Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಲೇಖನಗಳು ಮತ್ತು ಮತದಾನದ ಮೂಲಕ ಭಾನುವಾರಾಚರಣೆಯನ್ನು ವಿರೋಧಿಸಬೇಕು

    ತಮ್ಮ ಪ್ರಭಾವದ ಮೂಲಕ ಧಾರ್ಮಿಕ ಸ್ವಾತಂತ್ರವನ್ನು ಹತ್ತಿಕ್ಕುವವರನ್ನು ಹಾಗೂ ಸಬ್ಬತ್ತಿಗೆ ಬದಲಾಗಿ ಭಾನುವಾರಾಚರಣೆ ಕೈಕೊಳ್ಳಲು ತಮ್ಮ ಜೊತೆಗಾರರನ್ನು ಒತ್ತಾಯ ಮಾಡುವಂತ ವಿಧಾನಗಳನ್ನು ಅನುಸರಿಸುವವರನ್ನು ಸಂತೋಷಗೊಳಿಸಲು ನಾವು ಕೆಲಸ ಮಾಡಲಾಗದು. ವಾರದ ಮೊದಲನೆ ದಿನವು ಗೌರವಕ್ಕೆ, ಆರಾಧನೆಗೆ ಅರ್ಹವಾದ ದಿನವಲ್ಲ. ಅದು ಹುಸಿಯಾದ ಅಥವಾ ನಕಲಿ ಸಬ್ಬತ್ತಾಗಿದ್ದು, ಈ ದಿನವನ್ನು ಉನ್ನತವೆಂದು ಪರಿಗಣಿಸುವ ಜನರೊಂದಿಗೆ ದೇವರ ಮಕ್ಕಳು ಸೇರಬಾರದು. ಅವರು ದೇವರ ಆಜ್ಞೆಯನ್ನು ಮೀರಿ, ಆತನ ಸಬ್ಬತ್ತನ್ನು ತುಳಿಯುತ್ತಾರೆ. ಅಂತವರನ್ನು ದೇವರ ಮಕ್ಕಳು ಚುನಾವಣೆಯಲ್ಲಿ ಮತಹಾಕಿ ಗೆಲ್ಲಿಸಬಾರದು ಹಾಗೆ ಮಾಡಿದಲ್ಲಿ, ಅವರು ಅಧಿಕಾರದಲ್ಲಿರುವಾಗ ಮಾಡುವ ಪಾಪ ಕಾರ್ಯಗಳಲ್ಲಿ ನಾವೂ ಸಹ ಪಾಲುಗಾರರಾಗುತ್ತೇವೆ (ಫಂಡಮೆಂಟಲ್ಸ್ ಆಫ್... ಎಜುಕೇಷನ್, ಪುಟ 475 (1899).ಕೊಕಾಘ 72.7

    ಭಾನುವಾರಾಚರಣೆಯು ಕಡ್ಡಾಯವಾಗಿ ಜಾರಿಯಾಗುವಾಗ, ಅದರ ಬಗ್ಗೆ ಎಚ್ಚರಿಕೆ ದೇವರು ಕೊಡುತ್ತಾನೆಂದು ಶ್ರೀಮತಿ ವೈಟಮ್ಮನವರು ಹಾರೈಸುತ್ತಾರೆ. ನಮ್ಮ ಅಡ್ವೆಂಟಿಸ್ಟ್ ಸಭೆಯು ಜಗತ್ತಿನ ವಿವಿಧ ಭಾಷೆಗಳಲ್ಲಿ ಪ್ರಕಟಿಸುತ್ತಿರುವ ಪತ್ರಿಕೆಗಳಲ್ಲಿ ದೇವರಾಜ್ಞೆಯು ಯುಗಯುಗಾಂತರಗಳವರೆಗೆ ಇರುತ್ತವೆಂಬ ವಿಷಯವನ್ನು ವಿಶೇಷವಾಗಿ ಪ್ರಕಟಿಸುವುದು ಉತ್ತಮವಾಗಿದೆ. ಈ ಶಾಸನವು ಸರ್ಕಾರದಿಂದ ಅನುಮೋದನೆ ಪಡೆಯದಂತೆ ನಾವು ನಮ್ಮೆಲ್ಲಾ ಪ್ರಯತ್ನಗಳನ್ನು ಮಾಡಬೇಕು (ಕೌನ್ಸೆಲ್ಸ್ ಟು ರೈಟರ್, ಪುಟಗಳು 97, 98 1906).ಕೊಕಾಘ 73.1