Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕೊನೆಯ ಎಚ್ಚರಿಕೆಯ ಸಂದೇಶವು ಮಹಾ ಅಧಿಕಾರದಿಂದ ಸಾರಲ್ಪಡುವುದು

    ಮೂರನೇ ದೂತನ ವರ್ತಮಾನವು ಮಹಾಧ್ವನಿಯಿಂದಲೂ ಹಾಗೂ ಕೊನೆಯ ಎಚ್ಚರಿಕೆಯ ಈ ಸಂದೇಶವು ಮಹಾ ಅಧಿಕಾರದಿಂದಲೂ ಮತ್ತು ಮಹಿಮೆಯಿಂದಲೂ ಸಾರಲ್ಪಡುವಾಗ, ದೇವರ ಪ್ರಾಮಾಣಿಕರಾದ ಜನರು ಆ ಮಹಿಮೆಯಲ್ಲಿ ಪಾಲ್ಗೊಳ್ಳುವರು. ಸಂಕಟದ ಸಮಯವನ್ನು ಎದುರಿಸಲು ಮುಂಗಾರು ಮಳೆಯು ಅವರನ್ನು ಚೈತನ್ಯಗೊಳಿಸಿ ಬಲಪಡಿಸುವುದು (ಬೈಬಲ್ ವ್ಯಾಖ್ಯಾನ, ಸಂಪುಟ 1, ಪುಟ 984, 1862).ಕೊಕಾಘ 116.2

    ಅಂತ್ಯಕಾಲವು ಸಮೀಪಿಸುತ್ತಿರುವಾಗ, ದೇವರಸೇವಕರ ಸಾಕ್ಷಿಯು ಹೆಚ್ಚು ನಿರ್ಣಾಯಕವಾಗಿಯೂ, ಬಲವಾಗಿಯೂ ಇರುತ್ತದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 407, 1892). ಮೂರನೇ ದೂತನ ವರ್ತಮಾನವು ಮೊದಲೆರಡು ವರ್ತಮಾನಗಳಿಗಿಂತ ಹೆಚ್ಚು ಮಹತ್ವವುಳ್ಳದಾಗಿದೆ (ಪ್ರಕಟನೆ 14:9-12). ಇದನ್ನು ಮಹಾಶಬ್ದದಿಂದ ಅಂದರೆ ಪರಿಶುದ್ಧಾತ್ಮನ ಬಲದಿಂದ ಸಾರಬೇಕಾಗಿದೆ (ಅಡ್ವೆಂಟಿಸ್ಟ್, ಸತ್ಯವೇದ ವ್ಯಾಖ್ಯಾನ, ಸಂಪುಟ 7, ಪುಟ 980, 1900).ಕೊಕಾಘ 116.3

    ಮೂರನೇ ದೂತನ ಸಂದೇಶವು ಮಹಾದ್ವನಿಯಿಂದ ಸಾರಲ್ಪಡುವಾಗ, ಅದರೊಂದಿಗೆ ಮಹಾ ಅಧಿಕಾರ ಹಾಗೂ ಮಹಿಮೆಯು ಜೊತೆಗಿರುತ್ತದೆ. ದೇವರ ಮಕ್ಕಳ ಮುಖಗಳು ಪರಲೋಕದ ಬೆಳಕಿನಿಂದ ಹೊಳೆಯುತ್ತದೆ (ಟೆಸ್ಟಿಮೊನೀಸ್, ಸಂಪುಟ 7, ಪುಟ 17, 1902. ಲೋಕದ ಕೊನೆಯ ಮಹಾ ಇಕ್ಕಟ್ಟಿನ ದಿನ ಸಮೀಪಿಸುತ್ತಿರುವಾಗ, ದೇವರ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ ಹಾಗೂ ನಿರೀಕ್ಷೆ ಮತ್ತು ಭರವಸೆಯ ಹಾಡು ಬಹಳ ಮಧುರವಾಗಿಯೂ, ಸ್ಪಷ್ಟವಾಗಿಯೂ ಕೇಳಿ ಬರುತ್ತದೆ (ಎಜುಕೇಶನ್, ಪುಟ 166, 1903).ಕೊಕಾಘ 116.4

    ಪ್ರಕಟನೆ 18ನೇ ಅಧ್ಯಾಯದಲ್ಲಿ ಮುಂದಾಗಿ ತಿಳಿಸಿದಂತೆ, ಮೃಗ ಹಾಗೂ ಅದರ ವಿಗ್ರಹಕ್ಕೂ ವಿರುದ್ಧವಾಗಿ ಕೊನೆಯ ಎಚ್ಚರಿಕೆ ಕೊಡುವವರು ಮಹಾ ಅಧಿಕಾರದಿಂದ ಅದನ್ನು ಸಾರಬೇಕಾಗಿದೆ (ಟೆಸ್ಟಿಮೊನೀಸ್, ಸಂಪುಟ 8, ಪುಟ 118, 1904).ಕೊಕಾಘ 116.5

    Larger font
    Smaller font
    Copy
    Print
    Contents