Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನ ಸೇವೆಯಲ್ಲಿ ಪರಿಣಾಮಕಾರಿಯಾದ ಕ್ರಿಯಾಶೀಲ ಕೆಲಸಗಾರರಾಗಿರ್ರಿ

    ಸಭೆಗಳು ಚಟುವಟಿಕೆಯಿಂದ ಕ್ರಿಯಾಶೀಲರಾಗಿರುವಾಗ, ಅವುಗಳ ಪ್ರಾಮಾಣಿಕ ಕೋರಿಕೆಗೆ ಉತ್ತರವಾಗಿ ಪರಿಶುದ್ಧಾತ್ಮನು ಕೊಡಲ್ಪಡುವನು. ಆಗ ಹಿಂಗಾರುಮಳೆ ಸುರಿಸಲು ಪರಲೋಕದ ದ್ವಾರವು ತೆರೆಯಲ್ಪಡುವುದು (ರಿವ್ಯೂ ಅಂಡ್ ಹೆರಾಲ್ಡ್ ಫೆಬ್ರವರಿ 25, 1890). ಹಿಂಗಾರು ಮಳೆ ಸುರಿಸಲ್ಪಡುವುದು ಹಾಗೂ ಪ್ರತಿಯೊಂದು ಅಶುದ್ಧತೆಯಿಂದ ಶುದ್ಧಿಗೊಂಡವರೆಲ್ಲರ ಮೇಲೂ ದೇವರು ತನ್ನ ಆಶೀರ್ವಾದವನ್ನು ತುಂಬಿಸುವನು. ಪವಿತ್ರಾತ್ಮನ ದೀಕ್ಷಾಸ್ನಾನಕ್ಕೆ ನಾವು ಯೋಗ್ಯರಾಗುವಂತೆ, ನಮ್ಮನ್ನು ಕ್ರಿಸ್ತನಿಗೆ ಒಪ್ಪಿಸಿಕೊಡುವುದು ನಮ್ಮ ಇಂದಿನ ಕರ್ತವ್ಯವಾಗಿದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 191, 1892).ಕೊಕಾಘ 112.1

    ಸಮಸ್ತಲೋಕವನ್ನು ದೇವರ ಮಹಿಮೆಯಿಂದ ಬೆಳಗಿಸುವ ಪರಿಶುದ್ಧಾತ್ಮನ ವರದ ಮಹಾಸುರಿಸುವಿಕೆಯು ನಾವು ಜ್ಞಾನೋದಯ ಹೊಂದುವ ತನಕ ಬೀಳುವುದಿಲ್ಲ. ಅವರು ತಮ್ಮ ಅನುಭವದಿಂದ ದೇವರೊಂದಿಗೆ ಜೊತೆ ಕೆಲಸಗಾರರಾಗುವುದೆಂದರೆ ಏನೆಂದು ತಿಳಿದಿರುವರು. ನಾವು ಕ್ರಿಸ್ತನಸೇವೆಗೆ ಮನಃಪೂರ್ವಕವಾಗಿ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಂಡಾಗ, ದೇವರು ತನ್ನ ಆತ್ಮನನ್ನು ಹೇರಳವಾಗಿ ಸುರಿಸುವನು. ಆದರೆ ಸಭೆಯ ಅತ್ಯಧಿಕ ಸಂಖ್ಯೆಯ ಜನರು ದೇವರೊಂದಿಗೆ ಸಹ ಕೆಲಸಗಾರರಾಗದಿದ್ದಲ್ಲಿ, ಪವಿತ್ರಾತ್ಮನು ಸುರಿಸಲ್ಪಡುವುದಿಲ್ಲ (ಕ್ರಿಶ್ಚಿಯನ್ ಸರ್ವಿಸ್, 253, 1896).ಕೊಕಾಘ 112.2

    ಸಭೆಯು ಸೋಮಾರಿಯೆಂಬ ನಿಂದೆಯು ತೆಗೆಯಲ್ಪಟ್ಟಾಗ, ಪರಿಶುದ್ಧಾತ್ಮನ ವರವು ಪ್ರಕಟಗೊಳ್ಳುತ್ತದೆ. ದೈವೀಕ ಶಕ್ತಿಯು ಕಾಣಿಸಲ್ಪಡುತ್ತದೆ. ಸೇನಾಧೀಶ್ವರನಾದ ಯೆಹೋವನ ದೈವಾನುಗ್ರಹದ ಕಾರ್ಯವನ್ನು ಸಭೆಯು ನೋಡುವುದು (ಟೆಸ್ಟಿಮೊನೀಸ್, ಸಂಪುಟ 9, ಪುಟ 46, 1909).ಕೊಕಾಘ 112.3