Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪಂಚಾಶತ್ತಮ ಹಬ್ಬದಲ್ಲಿ ಬಂದ ಮುಂಗಾರು ಮಳೆಯ ಪರಿಣಾಮಗಳು

    ಪವಿತ್ರಾತ್ಮನ ಪ್ರೇರಣೆಯಿಂದ ಪಶ್ಚಾತ್ತಾಪಪಟ್ಟು ಪಾಪಗಳನ್ನು ಅರಿಕೆ ಮಾಡಿಕೊಂಡರು. ತಮ್ಮ ಪಾಪಗಳು ಕ್ಷಮಿಸಲ್ಪಟ್ಟಿದ್ದರಿಂದ ಅವರು ಹಾಡುಗಳಿಂದ ದೇವರನ್ನು ಸ್ತುತಿಸಿದರು. ಒಂದೇ ದಿನದಲ್ಲಿ ಮೂರುಸಾವಿರ ಮಂದಿ ಕ್ರಿಸ್ತನನ್ನು ಅಂಗೀಕರಿಸಿದರು. ಗಲಿಲಾಯದವರಾದ ಶಿಷ್ಯರು ಭಾಷೆಯು ಶುದ್ಧವಾಗಿರಲಿಲ್ಲ. ಆದರೆ ಈಗ ಪವಿತ್ರಾತ್ಮನು ಅವರು ಭಾಷೆಗಳನ್ನು ಸುಲಲಿತವಾಗಿ ಮಾತಾಡಲು ಸಾಮರ್ಥ ನೀಡಿದನು. ಶಿಷ್ಯರು ತಮ್ಮ ಜೀವಮಾನದ ಕಾಲದಲ್ಲಿ ಸಾಧಿಸಲಾಗದ್ದನ್ನು ಪರಿಶುದ್ಧಾತ್ಮನು ಅವರಿಗೆ ಒಂದೇ ದಿನದಲ್ಲಿ ಸಾಧಿಸಿದನು (ಪುಟಗಳು 38-40).ಕೊಕಾಘ 107.2

    ಶಿಷ್ಯರ ಹೃದಯಗಳು ಎಷ್ಟೊಂದು ಔದಾರ್ಯದಿಂದ ಸಂಪೂರ್ಣವಾಗಿತ್ತೆಂದರೆ, ಅವರು ಕ್ರಿಸ್ತನ ಶಕ್ತಿಯನ್ನು ಸಾಕ್ಷಿಯಾಗಿ ಸಾರಲು ಲೋಕದ ಕಟ್ಟ ಕಡೆಯವರೆಗೆ ಹೋಗುವಂತೆ ಅವರನ್ನು ಪ್ರಚೋದಿಸಿತು (ಪುಟ 46).ಕೊಕಾಘ 107.3

    ಪಂಚಾಶತ್ತಮ ಹಬ್ಬದ ದಿನದಲ್ಲಿ ಪರಿಶುದ್ಧಾತ್ಮನ ಸುರಿಸುವಿಕೆಯಿಂದಾದ ಪರಿಣಾಮಗಳೇನು? ಪುನರುತ್ಥಾನಗೊಂಡ ರಕ್ಷಕನ ಶುಭಸಮಾಚಾರವು ಆಗ ಜನವಸತಿಯಿದ್ದ ಜಗತ್ತಿನ ಮೂಲೆಮೂಲೆಗೆ ಸಾರಲ್ಪಟ್ಟಿತು. ಕ್ರಿಸ್ತನನ್ನು ಅಂಗೀಕರಿಸಿದವರು ಎಲ್ಲಾ ಕಡೆಗಳಿಂದ ಸಭೆಗೆ ಬಂದರು, ನಂಬಿಕೆಯನ್ನು ಬಿಟ್ಟು ಹೋಗಿದ್ದವರು ಪುನಃ ಕ್ರಿಸ್ತ ನಂಬಿಕೆಗೆ ಬಂದರು. ಕ್ರಿಸ್ತನ ಗುಣಸ್ವಭಾವವನ್ನು ತೋರಿಸುವುದು ಮತ್ತು ಆತನ ರಾಜ್ಯವನ್ನು ವಿಸ್ತರಿಸುವುದಕ್ಕಾಗಿ ಕಾರ್ಯ ಮಾಡುವುದು ವಿಶ್ವಾಸಿಗಳ ಹೆಬ್ಬಯಕೆಯಾಗಿತ್ತು. (ಆಕ್ಟ್ಸ್ ಆಫ್‌ ದಿ ಅಪೋಸ್ತಲ್ಸ್, 48, 191l).ಕೊಕಾಘ 107.4