ ಸಿದ್ಧಪಡಿಸಿದ ಸ್ಥಳವಾಗಿದ್ದು ನಮ್ಮ ಕೆಲಸಗಾರರು ವಾಸಿಸಲು ಮತ್ತು ನಮ್ಮ ಶಾಲಾ ಕಾಲೇಜು, ಹಾಗೂ ಆಸ್ಪತ್ರೆ ಸ್ಥಾಪಿಸಲು ಪ್ರಶಸ್ತವಾಗಿದ್ದು ನಮಗಾಗಿಯೇ ಕಾದುಕೊಂಡಿದ್ದಂತೆ ತೋರಿಬಂತೆಂದು ಶ್ರೀಮತಿ ವೈಟಮ್ಮನವರು ತಿಳಿಸಿದ್ದಾರೆ (ಸೆನ್ಸ್ ಆಫ್ ದಿ ಟೈಮ್ಸ್, ಜೂನ್ 15, 1904).ಕೊಕಾಘ 61.4

    ಕರ್ತನು ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ಟಕೋಮಾ ಪಾರ್ಕ್ ವಿಷಯವಾಗಿ ಸ್ಪಷ್ಟವಾಗಿ ತಿಳಿಸಿದನು. ಬ್ಯಾಟಲ್ ಕ್ರೀಕ್‌ನಲ್ಲಿರುವ ಪುಸ್ತಕ ಪ್ರಕಟಣಾ ಸಂಸ್ಥೆಯು ತತ್ಕಾಲಕ್ಕೆ ವಾಷಿಂಗ್ಟನ್ ನಗರದ ಸಮೀಪಕ್ಕೆ ವರ್ಗಾಯಿಸಬೇಕು. ಕೆಲವು ಕಾಲದ ನಂತರ ದೇವರ ವಾಷಿಂಗ್ಟನ್‌ನಿಂದ ಬೇರೆ ಹೋಗಬೇಕೆಂದು ತಿಳಿಸಿದಲ್ಲಿ, ನಾವು ಹೋಗಲು ಸಿದ್ಧರಾಗಿರಬೇಕು (ರಿವ್ಯೂ ಅಂಡ್ ಹೆರಾಲ್ಡ್, ಆಗಸ್ಟ್ 11, 1903).ಕೊಕಾಘ 61.5