Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ಸೇವೆಗೆ ಪ್ರತಿಷ್ಠಿಸಿಕೊಳ್ಳದ ಬೋಧಕರು

    ಭಾನುವಾರಾಚರಣೆಯನ್ನು ಕಡ್ಡಾಯಗೊಳಿಸುವ ಮಹಾಕಾರ್ಯವು ಬಹಳ ಸಮೀಪದಲ್ಲಿದೆ. ಆ ಸಮಯದಲ್ಲಿ ದೇವರು ನೇಮಿಸದ ಹಾಗೂ ಆತನ ಸೇವೆಗೆ ತಮ್ಮನ್ನು ಪ್ರತಿಷ್ಠಿಸಿಕೊಳ್ಳದ ಬೋಧಕರು ತೆಗೆದುಹಾಕಲ್ಪಡುವರು ದೇವರು ಹಿಂಗಾರು ಮಳೆಗೆ ಸಿದ್ಧರಾಗಿರುವ ನಿಜವಾದ ಹಾಗೂ ಪರಿಶುದ್ಧಗೊಳಿಸಲಟ್ಟ ಬೋಧಕರು ಆತನ ಸೇವೆಗೆ ಇರುವರು (ಸೆಲೆಕ್ಟಡ್ ಮೆಸೇಜಸ್, ಸಂಪುಟ 3, ಪುಟ 385, 1886).ಕೊಕಾಘ 103.3

    ಸೈತಾನನ ಪೈಶಾಚಿಕವಾದ ಬೆಳಕಿ (ಬ್ಯಾಟರಿ)ನಿಂದ ಹೊತ್ತಿಸಲ್ಪಟ್ಟ ಸುಳ್ಳು ಪ್ರವಾದನೆಯ ಬೆಳಕನ್ನು ಹೊಂದಿರುವ ಅನೇಕರು ನಮ್ಮ ಸಭೆಯಲ್ಲಿ ಬೋಧನೆ ಮಾಡುವರು. ಕೆಲವರು ಹಿಂಸೆಯನ್ನು ತಾಳಲಾರದೆ ಸಭೆಯನ್ನು ಬಿಟ್ಟು ಹೊರಹೊಗುವರು. ಆದರೆ ಇಂತವರು ಸತ್ಯವನ್ನು ತಡೆಹಿಡಿಯಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ಅಂತ್ಯದವರೆಗೂ ಎಲ್ಲಾ ಕಡೆಯಲ್ಲಿಯೂ ಸತ್ಯವು ಮುಂದುವರಿಯುವುದು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟಗಳು 409, 411, 1898).ಕೊಕಾಘ 103.4

    ದೇವರ ವಾಕ್ಯವು ತಿಳಿಸಿದ ಪ್ರಕಾರ ಹಾಗೂ ದೇವರು ತನ್ನ ಪ್ರವಾದಿನಿಯಾದ ಶ್ರೀಮತಿ ವೈಟಮ್ಮನವರಿಗೆ ತಿಳಿಸಿದಂತೆ, ಬೋಧಕರು ಹಾಗೂ ವೈದ್ಯರು ಅಂಡ್ವಿಂಟಿಸ್ಟ್ ಸಭೆಯನ್ನು ಬಿಟ್ಟು ಹೋಗುವರು (ಲಾಸ್ಟ್ ಡೇ ಈವೆಂಟ್ಸ್, ಪುಟ 179).ಕೊಕಾಘ 103.5