Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಎಲ್ಲರೂ ಹಿಂಗಾರುಮಳೆಯನ್ನು ಹೊಂದುವುದಿಲ್ಲ

    ದೇವರ ಮಕ್ಕಳು ತಮ್ಮ ಯಾವುದೇ ಪ್ರಯತ್ನ ಮಾಡದೆ, ಪವಿತ್ರಾತ್ಮನ ವರವು ಪರಲೋಕದಿಂದ ಸುರಿಸಲ್ಪಟ್ಟು ನಮ್ಮನ್ನು ಚೈತನ್ಯಗೊಳಿಸಿ ನಮ್ಮೆಲ್ಲಾ ತಪ್ಪುಗಳನ್ನು ತೆಗೆದು ಹಾಕಿ ಸರಿಪಡಿಸುತ್ತದೆಂದು ಕಾದುಕೊಂಡಿದ್ದಲ್ಲಿ, ತಮ್ಮನ್ನು ಮೂರನೇ ದೂತನ ವರ್ತಮಾನ ಸಾರಲು ಯೋಗ್ಯರನ್ನಾಗಿ ಮಾಡುತ್ತದೆಂದು ನಿರೀಕ್ಷಿಸುತ್ತಾ ಕುಳಿತುಕೊಂಡಿದ್ದಲ್ಲಿ, ಅವರು ಪವಿತ್ರಾತ್ಮನ ವರವನ್ನು ಹೊಂದಿಕೊಳ್ಳುವುದಿಲ್ಲ (ಟೆಸ್ಟಿಮೊನೀಸ್, ಸಂಪುಟ 1, ಪುಟ 619, 1867).ಕೊಕಾಘ 113.1

    ನಮ್ಮ ಸಂಪೂರ್ಣ ಸಭೆಯೇ ಪುನರುಜ್ಜೀವನಗೊಳ್ಳುತ್ತದೆಂದು ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇವೆಯೇ? ಅಂತ ಸಮಯ ಎಂದೂ ಬರುವುದಿಲ್ಲ. ನಮ್ಮ ಸಭೆಯಲ್ಲಿ ಸಂಪೂರ್ಣವಾಗಿ ಮಾನಸಾಂತರ ಹೊಂದದಿರುವ, ಮತ್ತು ಪ್ರಾಮಾಣಿಕವಾಗಿ ಪ್ರಾರ್ಥನೆಯಲ್ಲಿ ಒಟ್ಟಾಗಿ ಸೇರದ ವ್ಯಕ್ತಿಗಳಿದ್ದಾರೆ. ನಾವು ವೈಯಕ್ತಿಕವಾಗಿ ಸೇವೆ ಮಾಡಲು ಮುಂದಾಗಬೇಕು. ನಮ್ಮ ಮಾತು ಕಡಿಮೆಯಿರಲಿ, ನಾವು ಪ್ರಾರ್ಥಿಸುವುದು ಹೆಚ್ಚಾಗಿರಲಿ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 122, 1887).ಕೊಕಾಘ 113.2

    ಮುಂಗಾರು ಮಳೆಯ ಆಶೀರ್ವಾದವನ್ನು ಅನುಭವಿಸದಿರುವವರು, ಕೊನೆಯ ಕಾಲದಲ್ಲಿ ಪರಿಶುದ್ಧಾತ್ಮನು ಸುರಿಸಲ್ಪಟ್ಟಾಗ, ಅದನ್ನು ಅವರು ಕಾಣುವುದಿಲ್ಲ ಅಥವಾ ಹಿಂಗಾರು ಮಳೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 399, 1896) ಎಂಬುದು ಖಂಡಿತವಾಗಿದೆ.ಕೊಕಾಘ 113.3

    ತಮಗೆ ದೊರೆತ, ದೈವೀಕ ಬೆಳಕಿನ ಪ್ರಕಾರ ನಡೆಯುವವರು ಮಾತ್ರ ಹೆಚ್ಚಿನ ಬೆಳಕನ್ನು ಹೊಂದುವರು. ಕ್ರೈಸ್ತ ಸದ್ಗುಣಗಳನ್ನು ನಾವು ದಿನನಿತ್ಯದಲ್ಲಿ ಮಾದರಿಯಾಗಿ ಅನುಸರಿಸದಿದ್ದಲ್ಲಿ, ಹಿಂಗಾರು ಮಳೆಯಲ್ಲಿ ಪರಿಶುದ್ಧಾತ್ಮನ ಸುರಿಸುವಿಕೆಯನ್ನು ನಾವು ಗುರುತಿಸುವುದಿಲ್ಲ. ನಮ್ಮ ಸುತ್ತಲಿನ ಜನರಿಗೆ ವರವು ಸುರಿಸಲ್ಪಡಬಹುದು ಆದರೆ ನಾವು ಅದನ್ನು ಗ್ರಹಿಸುವುದೂ ಇಲ್ಲ ಅಥವಾ ಹೊಂದಿಕೊಳ್ಳುವುದೂ ಇಲ್ಲ (ಪುಟ 507).ಕೊಕಾಘ 113.4

    ಯಾರು ನಿರ್ಣಯಾತ್ಮಕವಾದ ಪ್ರಯತ್ನ ಮಾಡದೆ, ಪರಿಶುದ್ಧಾತ್ಮನು ಬಂದು ತಮ್ಮನ್ನು ಕಾರ್ಯ ಮಾಡಲು ಒತ್ತಾಯ ಮಾಡುತ್ತಾನೆಂದು ಸುಮ್ಮನೆ ಕಾದುಕೊಂಡಿರುತ್ತಾರೋ, ಅವರು ಅಂಧಕಾರದಲ್ಲಿ ನಾಶವಾಗುವರು. ನಾವು ದೇವರ ಸೇವೆ ಮಾಡದೆ ಸುಮ್ಮನೆ ಸೋಮಾರಿಗಳಂತೆ ಇರಬಾರದು,ಕೊಕಾಘ 113.5

    *****

    Larger font
    Smaller font
    Copy
    Print
    Contents