Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸುಳ್ಳಾಡುವ ಆತ್ಮಗಳು ಸತ್ಯವೇದವನ್ನು ನಿರಾಕರಿಸುತ್ತವೆ

    ದೇವರಮಕ್ಕಳು ವರ್ತಮಾನದ ಸತ್ಯದ ಬಗ್ಗೆ ಸಂಪೂರ್ಣವಾದ ತಿಳುವಳಿಕೆ ಹೊಂದಿರಬೇಕು. ಈ ತಿಳುವಳಿಕೆಯನ್ನು ಅವರು ಸತ್ಯವೇದದಿಂದ ಪಡೆದುಕೊಳ್ಳಬೇಕು. ಸತ್ತವರ ಸ್ಥಿತಿಗತಿಯ ಬಗ್ಗೆ ಅವರಿಗೆ ತಿಳುವಳಿಕೆ ಇರಬೇಕು. ಯಾಕೆಂದರೆ ಸೈತಾನನ ದೂತರು ಅವರಿಗೆ ಕಾಣಿಸಿಕೊಂಡು ತಾವು ಸತ್ತ ವ್ಯಕ್ತಿಯ ಪ್ರೀತಿಪಾತ್ರ ಸ್ನೇಹಿತರೂ ಮತ್ತು ಬಂಧುಬಾಂಧವರೆಂದು ಹೇಳಿಕೊಂಡು ಜನರಿಗೆ ಸಬ್ಬತ್ತು ವಾರದ ಏಳನೇ ದಿನದಿಂದ ವಾರದ ಮೊದಲನೆ ದಿನಕ್ಕೆ ಬದಲಾಯಿಸಲ್ಪಟ್ಟಿತೆಂದೂ ಅಲ್ಲದೆ ಸತ್ಯವೇದಕ್ಕೆ ವಿರುದ್ಧವಾದ ಎಲ್ಲಾ ಸಿದ್ಧಾಂತಗಳೂ ಸಹ ಬದಲಾಯಿಸಲ್ಪಟ್ಟವೆಂದು ಹೇಳುತ್ತಾರೆ (ಅರ್ಲಿ ರೈಟಿಂಗ್ಸ್ 87, 1854).ಕೊಕಾಘ 89.4

    ಈ ಸುಳ್ಳಿನ ಆತ್ಮಗಳು ಅಪೊಸ್ತಲರಂತೆ ಮೋಸದ ವೇಷ ಹಾಕಿಕೊಂಡು, ಅವರು ಈ ಲೋಕದಲ್ಲಿದ್ದಾಗ ಪವಿತ್ರಾತ್ಮನ ಹೇಳಿ ಬರೆಸಿದ ವಾಕ್ಯಗಳನ್ನು ತಾವೇ ವಿರೋಧಿಸುವಂತೆ ಮಾಡುತ್ತವೆ. ಈ ಸುಳ್ಳು ಆತ್ಮಗಳು ಸತ್ಯವೇದವು ದೈವಪೇರಿತವಾದದ್ದೆಂಬುದನ್ನು ನಿರಾಕರಿಸುತ್ತವೆ (ರೇಟ್ ಕಾಂಟ್ರೊವರ್ಸಿ, 557, 1911).ಕೊಕಾಘ 90.1

