Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮೋಸವು ಹೆಚ್ಚುಕಡಿಮೆ ವಿಶ್ವವ್ಯಾಪಿಯಾಗಿರುತ್ತದೆ

    ಸೈತಾನನು ಈಗ ಬಲಶಾಲಿಯಾದ ಸೇನಾದಂಡನಾಯಕನಂತೆ ಯುದ್ಧಭೂಮಿಗೆ ಇಳಿದಿದ್ದಾನೆ. ಈ ಕೊನೆಯ ಸಮಯದಲ್ಲಿ ದೇವರು ತನ್ನ ಜನರಿಗೆ ಕೊಡುವ ಬೆಳಕನ್ನು ತಡೆಗಟ್ಟಲು ಅವನು ಸಾಧ್ಯವಾದ ಎಲ್ಲಾ ವಿಧವಾದ ಕಾರ್ಯಗಳನ್ನು ಮಾಡುವನು. ಆದುದರಿಂದ ಜನರನ್ನು ರಕ್ಷಣೆ ಮಾರ್ಗಕ್ಕೆ ತರಲು ಪ್ರಾಮಾಣಿಕವಾಗಿ ಸೇವೆ ಮಾಡುವ ಸ್ತ್ರೀ ಪುರುಷರ ಅಗತ್ಯವಿದೆ. ಹೆಚ್ಚುಕಡಿಮೆ ಜಗತ್ತಿನ ಎಲ್ಲರೂ ಸೈತಾನನ ಪಕ್ಷಕ್ಕೆ ಸೇರುವರು. ದೇವರಿಗೆ ವಿಧೇಯರಾದ ಕೆಲವೇ ಕೆಲವರು ಮಾತ್ರ, ಅವನ ವಿರುದ್ದವಾಗಿ ಎಂದೆಂದಿಗೂ ನಿಲ್ಲುವರು. ಇಂತಹವರನ್ನೂ ಸಹ ಸೈತಾನನು ತನ್ನ ಮೋಸಕ್ಕೆ ಸಿಕ್ಕಿಸಲು ಪ್ರಯತ್ನಿಸುವನು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 389, 1889).ಕೊಕಾಘ 98.2

    ಸೈತಾನನ ಕುತಂತ್ರದ ಮೂಲಕ ಸತ್ತುಹೋಗಿರುವವರ ರೂಪವು ಕಂಡುಬರುವುದು. ಅನೇಕರು ಇದಕ್ಕೆ ಮರುಳಾಗುವರು, ಅಡ್ವೆಂಟಿಸ್ಟರಲ್ಲಿಯೂ ಸಹ ಅನೇಕರು ಕ್ರಿಸ್ತನಂಬಿಕೆಯನ್ನು ಬಿಟ್ಟು ಮೋಸಗೊಳಿಸುವ ದುರಾತ್ಮಗಳಿಗೂ ಹಾಗೂ ದೆವ್ವಗಳ ಸಿದ್ದಾಂತಗಳಿಗೂ ಮರುಳಾಗುವರು. ಅವರು ಸತ್ಯವನ್ನು ತಿರುಚಿ ಕೆಟ್ಟದ್ದಾಗಿ ಹೇಳುತ್ತಾರೆಂದು ಶ್ರೀಮತಿ ವೈಟಮ್ಮನವರು ನಮಗೆ ಎಚ್ಚರಿಸುತ್ತಾರೆ.ಕೊಕಾಘ 98.3

    ಒಂದು ಅದ್ಭುತ ಕಾರ್ಯವು ನಡೆಯಲಿದೆ. ಸತ್ಯಾಂಶಕ್ಕೆ ವಿರುದ್ಧವಾದ ಇಂತಹ ಸುಳ್ಳು ಹೇಳಿಕೆಗಳಿಗೆ ಒಳಗಾಗುವ ಬೋಧಕರು, ವಕೀಲರು, ವೈದ್ಯರು ಸ್ವತಃ ತಾವೇ ಮೋಸಗಾರರಾಗಿ, ವಂಚನೆಗೆ ಒಳಗಾಗುವವರೊಂದಿಗೆ ಸೇರುವರು. ಆತ್ಮೀಕ ಅಂಧಕಾರವು ಅವರನ್ನು ಆವರಿಸಿಕೊಳ್ಳುವುದು.ಕೊಕಾಘ 98.4

    *****