Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನೈಸರ್ಗಿಕ ವಿಪತ್ತುಗಳಲ್ಲಿ ದೇವರ ಉದ್ದೇಶ

    ಹಡಗುಗಳು ಯಾವುದೇ ಮುನ್ನೆಚ್ಚರಿಕೆಯಿಲ್ಲದ ಸಮುದ್ರದಲ್ಲಿ ಮುಳುಗಿ ಹೋಗುವಂತ ಭಯಾನಕ ವಿಪತ್ತುಗಳ ಅರ್ಥವೇನು? ಅಪಘಾತಗಳು, ಮನುಷ್ಯರು ಬಚ್ಚಿಟ್ಟಿರುವ ವಸ್ತುಗಳನ್ನು ದಹಿಸುವ ಬೆಂಕಿ ಇವುಗಳ ಅರ್ಥವೇನು? ಬಡವರನ್ನು ಶೋಷಣೆ, ವಂಚನೆ ಮಾಡಿ, ಶ್ರೀಮಂತರು ಇವುಗಳನ್ನು ಕಾಳಸಂತೆಯಲ್ಲಿ ಅಡಗಿಸಿಟ್ಟಿರುತ್ತಾರೆ. ತನ್ನ ಆಜ್ಞೆಗಳು ಹಾಗೂ ಒಡಂಬಡಿಕೆಯನ್ನು ಮೀರುವ, ತನ್ನ ಪರಿಶುದ್ದ ಸಬ್ಬತ್ತನ್ನು ಹೊಲೆ ಮಾಡಿ, ಅದರ ಬದಲಾಗಿ ಸುಳ್ಳಾದ ಭಾನುವಾರವನ್ನು ವಿಶ್ರಾಂತಿ ದಿನವನ್ನಾಗಿ ಅಂಗೀಕರಿಸಿಕೊಂಡಿರುವವರ ಆಸ್ತಿಯನ್ನು ನೈಸರ್ಗಿಕ ವಿಪತ್ತುಗಳಿಂದ ತಪ್ಪಿಸಲು ಕರ್ತನು ಪ್ರಯತ್ನಿಸುವುದಿಲ್ಲ.ಕೊಕಾಘ 15.4

    ಈ ಲೋಕದ ಮೇಲೆ ದೇವರ ಕೋಪದ ಉಪದ್ರವವು ಆಗಲೇ ಬೀಳುತ್ತಿದ್ದು, ಪರಲೋಕದಿಂದ ಬೆಂಕಿ ಬಿದ್ದಂತೆ ಅತ್ಯಂತ ಬೆಲೆಬಾಳುವ ಕಟ್ಟಡಗಳನ್ನು ನಾಶಮಾಡುತ್ತಿವೆ. ಇವೆಲ್ಲವೂ ಕ್ರೈಸ್ತರಿಗೆ ಒಂದು ಎಚ್ಚರಿಕೆ ಗಂಟೆಯಾಗಬೇಕಲ್ಲವೇ? ಜನರು ಇದಕ್ಕೆ ಗಮನ ನೀಡಿ ದೇವರಿಗೆ ಭಯಪಟ್ಟು ನಡುಗುವಂತೆ ಮಾಡಲು ಆತನು ಲೋಕದ ಮೇಲೆ ಇಂತಹ ವಿಪತ್ತುಗಳನ್ನು ಬರಮಾಡುತ್ತಾನೆ (1902).ಕೊಕಾಘ 16.1

    ನೈಸರ್ಗಿಕ ವಿಪತ್ತುಗಳನ್ನು ಬರಮಾಡುವುದರಲ್ಲಿ ದೇವರು ತನ್ನದೇ ಆದ ಉದ್ದೇಶ ಹೊಂದಿದ್ದಾನೆ ಮನುಷ್ಯರು ತನ್ನ ಬಗ್ಗೆ ಅರಿತುಕೊಳ್ಳುವಂತೆ ಮಾಡುವ ದೇಶ ವಿಧಾನಗಳಲ್ಲಿ ಇದು ಒಂದಾಗಿದೆ. ನಿಸರ್ಗದಲ್ಲಿ ಅಸಾಧಾರಣ ರೀತಿಯಲ್ಲಿ ಕಾರ್ಯಮಾಡುವ ಮೂಲಕ ದೇವರು ತನ್ನ ಬಗ್ಗೆ ಸಂದೇಹ ಹೊಂದಿರುವವರಿಗೆ ತನ್ನ ವಾಕ್ಯದಲ್ಲಿ ಸ್ಪಷ್ಟವಾಗಿ ತಿಳಿಸಿರುವುದನ್ನು ವ್ಯಕ್ತಪಡಿಸುತ್ತಾನೆ (1902), ಭೂಕಂಪಗಳು, ಚಂಡಮಾರುತಗಳು, ಬೆಂಕಿ ಮತ್ತು ಪ್ರವಾಹದಿಂದ ಅಪಾರವಾದ ಆಸ್ತಿ, ಪ್ರಾಣಹಾನಿಯಾಗುವುದನ್ನು ನಾವು ಆಗಾಗ ನೋಡುತ್ತೇವಲ್ಲವೇ? ಈ ನೈಸರ್ಗಿಕ ವಿಪತ್ತುಗಳು ಪ್ರಕೃತಿಯ ಅವ್ಯವಸ್ಥೆಯಾದ ಮತ್ತು ಹತೋಟಿಗೆ ಒಳಪಡದ ಸ್ಫೋಟಗಳಾಗಿವೆ ಎಂಬುದು ಪ್ರತ್ಯಕ್ಷವಾಗಿ ಕಂಡುಬರುತ್ತದೆ. ಇವು ಸಂಪೂರ್ಣವಾಗಿ ಮಾನವನ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಆದರೆ ಇವುಗಳಲ್ಲಿ ದೇವರ ಉದ್ದೇಶವನ್ನು ಕಾಣಬಹುದು. ದೇವರು ಈ ವಿಪತ್ತುಗಳ ಮೂಲಕ ಮನುಷ್ಯರಿಗೆ ಬರುವ ಅಪಾಯಗಳ ಬಗ್ಗೆ ತಿಳಿಸಲು ಪ್ರಯತ್ನಿಸುತ್ತಾನೆ (ಪ್ರಾಫೆಟ್ ಅಂಡ್ ಕಿಂಗ್ಸ್, ಪುಟ 277 (1914).ಕೊಕಾಘ 16.2