Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂಗೀತವು ಒಂದು ಉರುಳಾಗಿದೆ

    ಕೃಪೆಯ ಕಾಲ ಮುಗಿಯುವುದಕ್ಕಿಂತ ಮೊದಲು ನಡೆಯುವ ಘಟನೆಗಳನ್ನು ಕರ್ತನಾದ ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಿದ್ದಾನೆ. ಎಲ್ಲಾ ರೀತಿಯ ಸುಸಂಸ್ಕೃತವಲ್ಲದ, ಕರ್ಕಶವಾದ ನಡವಳಿಕೆ ಅಬ್ಬರದ ಸಂಗೀತ, ವಾದ್ಯಗಳನ್ನು ಜೋರಾಗಿ ಬಾರಿಸುತ್ತ ಕೂಗಾಡುವುದು, ನೃತ್ಯ ಮಾಡುವುದು ಮುಂತಾದವು ಕಂಡುಬರುತ್ತವೆ. ಮಾನವರ ವಿವೇಚನಾ ಶಕ್ತಿಯ ಇಂದ್ರಿಯಗಳು ಎಷ್ಟೊಂದು ಗಲಿಬಿಲಿಗೆ ಒಳಗಾಗುತ್ತವೆಂದರೆ, ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಅವರ ಮೇಲೆ ಭರವಸವಿಡಲಾಗದು.ಕೊಕಾಘ 91.2

    ಇಂತಹ ಸಂಗೀತವು ಹುಚ್ಚರ ಸಂತೆಯಲ್ಲಿ ಕಂಡುಬರುವ ಕರ್ಕಶ ಧ್ವನಿಯಂತೆ ಇಂದ್ರಿಯಗಳಿಗೆ ಆಘಾತವುಂಟು ಮಾಡಿ ಮನಸ್ಸನ್ನು ಅಡ್ಡದಾರಿಗೆಳೆಯುತ್ತದೆ. ಸೈತಾನನ ಮಾಧ್ಯಮಗಳ ಶಕ್ತಿಗಳು ಕರ್ಕಶವಾದ ಈ ಶಬ್ದವನ್ನು ಉತ್ಸವವೆಂದು ತೋರಿಸಿ, ಇದು ಪವಿತ್ರಾತ್ಮನ ಕಾರ್ಯವೆಂದು ನಂಬಿಸುತ್ತವೆ. ಹಿಂದಿನ ಕಾಲದಲ್ಲಿದ್ದಂತದ್ದು ಇನ್ನು ಮುಂದೆಯೂ ಇರುತ್ತದೆ. ಸಂಗೀತವು ಯೋಗ್ಯವಾದ ರೀತಿಯಲ್ಲಿ ಮಧುರವಾಗಿ ಉಪಯೋಗಿಸಲ್ಪಟ್ಟರೆ, ಅದು ದೇವರಿಗೆ ಮಹಿಮೆ ತಂದು ಆಶೀರ್ವಾದಕರವಾಗುತ್ತದೆ. ಆದರೆ ಅಬ್ಬರದ, ಕರ್ಕಶ ಶಬ್ದ ಉಂಟು ಮಾಡುವ ಸಂಗೀತವು ಮನುಷ್ಯರಿಗೆ ಒಂದು ಉರುಲಾಗುವಂತೆ (Share) ಸೈತಾನನು ಮಾಡುತ್ತಾನೆ. ಇಂತಹ ವಿಚಿತ್ರವಾದ ಪ್ರಯೋಗಗಳಿಗೆ ನಾವು ಅವಕಾಶ ಕೊಡಬಾರದು. ಇದು ನಮ್ಮ ಮನಸ್ಸನ್ನು ಪವಿತ್ರಾತ್ಮನಿಂದ ದೂರ ಮಾಡುತ್ತದೆ. ಬೆವರ ಕಾರ್ಯವು ಯಾವಾಗಲೂ ಗೌರವವಾಗಿಯೂ, ಗಾಂಭೀರ್ಯದಿಂದಲೂ ಮತ್ತು ಶಾಂತಿಯುತವಾಗಿ ನಡೆಯುತ್ತದೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟಗಳು 36, 38, 42, 1908).ಕೊಕಾಘ 91.3