Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ವಿಶ್ವವ್ಯಾಪಿ ಭಾನುವಾರಾಚರಣೆ ಶಾಸನ

    ಇತಿಹಾಸವು ಪುನರಾವರ್ತನೆಗೊಳ್ಳುವುದು, ತಪ್ಪಾದ ಧರ್ಮವು ಉನ್ನತ ಸ್ಥಾನಕ್ಕೇರಿಸಲ್ಪಡುವುದು. ಯಾವುದೇ ಪವಿತ್ರತೆ ಹೊಂದಿರದ, ಸಾಮಾನ್ಯವಾದ ಕೆಲಸದ ದಿನವಾದ ವಾರದ ಮೊದಲನೆಯ ದಿನವಾದ ಭಾನುವಾರವು ಬಾಬೆಲಿನಲ್ಲಿ ನೆಬೂಕನ್ನೇಚರನು ಮಾಡಿಸಿದ್ದ ಬಂಗಾರದ ಪ್ರತಿಮೆಯಂತೆ ಸ್ಥಾಪಿಸಲ್ಪಡುವುದು. ಜಗತ್ತಿನ ಎಲ್ಲಾ ದೇಶಗಳು ಸಕಲ ಕುಲ, ಜನಾಂಗ, ಪ್ರಜೆಗಳು ನಿಜವಲ್ಲದ ಈ ಸಬ್ಬತ್ತನ್ನು ಆರಾಧಿಸುವಂತೆ ಆಜ್ಞೆಕೊಡಲ್ಪಡುವುದು. ಈ ದಿನವನ್ನು ಆರಾಧಿಸಬೇಕೆಂಬ ಶಾಸನವು ಜಗತ್ತಿನಾದ್ಯಂತ ಜಾರಿಯಾಗುವುದು (ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 976, 1897). ಕೊಕಾಘ 77.3

    ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವ ಅಮೇರಿಕಾ ದೇಶವು ಸುಳ್ಳಾದ ಭಾನುವಾರದ ಸಬ್ಬತ್ತನ್ನು ಗೌರವಿಸಬೇಕೆಂದು ಜನರ ಮನಸ್ಸಾಕ್ಷಿಯನ್ನು ಬಲಾತ್ಕಾರ ಪಡಿಸುತ್ತದೆ. ಆಗ ಜಗತ್ತಿನಾದ್ಯಂತ ಇರುವ ಎಲ್ಲಾ ದೇಶಗಳೂ ಅದರ ಉದಾಹರಣೆಯನ್ನು ಅನುಸರಿಸುತ್ತವೆ. ಕ್ರಿಸ್ತನ ಮತ್ತು ಸೈತಾನನ ನಡುವಣ ಕೊನೆಯ ಮಹಾಸಂಘರ್ಷದಲ್ಲಿ ಸಬ್ಬತ್ತಿನ ಪ್ರಶ್ನೆಯು ಪ್ರಮುಖ ವಿಷಯವಾಗಿದ್ದು, ಲೋಕದ ಎಲ್ಲಾ ದೇಶಗಳೂ ಅದರಲ್ಲಿ ಭಾಗವಹಿಸುತ್ತವೆ (ಟೆಸ್ಟಿಮೋನೀಸ್, ಸಂಪುಟ 6, ಪುಟಗಳು 18, 352, 1900).ಕೊಕಾಘ 77.4

    ವಿದೇಶಗಳು ಅಮೇರಿಕಾ ಮಾದರಿಯನ್ನು ಅನುಸರಿಸುತ್ತವೆ. ಅದು ಮುಂಚೂಣಿಯಲ್ಲಿದ್ದರೂ, ಜಗತ್ತಿನ ಎಲ್ಲಾ ಭಾಗಗಳಲ್ಲಿರುವ ಅಡ್ವೆಂಟಿಸ್ಪರ ಮೇಲೆ ಅದೇ ರೀತಿಯಾದ ಇಕ್ಕಟ್ಟು ಬರುವುದು (ಪುಟ 395). ಈ ಮಹಾಹೋರಾಟದ ನಾಟಕದಲ್ಲಿ ನಿಜವಾದ ಸಬ್ಬತ್ತಿಗೆ ಬದಲಾಗಿ ಸುಳ್ಳಾದ ಸಬ್ಬತನ್ನು ತರುವುದು ಕೊನೆಯ ಅಂಕವಾಗಿದೆ. ಭಾನುವಾರದ ಈ ಸುಳ್ಳಾದ ಸಬ್ಬತ್ತು ವಿಶ್ವವ್ಯಾಪ್ತಿಯಾದಾಗ, ದೇವರು ತನ್ನನ್ನು ಪ್ರಕಟ ಪಡಿಸಿಕೊಳ್ಳುವನು. ಮನುಷ್ಯರು ಮಾಡಿದ ನಿಯಮಗಳು ದೇವರಾಜ್ಞೆಗಳಿಗಿಂತ ಉನ್ನತ ಸ್ಥಾನಕ್ಕೇರಿಸಲ್ಪಟ್ಟಾಗ, ಜಗತ್ತಿನ ದೇಶಗಳು ಜನರೆಲ್ಲರೂ ವಾರದ ಮೊದಲನೆ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದು ಒತ್ತಾಯಿಸಿದಾಗ, ದೇವರು ಕಾರ್ಯ ಮಾಡುವ ಸಮಯ ಬಂತೆಂದು ತಿಳಿದುಕೊಳ್ಳಬೇಕು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ, ಸಂಪುಟ 71, ಪುಟ 980, 1901).ಕೊಕಾಘ 77.5

