Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾನುವಾರಾಚರಣೆಯ ಶಾಸನವು ಕಥೋಲಿಕ್ ಸಭೆಯನ್ನು ಗೌರವಿಸುತ್ತದೆ

    ಅಮೇರಿಕಾ ದೇಶದ ಪ್ರಮುಖವಾದ ಪ್ರೊಟೆಸ್ಟೆಂಟ್ ಸಭೆಗಳು ತಾವು ವಿಶ್ವಾಸವಿಟ್ಟಿರುವ ಸತ್ಯವೇದದ ಸಮಾನ ಸಿದ್ದಾಂತಗಳ ಆಧಾರದಲ್ಲಿ ಒಂದಾದಾಗ, ತಮ್ಮ ಸಂಸ್ಥೆಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅಮೇರಿಕಾ ಸರ್ಕಾರವನ್ನು ಭಾನುವಾರಾಚರಣೆ ಜಾರಿಗೆ ತರುವಂತೆ ಪ್ರಭಾವ ಬೀರುವವು. ಆಗ ಪ್ರೊಟೆಸ್ಟೆಂಟ್ ದೇಶವಾದ ಅಮೇರಿಕಾ ರೋಮನ್ ಕಥೋಲಿಕ್ ಸಭೆಯು ಘನಕ್ಕಾಗಿ ವಿಗ್ರಹ ಮಾಡಿಸಿಕೊಳ್ಳುತ್ತದೆ (ಪ್ರಕಟನೆ 13:140). ಆಗ ಇದನ್ನು ವಿರೋಧಿಸುವವರಿಗೆ ಅನಿವಾರ್ಯವಾಗಿ ಶಿಕ್ಷೆ ವಿಧಿಸಲಾಗುತ್ತದೆ. ಭಾನುವಾರದಲ್ಲಿ ಕಡ್ಡಾಯವಾಗಿ ಆರಾಧನೆ ಮಾಡಬೇಕೆಂದು ಪ್ರೊಟೆಸ್ಟೆಂಟ್ ಸಭೆಗಳು ಕಾನೂನು ಜಾರಿ ಮಾಡಲು ಒತ್ತಾಯಿಸುವುದು, ರೋಮನ್ ಕಥೋಲಿಕ್ ಸಭೆಯನ್ನು ಆರಾಧಿಸಬೇಕೆಂದು ಬಲಾತ್ಕಾರ ಮಾಡಿದಂತಾಗುತ್ತದೆ.ಕೊಕಾಘ 74.6

    ಪ್ರಜಾಪ್ರಭುತ್ವ ಜಾತ್ಯಾತೀತ ಸರ್ಕಾರವು ಒಂದು ಧಾರ್ಮಿಕ ಕರ್ತವ್ಯವನ್ನು ಮಾಡಬೇಕೆಂದು ಒತ್ತಾಯ ಮಾಡುವ ಕಾರ್ಯದಿಂದ, ಪ್ರೊಟೆಸ್ಟೆಂಟ್ ಸಭೆಗಳು ಮೃಗದ ಘನಕ್ಕಾಗಿ ವಿಗ್ರಹ ಮಾಡಿಕೊಂಡಂತಾಗುತ್ತದೆ (ಪ್ರಕಟನೆ 13:14). ಆದುದರಿಂದ ಅಮೇರಿಕಾ ದೇಶದಲ್ಲಿ ಭಾನುವಾರಾಚರಣೆಯನ್ನು ಬಲವಂತವಾಗಿ ಜಾರಿಗೆ ತರಬೇಕೆಂಬುದು, ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ಒತ್ತಾಯಪೂರ್ವಕವಾಗಿ ನಮಸ್ಕರಿಸಿದಂತಾಗುತ್ತದೆ (ರೇಟ್ ಕಾಂಟ್ರೊವರ್ಸಿ, ಪುಟಗಳು 445, 448-449, 1911).ಕೊಕಾಘ 75.1

    ಪ್ರೊಟೆಸ್ಟೆಂಟರು ರೋಮನ್ ಕಥೋಲಿಕ್ ಸಭೆಯೊಂದಿಗೆ ಸ್ನೇಹಹಸ್ತ ಚಾಚಿದಾಗ ಹಾಗೂ ಪ್ರೇತಾತ್ಮವಾದದೊಂದಿಗೆ (Spiritualism, ಸತ್ತವರ ಆತ್ಮಗಳು ಅರ್ಹ ಮಧ್ಯವರ್ತಿಗಳ ಮೂಲಕ ಬದುಕಿರುವ ಸಂಬಂಧಿಗಳೊಡನೆ ಮಾತಾಡುವುದಲ್ಲದೆ, ಅವರಿಗೆ ಕಾಣಿಸಿಕೊಳ್ಳುತ್ತವೆಂಬ ನಂಬಿಕೆ). ಕೈಜೋಡಿಸಿದಾಗ - ಈ ಮೂರುಶಕ್ತಿಗಳು ಒಂದಾಗುತ್ತವೆ. ಇವುಗಳ ಪ್ರಭಾವದಿಂದ ಅಮೆರಿಕಾ ದೇಶವು ಸಂವಿಧಾನದಲ್ಲಿ ಬರೆದಿರುವ ಪ್ರೊಟೆಸ್ಟೆಂಟ್ ಧರ್ಮ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವೆಂಬ ಪ್ರಮುಖ ತತ್ವಗಳನ್ನು ನಿರಾಕರಿಸುತ್ತದೆ. ಮತ್ತು ರೋಮನ್ ಕಥೋಲಿಕ್ ಸಭೆಯ ಸುಳ್ಳು ತತ್ವಗಳನ್ನು ಪ್ರಚುರಪಡಿಸುವ ಶಾಸನವನ್ನು ಸಂವಿಧಾನದ ಮೂಲಕ ಜಾರಿ ಮಾಡುತ್ತದೆ. ಆಗ ಸೈತಾನನು ತನ್ನ ಅದ್ಭುತ ಕಾರ್ಯಗಳನ್ನು ಮಾಡುವ ಸಮಯ ಬಂದಿದೆ ಮತ್ತು ಕ್ರಿಸ್ತನ ಬರೋಣವು ಸಮೀಪವಾಯಿತೆಂದು ನಾವು ತಿಳಿದುಕೊಳ್ಳಬಹುದು (ಟೆಸ್ಟಿಮೊನೀಸ್, ಸಂಪುಟ 5, ಪುಟ 445, 1885). ಕೊಕಾಘ 75.2