Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಇತರ ಕೆಟ್ಟ ನಗರಗಳು

    ಲೋಕದ ಅಂತ್ಯವು ಸಮೀಪಿಸುತ್ತಿರುವಾಗ, ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ನಡೆದಂತೆ ಭೂಕಂಪ ಹಾಗೂ ಬೆಂಕಿಯ ಅನಾಹುತಗಳು ಇತರ ಸ್ಥಳಗಳಲ್ಲಿ ಉಂಟಾಗುತ್ತವೆ. ದೇವರ ನ್ಯಾಯತೀರ್ಪಿನ ದಿನವು ಶೀಘ್ರದಲ್ಲಿಯೇ ಬರಲಿರುವ ಕಾರಣದಿಂದ ಈ ಘಟನೆಗಳು ನಮ್ಮಲ್ಲಿ ಭಯ ಹುಟ್ಟಿಸಬೇಕು. ಕೆಟ್ಟ ನಗರಗಳ ಮೇಲೆ ಆಗಲೇ ಬಂದಿರುವ ದೇವರ ನ್ಯಾಯತೀರ್ಪು ಒಂದು ಎಚ್ಚರಿಕೆಯಾಗಿದೆಯೇ ಹೊರತು, ಮುಕ್ತಾಯವಲ್ಲ. ಮುಂದೆ ಬರುವ ಶಿಕ್ಷೆಯು ಇದಕ್ಕಿಂತಲೂ ಘೋರವಾಗಿರುತ್ತದೆ.ಕೊಕಾಘ 66.4

    ಇಬ್ರಿಯ 2:1-20; ಚೆಫನ್ಯ 1:1-3; 20; ಜೆಕರ್ಯ 1:1-4:14 ಹಾಗೂ ಮಲಾಕಿಯ 1:1-4ನೇ ವಚನಗಳಲ್ಲಿ ದೇವರ ಶಿಕ್ಷೆಯ ಬಗ್ಗೆ ತಿಳಿಸಲಾಗಿದೆ. ಇಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಈ ದೃಶ್ಯಗಳು ಶೀಘ್ರದಲ್ಲಿಯೇ ನಡೆಯಲಿವೆ. ಸತ್ಯವೇದದ ಈ ಅದ್ಭುತ ಹೇಳಿಕೆಗಳನ್ನು ಪ್ರತಿಯೊಬ್ಬರೂ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಹಳೆಯ ಒಡಂಬಡಿಕೆಯಲ್ಲಿ ದಾಖಲಾಗಿರುವ ಪ್ರವಾದನೆಗಳು ಕೊನೆಯ ಕಾಲಕ್ಕಾಗಿ ಕೊಡಲ್ಪಟ್ಟಿರುವ ದೇವರ ವಾಕ್ಯವಾಗಿದ್ದು (ಸ್ಯಾನ್‌ಫ್ರಾನ್ಸಿಸ್ಕೋ ನಗರವನ್ನು ನಾಶ ಮಾಡಿದಂತೆ) ಖಂಡಿತವಾಗಿಯೂ ನೆರವೇರಲಿವೆ. ದೇವರ ಆಜ್ಞೆಗಳನ್ನು ಉಲ್ಲಂಘಿಸಿ, ಮಿತಿಮೀರಿದ ಪಾಪದಿಂದ ತುಂಬಿರುವ ನಗರಗಳು, ಬೆಂಕಿ, ಭೂಕಂಪ ಹಾಗೂ ಪ್ರವಾಹದಿಂದ ನಾಶವಾಗುತ್ತವೆಂಬ ಸಂದೇಶವನ್ನು ಕೊಡಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ಆದೇಶಿಸಿದ್ದನು (ಎವಾಂಜಲಿಸಮ್, 27, 1906).ಕೊಕಾಘ 66.5

    ಲೋಕದ ಅಂತ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಕ್ರಿಸ್ತನು ನೀಡಿದ ಪ್ರವಾದನೆಯ ಎಲ್ಲಾ ಎಚ್ಚರಿಕೆಗಳು ನಮ್ಮ ದೊಡ್ಡ ನಗರಗಳಲ್ಲಿ ನೆರವೇರುತ್ತವೆ. ಜನರು ಈ ಎಚ್ಚರಿಕೆಗಳನ್ನು ಗಮನಕ್ಕೆ ತಂದುಕೊಳ್ಳಬೇಕೆಂಬುದು ದೇವರ ಉದ್ದೇಶವಾಗಿದೆ. ಮುಂದೆ ಜಗತ್ತಿನಲ್ಲಿ ಏನು ಸಂಭವಿಸುತ್ತದೆಂಬುದಕ್ಕೆ ಸ್ಯಾನ್‌ಫ್ರಾನ್ಸಿಸ್ಕೋ ನಗರದ ಭೂಕಂಪ ಹಾಗೂ ಬೆಂಕಿ ಅನಾಹುತವು ಒಂದು ಮಾದರಿಯಾಗಿದೆ. ಅಧಿಕಾರಿಗಳು ಲಂಚ ತೆಗೆದುಕೊಂಡು ಅಪರಾಧಿಗಳನ್ನು ಬಿಡುಗಡೆಗೊಳಿಸುವ, ನಿರಪರಾಧಿಗಳನ್ನು ಶಿಕ್ಷಿಸುವುದು, ಹಣದ ಅವ್ಯವಹಾರ, ವಂಚನೆಯ ನಿರ್ವಹಣೆ - ಈ ದೋಷಾಪರಾಧಗಳು ದೊಡ್ಡ ನಗರಗಳಲ್ಲಿ ತುಂಬಿ ತುಳುಕುತ್ತಿವೆ. ಜಲಪ್ರಳಯಕ್ಕೆ ಮೊದಲಿದ್ದ ಪರಿಸ್ಥಿತಿಯು ನಮ್ಮ ಲೋಕದಲ್ಲಿ ಕಂಡುಬರುತ್ತದೆ.ಕೊಕಾಘ 66.6