Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಲೋಮಾಲಿಂಡಾ, ಕ್ಯಾಲಿಫೋರ್ನಿಯಾ

    ಕ್ಯಾಲಿಫೋರ್ನಿಯಾ ರಾಜ್ಯದ ಪ್ಯಾರಡೈಸ್ ವ್ಯಾಲಿಯಲ್ಲಿ ಒಂದು ಉತ್ತಮವಾದ ಆಸ್ಪತ್ರೆ, ಲಾಸ್‌ಏಂಜಲಿಸ್‌ನಿಂದ 15 ಕಿ.ಮೀ. ದೂರದ ಗ್ಲೆಂಡೇಲ್ ಎಂಬಲ್ಲಿ ಮತ್ತೊಂದು ಉತ್ತಮವಾದ ಆಸ್ಪತ್ರೆಯಿದೆ. ಅಲ್ಲದೆ ಈ ನಗರದಲ್ಲಿ ಸುಮಾರು 100 ಕಿ.ಮೀ. ದೂರದಲ್ಲಿ ಲೋಮಾಲಿಂಡಾ ಎಂಬ ವಿಶಾಲವಾದ ಹಾಗೂ ಸುಂದರವಾದ ಸ್ಥಳವಿದೆ (ಇಲ್ಲಿ ಈಗ ಅಡ್ವೆಂಟಿಸ್ ಮೆಡಿಕಲ್ ಕಾಲೇಜಿದೆ) ಇದು ತಾವು ನೋಡಿದ ಅತ್ಯಂತ ಸುಂದರ ಆಸ್ಪತ್ರೆಗಳಲ್ಲಿ ಒಂದಾಗಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಲೋಮಾಲಿಂಡಾ ಮೆಸೇಜಸ್, ಪುಟ 141, 1905). ಈ ಸ್ಥಳವು ವೈದ್ಯಕೀಯ ಸೇವೆಗೆ ತರಬೇತಿ ನೀಡಲು ಕರ್ತನು ವಿಶೇಷವಾಗಿ ನೇಮಿಸಿದ ಸ್ಥಳವೆಂದು ಶ್ರೀಮತಿ ವೈಟಮ್ಮನವರು 1907ನೇ ಇಸವಿಯಲ್ಲಿ ಬರೆದ ಒಂದು ಪತ್ರದಲ್ಲಿ ತಿಳಿಸಿದ್ದಾರೆ.ಕೊಕಾಘ 62.4

    ಲೋಮಾಲಿಂಡಾದಲ್ಲಿ ಶಾಲಾ ಕಾಲೇಜುಗಳು, ಹುಲ್ಲುಗಾವಲು, ಹಣ್ಣು ಹಂಪಲು ಬೆಳೆಯಲು ತೋಟ, ವ್ಯವಸಾಯ ಮಾಡುವ ಭೂಮಿ, ದೊಡ್ಡ ಕಟ್ಟಡಗಳು, ವಿಶಾಲವಾದ ಮೈದಾನಗಳು ಹಾಗೂ ಎಲ್ಲಕ್ಕಿಂತಲೂ ಹೆಚ್ಚಾಗಿ ನೈಸರ್ಗಿಕ ಸೌಂದರ್ಯ ಹೇರಳವಾಗಿದೆ. ಇವೆಲ್ಲವೂ ಒಂದು ದೊಡ್ಡ ಆಶೀರ್ವಾದವಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಉತ್ತಮ ಸ್ಥಳ, ಎಲೀಯನು ಹಾಗೂ ಎಲೀಷನ ಕಾಲದಲ್ಲಿದ್ದಂತ ಪುರಾತನ ಪ್ರವಾದನಾ ಮಂಡಳಿಯ ಸಿದ್ಧಾಂತಗಳ ಆಧಾರದಲ್ಲಿ ಶಾಲಾ ಕಾಲೇಜು ಆರಂಭಿಸಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ತಿಳಿಸಿದನು. ವೈದ್ಯರು ಇಲ್ಲಿ ತಮ್ಮ ಶಿಕ್ಷಣ ಪಡೆದುಕೊಳ್ಳಬೇಕು (ಮೆಡಿಕಲ್ ಮಿನಿಸ್ಟ್ರಿ, ಪುಟಗಳು 75, 76, 1907).ಕೊಕಾಘ 62.5

    *****

    Larger font
    Smaller font
    Copy
    Print
    Contents