    ಆತ್ಮಕ್ಕೆ ಮರಣವಿಲ್ಲ. ಅದು ಯಾವಾಗಲೂ ಇರುತ್ತದೆ ಮತ್ತು ಭಾನುವಾರದ ಪಾವಿತ್ರತೆ - ಎಂಬ ಈ ಎರಡು ಮಹಾತಪ್ಪುಗಳ ಮೂಲಕ ಸೈತಾನನು ಜನರನ್ನು ತನ್ನ ವಂಚನೆಯ ಬಲೆಗೆ ಬೀಳಿಸುತ್ತಾನೆ. ಆತ್ಮಕ್ಕೆ ಸಾವಿಲ್ಲವೆಂಬ ಸುಳ್ಳು ಸಿದ್ದಾಂತವು ಪ್ರೇತಾತ್ಮ ವಾದಕ್ಕೆ ಕಾರಣವಾಯಿತು (Spiritualism, ಮೃತರ ಪ್ರೇತಗಳು ಅರ್ಹ ಮಧ್ಯವರ್ತಿಗಳ (Medium) ಮೂಲಕ ಬದುಕಿರುವ ಬಂಧುಮಿತ್ರರೊಡನೆ ಮಾತಾಡುವುದಲ್ಲದೆ ಅವರಿಗೆ ಪ್ರತ್ಯಕ್ಷವೂ ಆಗುತ್ತವೆಂಬ ನಂಬಿಕೆ). ಭಾನುವಾರದ ಪಾವಿತ್ರ್ಯತೆಯು ರೋಮನ್ ಕಥೋಲಿಕ್ ಸಭೆಯೊಂದಿಗೆ ಒಂದು ಆತ್ಮೀಯ ಬಾಂಧವ್ಯ ಉಂಟುಮಾಡುತ್ತದೆ (ಗ್ರೇಟ್ ಕಾಂಟ್ರೊವರ್ಸಿ, 588, 1911).ಕೊಕಾಘ 90.2

    ತಾವು ಕ್ರಿಸ್ತನೆಂದು ಅನೇಕರು ಹೇಳಿಕೊಳ್ಳುತ್ತಾರೆ. ಆದರೆ ಅವರು ವೇಷ ಹಾಕಿಕೊಳ್ಳುವ ಸುಳ್ಳುಗಾರರಾಗಿದ್ದಾರೆ. ಅವರು ಜಗತ್ತಿನ ರಕ್ಷಕನಾದ ಕ್ರಿಸ್ತನಿಗೆ ಮಾತ್ರ ಸಲ್ಲಬೇಕಾದ ಬಿರುದು ಮತ್ತು ಆರಾಧನೆಯು ತಮಗೆ ಸಲ್ಲಬೇಕೆಂದು ಹಕ್ಕಿನಿಂದ, ಬಲಾತ್ಕಾರದಿಂದ ಹೇಳಿಕೊಳ್ಳುತ್ತಾರೆ. ಅವರು ಅದ್ಭುತವಾದ ಪವಾಡಗಳನ್ನು ಮಾಡಿ ರೋಗ ಗುಣಪಡಿಸುತ್ತಾರೆ. ಅಲ್ಲದೆ ಸತ್ಯವೇದದ ಸಾಕ್ಷಿಯನ್ನು ಒಪ್ಪದಿರುವಂತ ದೈವಪ್ರಕಟನೆಗಳು ತಮಗೆ ಪರಲೋಕದಿಂದ ಬಂತೆಂದು ಸುಳ್ಳಾಗಿ ಹೇಳಿಕೊಳ್ಳುತ್ತಾರೆ. ಆದರೆ ದೇವರ ಮಕ್ಕಳು ಅಂತವರಿಂದ ತಪ್ಪು ದಾರಿ ಹಿಡಿಯುವುದಿಲ್ಲ. ಸುಳ್ಳು ಕ್ರಿಸ್ತರ ಬೋಧನೆಗಳು ಸತ್ಯವೇದಕ್ಕೆ ಅನುಗುಣವಾಗಿರುವುದಿಲ್ಲ. ಇಂತವರ ಮೇಲೆ ದೇವರ ರೌದ್ರವೆಂಬ ಏನೂ ಬೆರಸದ ಉಗಕೋಪವು ಸುರಿಸಲ್ಪಡುವುದೆಂದು ಸತ್ಯವೇದವು ತಿಳಿಸುತ್ತದೆ. ಆದರೆ ಸುಳ್ಳು ಕ್ರಿಸ್ತರು ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ಅಡ್ಡಬೀಳುವವರ ಮೇಲೆ ಆಶೀರ್ವಾದ ನೀಡುತ್ತಾರೆ (ಗ್ರೇಟ್ ಕಾಂಟ್ರೊವರ್ಸಿ, 624, 625, 1911).ಕೊಕಾಘ 90.3