Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಡ್ವೆಂಟಿಸ್ಟರನ್ನು ತಿರಸ್ಕಾರದಿಂದ ಕಾಣಲಾಗುವುದು

    ಯುಗ ಯುಗಾಂತರಗಳಿಂದ ದೇವರಲ್ಲಿ ನಂಬಿಗಸ್ತರಾದವರ ವಿರುದ್ಧವಾಗಿ ಪಿತೂರಿ ಮಾಡಿದ ಅದೇ ಸೈತಾನನು, ದೇವರಿಗೆ ಭಯಪಟ್ಟು ಆತನ ಆಜ್ಞೆಗಳಿಗೆ ವಿಧೇಯರಾಗುವವರನ್ನು ಈ ಲೋಕದಿಂದ ನಾಶಮಾಡಲು ಇನ್ನೂ ಸಹ ಪ್ರಯತ್ನಿಸುತ್ತಿದ್ದಾನೆ. ಐಶ್ವರ್ಯ, ಮೇಧಾವಿತನ, ಶಿಕ್ಷಣವು ಒಂದಾಗಿ ಅವರನ್ನು ತಿರಸ್ಕಾರದಿಂದ ಕಾಣುವುದು. ಹಿಂಸೆ ನೀಡುವ ಅಧಿಕಾರಿಗಳು, ಬೋಧಕರು ಹಾಗೂ ಸಾಮಾನ್ಯ ಸಭಾ ಸದಸ್ಯರು ದೇವಜನರಿಗೆ ವಿರುದ್ಧವಾಗಿ ಸಂಚು ಮಾಡುವರು. ಲೇಖನಗಳು, ಭಾಷಣಗಳು, ಭಯಪಡಿಸುವುದು ಹಾಗೂ ಅಪಹಾಸ್ಯ ಮಾಡುವುದರ ಮೂಲಕ ಅವರ ನಂಬಿಕೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುವರು (ಟೆಸ್ಟಿಮೊನೀಸ್ ಸಂಪುಟ 5, ಪುಟ 450, 1885).ಕೊಕಾಘ 83.5

    ಸತ್ಯವೇದದ ಸತ್ಯಗಳನ್ನು ಅಡ್ವೆಂಟಿಸ್ಪರಾದ ನಾವು ಸಮರ್ಥಿಸುವ ಕಾರಣದಿಂದ ನಮ್ಮನ್ನು ದ್ರೋಹಿಗಳೆಂದು ತಿಳಿಯುವ ಕಾಲವು ಬರಲಿದೆ (ಟೆಸ್ಟಿಮೊನೀಸ್‌ ಸಂಪುಟ 6, ಪುಟ 394, 1900), ಸತ್ಯವೇದದ ಸಬ್ಬತ್ತನ್ನು ಗೌರವಿಸುವವರನ್ನು ಕಾನೂನು ಮತ್ತು ಸುವ್ಯವಸ್ಥೆಯ ವಿರೋಧಿಗಳು, ಸಮಾಜದ ನೈತಿಕತೆಯನ್ನು ಮೀರುವವರೂ, ಅರಾಜಕತೆ ಮತ್ತು ಮತಭ್ರಷ್ಟತೆ ಉಂಟುಮಾಡುವವರು ಹಾಗೂ ಲೋಕದ ಮೇಲೆ ದೇವರ ದಂಡನೆಯನ್ನು ತರುವವರೂ ಆಗಿದ್ದಾರೆಂದು ಬಹಿರಂಗವಾಗಿ ಆಪಾದನೆ ಹೊರಿಸಲಾಗುವುದು. ಆತ್ಮ ಸಾಕ್ಷಿಯಂತೆ ನಡೆಯುವ ಅವರ ನಡಳಿಕೆಯನ್ನು ಹಠಮಾರಿತನ ಮತ್ತು ಅಧಿಕಾರವನ್ನು ತಿರಸ್ಕರಿಸುವಿಕೆ ಎಂದು ಎಣಿಸಲಾಗುವುದು ಅವರು ಸರ್ಕಾರಕ್ಕೆ ನಿಷ್ಠೆಯಿಲ್ಲದವರೆಂಬ ಆಪಾದನೆಯೂ ಬರುವುದು (ಗ್ರೇಟ್ ಕಾಂಟ್ರೊವರ್ಸಿ, 592, 1911).ಕೊಕಾಘ 84.1

    ಅಂತಹ ಕೆಟ್ಟದಿನಗಳಲ್ಲಿ ತಮ್ಮ ಮನಸ್ಸಾಕ್ಷಿಗೆ ತಕ್ಕಂತೆ ದೇವರನ್ನೂ ನಿರ್ಭೀತಿಯಿಂದ ಆರಾಧಿಸುವವರು ಧೈರ್ಯ, ದೃಢತೆ ಮತ್ತು ದೇವರು ಹಾಗೂ ಆತನ ವಾಕ್ಯದ ಜ್ಞಾನ ಹೊಂದಿರಬೇಕು. ದೇವರಿಗೆ ಸತ್ಯವಾಗಿ ನಡಕೊಳ್ಳುವವರು ಹಿಂಸೆಗೊಳಗಾಗುವರು, ಅವರ ಉದ್ದೇಶಗಳನ್ನು ಖಂಡಿಸಲಾಗುವುದು, ಅವರ ಅತ್ಯುತ್ತಮ ಪ್ರಯತ್ನಗಳನ್ನು ತಪ್ಪಾಗಿ ಅನುಮಾನಿಸಲಾಗುವುದು ಹಾಗೂ ಅವರ ಹೆಸರನ್ನು ಕೆಟ್ಟದೆಂದು ಬಹಿಷ್ಕರಿಸುವರು (ಆಕ್ಟ್ ಆಫ್ ದಿ ಅಪೊಸ್ತಲ್, 431, 432, 1911)ಕೊಕಾಘ 84.2

    Larger font
    Smaller font
    Copy
    Print
    Contents