Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಲೋಕದ ಎಲ್ಲಾ ಸಹಾಯವು ನಿಂತುಹೋಗುವವು

    ಬಚ್ಚಿಟ್ಟಿರುವ ಎಲ್ಲಾ ಸಂಪತ್ತು ಶೀಘ್ರದಲ್ಲಿಯೇ ನಿರರ್ಥಕವಾಗುವುದು. ಮೃಗದ ಗುರುತನ್ನು ಹೊಂದದಿರುವವರು ಮಾರಲೂ ಬಾರದು ಅಥವಾ ಕೊಳ್ಳಲೂ ಬಾರದು ಎಂಬ ಆಜ್ಞೆಯು ಜಾರಿಗೆ ಬಂದಾಗ, ಯಾವ ಮಾರ್ಗಗಳೂ ಪ್ರಯೋಜನಕ್ಕೆ ಬರುವುದಿಲ್ಲ. ನಮ್ಮೆಲ್ಲಾ ಶಕ್ತಿ ಉಪಯೋಗಿಸಿ ಜಗತ್ತಿಗೆ ಎಚ್ಚರಿಕೆ ನೀಡಬೇಕೆಂದು ದೇವರು ಈಗ ನಮ್ಮನ್ನು ಕರೆಯುತ್ತಿದ್ದಾನೆ (ರಿವ್ಯೂ ಅಂಡ್ ಹೆರಾಲ್ಡ್, ಮಾರ್ಚ್ 21, 1879).ಕೊಕಾಘ 85.1

    ಅತಿ ಶೀಘ್ರದಲ್ಲಿಯೇ ದೇವರಾಜ್ಞೆ ಕೈಕೊಳ್ಳುವವರು ಯಾವ ಬೆಲೆಗೆ ಏನೂ ಮಾರಲಾಗದ ಸಮಯ ಬರಲಿದೆ. ಮೃಗದ ಗುರುತು ಹೊಂದಿರುವವರನ್ನು ಬಿಟ್ಟು ಬೇರೆ ಯಾರೂ ಸಹ ಏನನ್ನೂ ಮಾರಬಾರದು ಅಥವಾ ಕೊಳ್ಳಬಾರದೆಂಬ ನಿಷೇಧಾಜ್ಞೆ ಬರಲಿದೆ. 1880 ರ ಸಮಯದಲ್ಲಿ ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈ ಆಜ್ಞೆ ಹೆಚ್ಚು ಕಡಿಮೆ ಜಾರಿಗೆ ಬಂದಿತ್ತು. ಆದರೆ ಇದು ನಾಲ್ಕು ದಿಕ್ಕಿನ ಗಾಳಿಗಳು ಬೀಸುವ ಅಂದರೆ ಹಿಂಸೆಯ ಆರಂಭ ಮಾತ್ರವಾಗಿತ್ತು. ಆದರೆ ದೇವರು ಇನ್ನೂ ಸಹ ಆ ಗಾಳಿಯನ್ನು ಹಿಡಿದುಕೊಂಡಿದ್ದಾನೆ. ನಾವು ಇನ್ನೂ ಸಿದ್ದರಾಗಿಲ್ಲ. ಮಾಡಬೇಕಾದ ಕಾರ್ಯ ಇನ್ನೂ ಇದೆ. ಅದು ಮುಗಿದ ನಂತರ ದೇವದೂತರು ತಾವು ಹಿಡಿದುಕೊಂಡಿರುವ ಚತುರ್ದಿಕ್ಕುಗಳ ಗಾಳಿಗಳನ್ನು ಬಿಡಬೇಕೆಂದು ಆಜ್ಞೆಯಾಗುವುದು (ಪ್ರಕಟನೆ 7:12) ಆಗ ಭೂಮಿಯ ನಾಲ್ಕು ದಿಕ್ಕುಗಳಲ್ಲಿ ಗಾಳಿ ಬೀಸುವುದು (ಟೆಸ್ಟಿಮೊನೀಸ್, ಸಂಪುಟ 5, ಪುಟ 152, 1882).ಕೊಕಾಘ 85.2

    ಸೈತಾನನೊಂದಿಗಿನ ಮಹಾಹೋರಾಟದ ಕೊನೆಯ ಘಟ್ಟದಲ್ಲಿ ದೇವರಿಗೆ ನಿಷ್ಠರಾಗಿರುವವರಿಗೆ ಲೋಕದಲ್ಲಿ ಎಲ್ಲಾ ರೀತಿಯ ಸಹಾಯಗಳೂ ನಿಂತುಹೋಗುವವು, ಲೋಕದ ಅಧಿಕಾರಕ್ಕೆ ವಿಧೇಯರಾಗದೆ, ಅವರು ದೇವರಾಜ್ಞೆಗಳಿಗೆ ಮಾತ್ರ ವಿಧೇಯರಾಗುವುದರಿಂದ ಅವರಿಗೆ ಏನನ್ನೂ ಮಾರಲಾಗದು ಅಥವಾ ಕೊಂಡುಕೊಳ್ಳಲಾಗದು. (ದಿ ಡಿಸೈರ್ ಆಫ್ ಏಜಸ್, ಪುಟಗಳು 121, 122, 1898). ‘ಇವರು ಅನ್ನಾಹಾರ, ಬಟ್ಟೆಗಳು ಕೊರತೆಯುಂಟಾಗುವುದೆಂಬ ಭಯದಿಂದ, ದೇವರಾಜ್ಜೆಗಳನ್ನು ಉಲ್ಲಂಘಿಸುವವರು. ಆಗ ಈ ಲೋಕವು ಸಂಪೂರ್ಣವಾಗಿ ನನ್ನ ಪರಮಾಧಿಕಾರದಲ್ಲಿರುವುದು’ ಎಂದು ಸೈತಾನನು ಹೇಳುವನು (ಪ್ರಾಫೆಟ್ಸ್ ಅಂಡ್ ಕಿಂಗ್ಸ್, ಪುಟಗಳು 183, 184, 1914).ಕೊಕಾಘ 85.3