Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಲೋಕದಲ್ಲಿ ನಡೆಯುವ ಸೂಚಕ ಕಾರ್ಯಗಳು

    “ಇದಲ್ಲದೆ ಸೂರ್ಯಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವುದು’ ಎಂದು ಕ್ರಿಸ್ತನು ಹೇಳಿದ್ದಾನೆ (ಲೂಕ 21:25; ಮತ್ತಾಯ 24:29; ಮಾರ್ಕ 13:24-26: ಪ್ರಕಟನೆ 6:12-17). ಆತನ ಬರೋಣದ ಈ ಮುನ್ಸೂಚನೆಗಳನ್ನು ನೋಡುವವರು ಈ ಘಟನೆಯು ಹತ್ತಿರದಲ್ಲಿಯೇ ಇದೆ, ಬಾಗಿಲಲ್ಲಿಯೇ ಇದೆ’ ಎಂದು ತಿಳುಕೊಳ್ಳುವರು (ಮತ್ತಾಯ 24:33: ಗ್ರೇಟ್ ಕಾಂಟ್ರೊವರ್ಸಿ ಪುಟಗಳು 37, 38 (1911).ಕೊಕಾಘ 11.1

    ದೇಶದೇಶಗಳ ನಡುವೆ ಅಶಾಂತಿಯಿದೆ. ದಿಗ್ಭ್ರಮೆ ಹುಟ್ಟಿಸುವ ಸಮಯ ಬರಲಿದೆ. ಲೋಕದ ಮೇಲೆ ಬರಲಿರುವ ಘಟನೆಗಳ ಬಗ್ಗೆ ಜನರ ಹೃದಯಗಳಲ್ಲಿ ಭಯಹುಟ್ಟುತ್ತದೆ. ಆದರೆ ದೇವರಲ್ಲಿ ವಿಶ್ವಾಸವಿಟ್ಟಿರುವವರು ಎಂತಹ ಚಂಡಮಾರುತದ ನಡುವೆಯೂ ‘ಭಯಪಡಬೇಡಿರಿ: ನಾನೇ ಅಲ್ಲವೇ?’ ಎಂಬ ಕ್ರಿಸ್ತನ ಸ್ವರವನ್ನು ಕೇಳುವರು (ಲೂಕ 24:38: ಸೈನ್ಸ್ ಆಫ್ ದಿ ಟೈಮ್ಸ್ ಅಕ್ಟೋಬರ್ 9, 1901).ಕೊಕಾಘ 11.2

    ಆಶ್ಚರ್ಯಕರವಾದ ಹಾಗೂ ಮಹತ್ವಪೂರ್ಣವಾದ ಇತಿಹಾಸವು ಪರಲೋಕದ ಪುಸ್ತಕಗಳಲ್ಲಿ ಬರೆಯಲ್ಪಡುತ್ತಿವೆ. ದೇವರ ಮಹಾದಿನವು ಬರುವುದಕ್ಕೆ ಮೊದಲು ಈ ಘಟನೆಗಳು ನಡೆಯಲಿದೆ. ಈ ಜಗತ್ತಿನಲ್ಲಿರುವ ಎಲ್ಲವೂ ಅಶಾಂತಿಯ ಸ್ಥಿತಿಯಲ್ಲಿರುತ್ತವೆ (1908).ಕೊಕಾಘ 11.3

    Larger font
    Smaller font
    Copy
    Print
    Contents