Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಸೈತಾನನು ದೈವತ್ವಕ್ಕೇರಿಸಲ್ಪಡುತ್ತಾನೆ

    ಈ ಕಾಲದಲ್ಲಿ ಕ್ರಿಸ್ತ ವಿರೋಧಿಯು ನಿಜವಾದ ಕ್ರಿಸ್ತನೆಂದು ಕಾಣಿಸಿಕೊಳ್ಳುವನು. ಆಗ ದೇವರಾಜೆಯು ಲೋಕದಾದ್ಯಂತ ಸಂಪೂರ್ಣವಾಗಿ ನಿರರ್ಥಕವಾಗಿ ರದ್ದು ಮಾಡಲ್ಪಡುತ್ತದೆ. ದೇವರ ಪರಿಶುದ್ಧ ಆಚೆಗಳ ವಿರುದ್ಧವಾಗಿ ದಂಗೆಯೇಳುವ ಸಮಯ ಬಂದಿದೆ. ಆದರೆ ಇವೆಲ್ಲವುಗಳ ಹಿಂದಿರುವ ನಿಜವಾದ ಸೂತ್ರಧಾರನಾದ ಸೈತಾನನು ಪ್ರಕಾಶಮಾನವಾದ ದೂತನಂತೆ ವೇಷ ಹಾಕಿಕೊಂಡಿರುವನು. ಜನರು ಅದರಿಂದ ಮರುಳುಗೊಂಡು ಅವನನ್ನು ಉನ್ನತವಾದ ದೈವತ್ವಕ್ಕೇರಿಸುವರು. ಆದರೆ ಸರ್ವಶಕ್ತನು ಮಧ್ಯಪ್ರವೇಶಿಸಿ ಸೈತಾನನನ್ನು ದೇವರ ಸ್ಥಾನದಲ್ಲಿರಿಸಲು ಒಟ್ಟಾಗಿರುವ ಧರ್ಮಭ್ರಷ್ಟ ಸಭೆಗಳಿಗೆ ದಂಡನೆಯನ್ನು ವಿಧಿಸುವನು? ‘ಅವಳಿಗೆ ಕೊಲೆ, ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿಸುವವು: ಅವಳು ಬೆಂಕಿಯಿಂದ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ’ (ಪ್ರಕಟನೆ 1858) (ಟೆಸ್ತಿಮೊನೀಸ್‌ ಟು ಮಿನಿಸ್ಟರ್ಸ್, 62, 1893).ಕೊಕಾಘ 96.5

    ನಮ್ಮ ಕರ್ತನಾದ ಯೇಸುಕ್ರಿಸ್ತನ ಎರಡನೇ ಬರೋಣವು ಹತ್ತಿರವಾಗುತ್ತಿರುವಾಗ, ಸೈತಾನನು ಮನುಷ್ಯನಂತೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ, ಯೇಸುಕ್ರಿಸನಂತೆ ವೇಷ ಧರಿಸುವನು. ಸತ್ಯವನ್ನು ತಿರಸ್ಕರಿಸಿದ ಈ ಲೋಕವು ಅವನನ್ನು ಕರ್ತರ ಕರ್ತನೂ, ರಾಜಾಧಿರಾಜನೂ ಎಂದು ಸ್ವೀಕರಿಸುವುದು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ, ಸಂಪುಟ 5, ಪುಟಗಳು 1105, 1106, 1900).ಕೊಕಾಘ 97.1

    Larger font
    Smaller font
    Copy
    Print
    Contents