Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಬೆಂಕಿಯ ಉಂಡೆಗಳು

    1906ನೇ ಇಸವಿಯಲ್ಲಿ ಒಂದು ಶುಕ್ರವಾರ ಮುಂಜಾನೆ ನಿದ್ರೆಯಿಂದ ಏಳುವುದಕ್ಕೆ ಮೊದಲು ಶ್ರೀಮತಿ ವೈಟಮ್ಮನವರಿಗೆ ಒಂದು ಪರಿಣಾಮಕಾರಿಯಾದ ದೃಶ್ಯವು ತೋರಿಸಲ್ಪಟ್ಟಿತು. ಅವರು ನಿದ್ರೆಯಿಂದ ಎಚ್ಚರಗೊಂಡಿದ್ದರೂ, ಅವರು ಮನೆಯಲ್ಲಿರಲಿಲ್ಲ. ಕಿಟಕಿಯಿಂದ ಅವರು ಭಯಂಕರವಾದ ಬೆಂಕಿ ಉರಿಯುವುದನ್ನು ಕಂಡರು. ಬೆಂಕಿಯ ದೊಡ್ಡದೊಡ್ಡ ಉಂಡೆಗಳು ಮನೆಗಳ ಮೇಲೆ ಬೀಳುತ್ತಿದ್ದವು. ಇವು ಎಲ್ಲಾ ಕಡೆಗೂ ಉಗ್ರವಾದ ಬಾಣದಂತೆ ಹಾರುತ್ತಿದ್ದವು. ಭಯಂಕರವಾದ ಈ ಬೆಂಕಿಯನ್ನು ನಿಯಂತ್ರಿಸುವುದು ಹೆಚ್ಚುಕಡಿಮೆ ಅಸಾಧ್ಯವಾಗಿದ್ದು, ಅನೇಕ ಸ್ಥಳಗಳು ಇದರಿಂದ ನಾಶವಾದವು. ಜನರಲ್ಲುಂಟಾದ ಭೀತಿಯು ಹೇಳಲು ಅಸಾಧ್ಯವಾಗಿತ್ತು. ಕೆಲವು ಸಮಯದ ನಂತರ ಶ್ರೀಮತಿ ವೈಟಮ್ಮನವರಿಗೆ ಎಚ್ಚರವಾಯಿತು. ಅವರು ತಮ್ಮ ಮನೆಯಲ್ಲಿಯೇ ಇದ್ದರು (ಎವಾಂಜಲಿಸಮ್ ಪುಟ 29 (1906).ಕೊಕಾಘ 14.1

    ಶ್ರೀಮತಿ ವೈಟಮ್ಮನರು 1909ರಲ್ಲಿ ಮತ್ತೊಂದು ದರ್ಶನ ಕಂಡರು. ಅದರಲ್ಲಿ ಬಹಳ ದೊಡ್ಡದಾದ ಬೆಂಕಿಯ ಉಂಡೆಯು ಅತ್ಯಂತ ಸುಂದರವಾದ ಕೆಲವು ಮನೆಗಳ ಮೇಲೆ ಬಿದ್ದಿತು. ಅವು ತಕ್ಷಣದಲ್ಲಿಯೇ ನಾಶವಾದವು. ಯಾರೋ ಒಬ್ಬರು “ಈ ಲೋಕದ ಮೇಲೆ ದೇವರ ನ್ಯಾಯತೀರ್ಪಿನ ದಂಡನೆ ಬರುವುದೆಂದು ನನಗೆ ತಿಳಿದಿತ್ತು. ಆದರೆ ಅದು ಇಷ್ಟು ಬೇಗನೆ ಬರುವುದೆಂದು ತಿಳಿದಿರಲಿಲ್ಲ” ಎಂದು ಹೇಳುವುದನ್ನು ಶ್ರೀಮತಿ ವೈಟಮ್ಮನವರು ಕೇಳಿಸಿಕೊಂಡರು. ಬೇರೆ ಕೆಲವರು ಅವರಿಗೆ ಬಹಳ ವೇದನೆಯಿಂದ ನಿಮಗೆ ತಿಳಿದಿತ್ತು, ನಮಗೆ ಯಾಕೆ ದೇವರ ನ್ಯಾಯತೀರ್ಪಿನ ದಂಡನೆಯ ಬಗ್ಗೆ ತಿಳಿಸಲಿಲ್ಲ? ನಮಗೆ ತಿಳಿದಿರಲಿಲ್ಲವಲ್ಲಾ’ ಎಂದು ಹೇಳುವುದನ್ನೂ ಸಹ ಶ್ರೀಮತಿ ವೈಟಮ್ಮನವರು ಕೇಳಿದರು (ಟೆಸ್ಟಿಮೊನೀಸ್‌ ಸಂಪುಟ 9, ಪುಟ 28 (1909).ಕೊಕಾಘ 14.2

    Larger font
    Smaller font
    Copy
    Print
    Contents