Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾನುವಾರಾಚರಣೆ ಕಾನೂನು ತರಬೇಕೆನ್ನುವವರಿಗೆ ತಾವು ಏನು ಮಾಡುತ್ತೇವೆಂದು ತಿಳಿಯದು

    ಭಾನುವಾರಾಚರಣೆ ಕಡ್ಡಾಯವಾಗಿ ಜಾರಿಗೆ ತರಬೇಕೆನ್ನುವ ಕಾರ್ಯವು ಗುಪ್ತವಾಗಿ ನಡೆಯುತ್ತಿದೆ. ನಿಜವಾದ ವಿಷಯವನ್ನು ಅದರ ನಾಯಕರು ಮುಚ್ಚಿಡುತ್ತಿದ್ದಾರೆ. ಇದನ್ನು ಜಾರಿಗೆ ತರಬೇಕೆನ್ನುವ ಅನೇಕರಿಗೆ ಇದು ಯಾವ ದಿಕ್ಕಿನಲ್ಲಿ ಹೋಗುತ್ತದೆಂದು ತಿಳಿದಿರುವುದಿಲ್ಲ. ಅವರು ಕುರುಡರಂತೆ ಬೆಂಬಲ ನೀಡುತ್ತಿದ್ದಾರೆ. ಅಮೇರಿಕಾ ದೇಶದ ಪ್ರೊಟೆಸ್ಟೆಂಟ್ ಸರ್ಕಾರವು ಧಾರ್ಮಿಕ ಸ್ವಾತಂತ್ರ ನೀಡಿದೆ. ಆದರೆ ಅದು ತನ್ನ ಸಿದ್ದಾಂತಗಳನ್ನು ಬಲಿಕೊಟ್ಟು ರೋಮನ್ ಕಥೋಲಿಕ್ ಸಭೆಯ ತತ್ವಗಳನ್ನು ಪ್ರಚುರಪಡಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು ಶಾಸನ ಜಾರಿಗೆ ತರುತ್ತದೆ. ಅದು ನಮ್ಮನ್ನು ಮಧ್ಯಯುಗದ ಆತ್ಮೀಕ ಅಂಧಕಾರದ ಸಮಯದಲ್ಲಿ ಕಥೋಲಿಕ್ ಸಭೆಯ ನಡೆಸಿದ ಕ್ರೂರ ದಬ್ಬಾಳಿಕೆಯ ದಿನಗಳು ತಿರುಗಿ ಬರಲಿವೆ ಎಂದು ಭಾನುವಾರಾಚರಣೆ ಕಾನೂನು ಜಾರಿಗೆ ಬರಬೇಕೆಂದು ಒತ್ತಾಯಿಸುವವರಿಗೆ ತಿಳಿದಿರುವುದಿಲ್ಲ (ರಿವ್ಯೂ ಅಂಡ್ ಹೆರಾಲ್ಡ್, ಡಿಸೆಂಬರ್ 11, 1888).ಕೊಕಾಘ 71.4

    ಭಾನುವಾರಾಚರಣೆ ಕಡ್ಡಾಯವಾಗಿ ಜಾರಿಗೆ ಬರಬೇಕೆನ್ನುವವರೂ ಸೇರಿದಂತೆ ಅನೇಕರು ಇದರಿಂದಾಗುವ ಪರಿಣಾಮಗಳ ಬಗ್ಗೆ ಕುರುಡರಾಗಿದ್ದಾರೆ. ತಾವು ಧಾರ್ಮಿಕ ಸ್ವಾತಂತ್ರ್ಯಕ್ಕೆ ನೇರವಾಗಿ ವಿರುದ್ಧವಾಗಿದ್ದೇವೆಂದು ಅವರಿಗೆ ತಿಳಿದಿಲ್ಲ. ಸತ್ಯವೇದದಲ್ಲಿ ತಿಳಿಸಿರುವ ಏಳನೇ ದಿನದ ಸಬ್ಬತ್ತಿನ ಹಕ್ಕೊತ್ತಾಯ ಮತ್ತು ಭಾನುವಾರಾಚರಣೆಯು ಸುಳ್ಳಿನ ಅಸ್ತಿವಾರದ ಮೇಲೆ ನಿಂತಿದೆ ಎಂಬುದನ್ನು ಎಂದಿಗೂ ಅರ್ಥಮಾಡಿಕೊಳ್ಳದವರು ಬಹಳಷ್ಟು ಜನರಿದ್ದಾರೆ.ಕೊಕಾಘ 72.1

    *ಅಮೆರಿಕಾ ದೇಶದ ಸಂವಿಧಾನ ಬದಲಾಯಿಸಿ, ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಪ್ರಯತ್ನ ಪಡುತ್ತಿರುವವರಿಗೆ, ಅದರ ಫಲಿತಾಂಶವೇನೆಂದು ತಿಳಿದಿಲ್ಲ, ಅಮೇರಿಕಾ ದೇಶವು ಇಕ್ಕಟ್ಟು ಎದುರಿಸಲಿದೆ’ ಟೆಸ್ಟಿಮೊನೀಸ್‌ ಸಂಪುಟ 5, ಪುಟಗಳು 711, 753 (1889).ಕೊಕಾಘ 72.2