Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹಿಂಸಾ ಕೃತ್ಯಗಳು

    ನೋಹನ ಕಾಲದಲ್ಲಿ ಜನರಲ್ಲಿ ಹೆಚ್ಚಿನವರು ಸತ್ಯವನ್ನು ವಿರೋಧಿಸುತ್ತಿದ್ದರು ಹಾಗೂ ಸುಳ್ಳು ಅವರಿಗೆ ಅತಿ ಪ್ರಿಯವಾಗಿತ್ತು. ಲೋಕವು ಅತಿಯಾದ ಹಿಂಸಾ ಕೃತ್ಯಗಳಿಂದ ತುಂಬಿಹೋಗಿತ್ತು. ಹೊಡೆದಾಟ, ಅಪರಾಧ, ಕೊಲೆ ಸುಲಿಗೆಗಳು ಅಂದಿನ ದಿನದಲ್ಲಿ ಸಾಮಾನ್ಯವಾಗಿತ್ತು. ಕ್ರಿಸ್ತನ ಎರಡನೇ ಬರೋಣಕ್ಕೆ ಮೊದಲು ಲೋಕದ ಪರಿಸ್ಥಿತಿಯೂ ಇದೇ ರೀತಿ ಇರುತ್ತದೆ (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ ಸಂಪುಟ 1, ಪುಟ 1090 (1891).ಕೊಕಾಘ 13.1

    ಕಾರ್ಮಿಕ ಸಂಘಗಳು ತಮ್ಮ ಬೇಡಿಕೆಗಳು ಈಡೇರದಿದ್ದರೆ, ತಕ್ಷಣವೇ ಹಿಂಸೆ ನಡೆಸುತ್ತವೆ. ಲೋಕದ ಜನರು ದೇವರೊಂದಿಗೆ ಸಾಮರಸ್ಯದಿಂದ ಇಲ್ಲವೆಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಸೈತಾನನ ನಾಯಕತ್ವದಲ್ಲಿ ದುಷ್ಟರಾದ ಕಾರ್ಮಿಕರು ಮುನ್ನಡೆಯುವುದನ್ನು ಯಾವ ವೈಜ್ಞಾನಿಕ ಸಿದ್ಧಾಂತವೂ ವಿವರಿಸಲಾಗದು. ಯಾವುದೇ ಒಂದು ಮುಷ್ಕರ ನಡೆಯಲಿ. ಅಲ್ಲಿ ಸೈತಾನನ ದುಷ್ಟ ದೂತರಿದ್ದು, ಜನರು ಹಿಂಸಾಚಾರಕ್ಕೆ ಇಳಿಯುವಂತೆ ಅವರನ್ನು ಪ್ರೇರೇಪಿಸುತ್ತಾರೆ.ಕೊಕಾಘ 13.2

    ಮನುಷ್ಯರ ಕ್ರೂರತನ ಹಾಗೂ ದುಷ್ಟತನವು ಎಂತಹ ಮಟ್ಟಮುಟ್ಟಿದೆ ಎಂದರೆ, ದೇವರು ಮಹಾವೈಭವದಿಂದಲೂ, ಗಾಂಭೀರ್ಯದಿಂದಲೂ ತನ್ನನ್ನು ತಿಳಿಯಪಡಿಸಿಕೊಳ್ಳುತ್ತಾನೆ. ಅತಿ ಶೀಘ್ರದಲ್ಲಿಯೇ ಈ ಲೋಕದ ದುಷ್ಟತನವು ತನ್ನ ಇತಿಮಿತಿಯನ್ನು ಮೀರುತ್ತದೆ. ಆಗ ದೇವರು ನೋಹನ ಕಾಲದಂತೆ ತನ್ನ ದಂಡನೆಯನ್ನು ತೋರಿಸುವನು (ದಿ ಅಪ್‌ವರ್ಡ್ ಲುಕ್, ಪುಟ 334 (1903)), ಕೊಲೆ ಸುಲಿಗೆಗಳು, ರೈಲು, ವಾಹನ ಅಪಘಾತಗಳು, ಹಿಂಸಾಚಾರಗಳು - ಇವೆಲ್ಲವೂ ಎಲ್ಲದರ ಅಂತ್ಯ ಸಮೀಪದಲ್ಲಿದೆ ಎಂದು ತಿಳಿಸುತ್ತವೆ. ಈಗ, ಇದೀಗಲೇ ನಾವು ಕ್ರಿಸ್ತನ ಎರಡನೇ ಬರೋಣಕ್ಕೆ ಸಿದ್ಧಮಾಡಿಕೊಳ್ಳಬೇಕಾದ ಅಗತ್ಯವಿದೆ (1907).ಕೊಕಾಘ 13.3