    ದೇವರ ಆಜ್ಞೆಗಳಿಗೆ ಬದಲಾಗಿ ಮನುಷ್ಯರ ಆಜ್ಞೆಗಳು ಹಾಗೂ ಸಬ್ಬತ್ತಿಗೆ ಬದಲಾಗಿ ಭಾನುವಾರವು ಉನ್ನತ ಸ್ಥಾನಕ್ಕೇರಿಸಲ್ಪಟ್ಟಾಗ, ದೇವರು ಲೋಕವನ್ನು ಭಯಂಕರವಾಗಿ ಶಿಕ್ಷಿಸಲು ತನ್ನ ಮಹಿಮೆ ಪ್ರತಾಪಗಳನ್ನು ತೋರಿಸುವನು (ಟೆಸ್ಟಿಮನೀಸ್, ಸಂಪುಟ 7, ಪುಟ 141, 1902).ಕೊಕಾಘ 77.6

    ಸಮಸ್ತ ಲೋಕವು ಭಾನುವಾರಾಚರಣೆಯ ಶಾಸನವನ್ನು ಬೆಂಬಲಿಸುವುದುಕೊಕಾಘ 77.7

    ತಮ್ಮಲ್ಲಿ ಸತ್ಯವಿದೆ, ಅದ್ಭುತಗಳು ನಡೆಯುತ್ತವೆ. ಪರಲೋಕದ ದೇವದೂತರು ತಮ್ಮೊಂದಿಗೆ ಮಾತಾಡಿದ್ದಾರೆ. ನಡೆದಾಡಿದ್ದಾರೆ ಹಾಗೂ ಅದ್ಭುತವಾದ ಪವಾಡಗಳು, ಸೂಚಕ ಕಾರ್ಯಗಳು ತಮ್ಮಲ್ಲಿ ನಡೆಯುತ್ತಿವೆ ಮತ್ತು ಇಂತಹ ಸಾವಿರ ವರ್ಷಗಳ ತಾತ್ಕಾಲಿಕ ಆಳಿಕೆಯನ್ನು ತಾವು ಬಹಳ ಕಾಲದಿಂದ ನಿರೀಕ್ಷಿಸಿದ್ದೇವೆಂದು ದುಷ್ಟರು ಹೇಳಿಕೊಳ್ಳುತ್ತಾರೆ. ಲೋಕವೆಲ್ಲವೂ ಭಾನುವಾರಾಚರಣೆಯ ಶಾಸನವನ್ನು ಜಾರಿಗೆ ತಂದು ಸಾಮರಸ್ಯ ಹೊಂದಿರುತ್ತದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟಗಳು 427, 428, 1884).ಕೊಕಾಘ 77.8

    ಕ್ರೈಸ್ತ ವಿರೋಧಿ ಶಕ್ತಿಯಾದ ರೋಮನ್ ಕಥೋಲಿಕ್ ಸಭೆಯು ಜಾರಿಗೆ ತಂದ ಭಾನುವಾರಾಚರಣೆಗೆ ಗೌರವ ಕೊಡದ ಮತ್ತು ಅದಕ್ಕೆ ಅಡ್ಡಬೀಳದ ಸೆವೆಂಟ್ ಡೇ ಅಡ್ವೆಂಟಿಸ್ಪರ ವಿರುದ್ಧವಾಗಿ ಸಮಸ್ತ ಲೋಕವು ಕೋಪದಿಂದ ಕೆರಳಿ ವೈರತ್ವ ಸಾಧಿಸುತ್ತದೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್ 37, 1893).ಕೊಕಾಘ 78.1

    ದೇವರಾಜ್ಞೆಗಳನ್ನು ಕಾಲ ಕೆಳಗೆ ತುಳಿದು ಹಾಕಿದವರು ತಮ್ಮದೇ ಆದ ಶಾಸನಗಳನ್ನು ಜಾರಿಗೆ ತಂದು, ಜನರು ಅದನ್ನು ಒಪ್ಪಿ ಅನುಸರಿಸುವಂತೆ ಒತ್ತಾಯಿಸುತ್ತಾರೆ. ತಾವು ಏನು ಮಾಡಬೇಕೆಂಬ ಬಗ್ಗೆ ಮನುಷ್ಯರು ಯೋಜನೆಹಾಕಿ, ಪಿತೂರಿಮಾಡಿ ತಮ್ಮೊಳಗೆ ಸಮಾಲೋಚನೆ ನಡೆಸುತ್ತಾರೆ. ಜಗತ್ತೇ ಭಾನುವಾರವನ್ನು ಪರಿಶುದ್ಧ ದಿನವನ್ನಾಗಿ ಆಚರಿಸುತ್ತಿದೆ. ಆದರೆ ಸಂಖ್ಯೆಯಲ್ಲಿ ಬಹಳ ಕಡಿಮೆ ಇರುವ ಈ ಸೆವೆಂತ್ ಡೇ ಅಡ್ವೆಂಟಿಸ್ಟರು, ದೇಶದ ಕಾನೂನಿನ ಅನುಸಾರವಾಗಿ ಅದಕೆ ಯಾಕೆ ವಿಧೇಯರಾಗಿ ಭಾನುವಾರ ಆಚರಿಸುತ್ತಿಲ್ಲ? ಎಂದು ಪ್ರಶ್ನಿಸುವರು (ಮ್ಯಾನುಸ್ಕ್ರಿಪ್ಟ್ 163, 1897).ಕೊಕಾಘ 78.2