Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯಲ್ಲಿಯೂ

    ಹೊರಗಿನವರಿಗಿಂತ ಒಳಗಿನವರಿಗೆ ನಾವು ಹೆಚ್ಚಾಗಿ ಭಯಪಡಬೇಕು. ಬಲಹೊಂದಿಕೊಳ್ಳಲು ಮತ್ತು ಯಶಸ್ಸು ಪಡೆಯಲು ಬರುವ ಅಡೆತಡೆಗಳು ಲೋಕಕ್ಕಿಂತಲೂ ಹೆಚ್ಚಾಗಿ ಸಭೆಯಿಂದಲೇ ಅಧಿಕವಾಗಿ ಉಂಟಾಗುತ್ತದೆ. ದೇವರಾಜ್ಞೆಗಳನ್ನು ಕೈಕೊಂಡು, ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವವರು ತಮ್ಮ ದೈವಭಕ್ತಿಯ ಮಾದರಿ, ಪಭಾವದಿಂದ ಹಾಗೂ ದೃಢವಾದ ನಿಷ್ಠೆಯುಳ್ಳ ಜೀವನದಿಂದ ಇತರೆಲ್ಲರಿಗಿಂತಲೂ ತಮ್ಮ ನಂಬಿಕೆಗೆ ತಕ್ಕಂತೆ ಗೌರವದಿಂದ ಜೀವಿಸುತ್ತಾನೆಂದು ಅನ್ಯಜನರು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. ಆದರೆ ಸತ್ಯವನ್ನು ಉತ್ತೇಜಿಸುತ್ತೇವೆಂದು ಹೇಳಿಕೊಳ್ಳುವವರು ಎಷ್ಟೊಂದು ಸಾರಿ ಸತ್ಯದ ಬೆಳವಣಿಗೆಗೆ ದೊಡ್ಡ ತಡೆಯಾಗಿರುವರಲ್ಲವೇ! ಅವರ ಅಪನಂಬಿಕೆ, ಸಂಶಯ ವ್ಯಕ್ತಪಡಿಸುವಿಕೆ, ಆತ್ಮೀಕ ಅಂಧಕಾರ - ಇವೆಲ್ಲವೂ ಕೆಟ್ಟದೂತರು ಅವರಲ್ಲಿ ವಾಸ ಮಾಡುವುದಕ್ಕೆ ಪ್ರೋತ್ಸಾಹ ನೀಡಿದಂತಾಗುವುದಲ್ಲದೆ, ಸೈತಾನನ ತಂತ್ರೋಪಾಯಗಳು ನೆರವೇರುವುದಕ್ಕೆ ಮಾರ್ಗ ಮಾಡಿಕೊಡುತ್ತದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 122, 1887).ಕೊಕಾಘ 89.3