Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-10
    ಅಲ್ಪಕಾಲದ ಸಂಕಟದ ಸಮಯ

    ಕೃಪೆಯ ಕಾಲ ಮುಗಿಯುವ ಮೊದಲು ಬರುವ ಸಂಕಟದ ಸಮಯ

    ಶ್ರೀಮತಿ ವೈಟಮ್ಮನವರು ‘ಅರ್ಲಿ ರೈಟಿಂಗ್ಸ್’ ಪುಸ್ತಕದ 85, 86ನೇ ಪುಟಗಳಲ್ಲಿ ಹೀಗೆ ತಿಳಿಸುತ್ತಾರೆ : `ಸಂಕಟದ ಸಮಯ ಆರಂಭವಾಗುವಾಗ, ನಾವೆಲ್ಲರೂ ಸಬ್ಬತ್ತಿನ ಬಗ್ಗೆ ವಿವರವಾಗಿ ತಿಳಿಸಲು ಹೋದಾಗ, ಪವಿತ್ರಾತ್ಮಭರಿತರಾಗಿದ್ದೆವು.ಕೊಕಾಘ 82.1

    1847ನೇ ಇಸವಿಯಲ್ಲಿ ಶ್ರೀಮತಿ ವೈಟಮ್ಮನವರು ಮೇಲಿನ ಹೇಳಿಕೆ ನೀಡಿದ್ದರು. ಆಗ ಕೆಲವೇ ಮಂದಿ ಸಬ್ಬತ್ತನ್ನು ಆಚರಿಸುತ್ತಿದ್ದರು. ಅವರಲ್ಲಿಯೂ ಸ್ವಲ್ಪ ಮಂದಿ ಮಾತ್ರ ಸಬ್ಬತ್ತನ್ನು ಕೈಕೊಂಡು ನಡೆಯುವುದು ದೇವಜನರು ಮತ್ತು ಅವಿಶ್ವಾಸಿಗಳ ನಡುವೆ ವ್ಯತ್ಯಾಸ ಉಂಟುಮಾಡುವ ಪ್ರಮುಖ ಗುರುತಾಗಿದೆ ಎಂದು ತಿಳಿದಿದ್ದರು. ಶ್ರೀಮತಿ ವೈಟಮ್ಮನವರ ಈ ಅಭಿಪ್ರಾಯದ ನೆರವೇರುವಿಕೆಯು ಆರಂಭವಾಗುತ್ತಿರುವುದನ್ನು ನಾವು ಕಾಣಬಹುದು. ಸಂಕಟದ ಸಮಯದ ಆರಂಭವೆಂದು ಇಲ್ಲಿ ತಿಳಿಸಲಟ್ಟಿರುವುದು ಕೊನೆಯ ಏಳು ಉಪದವಗಳು ಬೀಳುವ ಕಾಲವಲ್ಲ, ಬದಲಾಗಿ ಇವು ಬೀಳುವುದಕ್ಕೆ ಮೊದಲು ಕ್ರಿಸ್ತನು ಇನ್ನೂ ಸಹ ದೇವದರ್ಶನದ ಗುಡಾರದಲ್ಲಿ ಸೇವೆ ಮಾಡುತ್ತಿರುವಾಗ ಕ್ರೈಸ್ತರಿಗೆ ಬರುವ ಅಲ್ಪಕಾಲದ ಸಂಕಟವನ್ನು ಇದು ಸೂಚಿಸುತ್ತದೆ. ರಕ್ಷಣಾ ಕಾರ್ಯವು ಮುಗಿಯುವಾಗ, ಲೋಕಕ್ಕೆ ಕಷ್ಟಸಂಕಟ ಉಂಟಾಗುವುದು ಮತ್ತು ಜನಾಂಗಗಳು ಕೋಪಗೊಳ್ಳುವವು. ಆದಾಗ್ಯೂ ಮೂರನೇ ದೂತನ ಸಂದೇಶವು ಸಾರಲ್ಪಡುವುದು ಮುಗಿಯುವ ತನಕ ಸಂಕಟದ ಸಮಯವು ಬರುವುದಿಲ್ಲ.ಕೊಕಾಘ 82.2