Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಿಮ್ಮ ಹೃದಯವು ಶುದ್ಧವಾಗಿರಲಿ

    ಹಿಂಗಾರು ಮಳೆಯ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ. ನಾವು ಮಾಡಬೇಕಾದದ್ದು ಇಷ್ಟೇ. ನಿಮ್ಮ ಹೃದಯವು ಶುದ್ಧವಾಗಿರಲಿ, ಪರಲೋಕದ ಹಿಂಗಾರು ಮಳೆಯನ್ನು ಸ್ವಾಗತಿಸಲು ಸಿದ್ಧರಾಗಿ ಹೀಗೆ ಪ್ರಾರ್ಥಿಸಿರಿ : “ಹಿಂಗಾರುಮಳೆಯು ನನ್ನ ಹೃದಯದಲ್ಲಿ ಸುರಿಸಲ್ಪಡಲಿ, ಮೂರನೇ ದೂತನೊಂದಿಗೆ ಸೇರುವ ಮಹಿಮೆಯ ವೈಭವದ ದೇವದೂತನ ಬೆಳಕು ನನ್ನ ಮೇಲೆ ಪ್ರಕಾಶಿಸಲಿ; ನಿನ್ನ ಸೇವೆಯಲ್ಲಿ ನನಗೂ ಅವಕಾಶ ಕೊಡು, ನಿನ್ನ ಬರೋಣವನ್ನು ನಾನು ತಿಳಿಸುವಂತಾಗಲಿ. ನಾನು ಕ್ರಿಸ್ತನೊಂದಿಗೆ ಜೊತೆ ಕೆಲಸಗಾರನಾಗುವಂತೆ ಆಶೀರ್ವದಿಸು (ದಿ ಅಪ್‌ವರ್ಡ್ ಲುಕ್, ಪುಟ 283, 1891). ಕೊಕಾಘ 112.4

    ನಿಮ್ಮ ಪ್ರಾರ್ಥನೆಗೆ ಉತ್ತರವು ತಕ್ಷಣದಲ್ಲಿಯೇ ಅತಿವೇಗವಾಗಿಯೂ, ಬಲದಿಂದಲೂ ಬರಬಹುದು ಅಥವಾ ನಮ್ಮ ನಂಬಿಕೆಯು ಪರೀಕ್ಷಿಸಲಡಲು ಕೆಲವು ದಿನಗಳು, ವಾರಗಳು ತಡವಾಗಬಹುದು, ಆದರೆ ಹೇಗೆ ಮತ್ತು ಯಾವಾಗ ನಮ್ಮ ಪ್ರಾರ್ಥನೆಗೆ ಉತ್ತರಿಸಬೇಕೆಂದು ದೇವರಿಗೆ ತಿಳಿದಿದೆ. ದೈವೀಕ ಮಾಧ್ಯಮದೊಂದಿಗೆ ಸಂಪರ್ಕ ಹೊಂದಿರುವುದು ಮಾತ್ರ ನಮ್ಮ ಕೆಲಸವಾಗಿದೆ. ಉಳಿದದ್ದು ದೇವರ ಜವಾಬ್ದಾರಿ, ವಾಗ್ದಾನ ಮಾಡಿದಾತನು ನಂಬಿಗಸ್ತನು. ನಮ್ಮೆಲ್ಲಾ ದ್ವೇಷ, ಅಸೂಯೆ, ಬಿಟ್ಟು ಒಂದೇ ಮನಸ್ಸಿನಿಂದಲೂ ಒಂದೇ ಹೃದಯದಿಂದಲೂ ದೇವರಿಗೆ ಮೊರೆಯಿಡುತ್ತಾ ತಾಳ್ಮೆಯಿಂದ ಎಚ್ಚರಗೊಂಡು ಕಾದುಕೊಂಡಿರಬೇಕು. ನಮ್ಮ ಪ್ರತಿನಿಧಿಯಾಗಿರುವ ಕ್ರಿಸ್ತನು ಪಂಚಾಶತ್ತಮ ದಿನದಲ್ಲಿ ಏಕಮನಸ್ಸಿನಿಂದ ಪ್ರಾರ್ಥಿಸುತ್ತಾ ಕಾದುಕೊಂಡಿದ್ದವರಿಗೆ ಮಾಡಿದ್ದನ್ನೇ, ನಮಗೂ ಮಾಡಲು ಸಿದ್ಧನಾಗಿದ್ದಾನೆ. (ಸ್ಪಿರಿಟ್ ಆಫ್ ಪ್ರಾಫಸಿ, ಸಂಪುಟ 3, ಪುಟ 272, 1878).ಕೊಕಾಘ 112.5

    ಈ ಲೋಕದ ಅಂತ್ಯದ ಸಮಯದಲ್ಲಿ ಮಹಾಬಲಿಷ್ಠನಾದ ದೇವದೂತನು ಪರಲೋಕದಿಂದ ಬಂದು ಯಾವಾಗ ಮೂರನೇ ದೂತನೊಂದಿಗೆ ಸೇರಿ ಸುವಾರ್ತೆಯನ್ನು ಮುಕ್ತಾಯಗೊಳಿಸುತ್ತಾನೆ. ಹಾಗೂ ಯಾವಾಗ ಪರಿಶುದ್ಧಾತ್ಮನ ವರವು ಸುರಿಸಲ್ಪಡುವುದು ತಮಗೆ ತಿಳಿಯದೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಆದರೆ ಅದಕ್ಕೆ ನಾವು ಯಾವಾಗಲೂ ಸಿದ್ಧರಾಗಿದ್ದು, ನಮ್ಮ ಆಗತಿಗಳನ್ನು ನೆಟ್ಟಗೆ ಉರಿಯುವಂತೆ ಮಾಡಿ ಕಾದುಕೊಂಡಿರುವುದು ನಮ್ಮ ಏಕೈಕ ರಕ್ಷಣೆಯಾಗಿದೆ ಎಂಬ ಎಚ್ಚರಿಕೆಯನ್ನು ಶ್ರೀಮತಿ ವೈಟಮ್ಮನವರು ನಮಗೆ ಕೊಟ್ಟಿದ್ದಾರೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 192, 1892).ಕೊಕಾಘ 112.6