Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಕ್ಕಳು ದೈವಸಂದೇಶ ಸಾರುವರು

    ಅವಿದ್ಯಾವಂತರನ್ನೂ ಒಳಗೊಂಡಂತೆ, ಇಂದು ಅನೇಕರು ದೇವರ ವಾಕ್ಯವನ್ನು ಸಾರುತ್ತಿದ್ದಾರೆ. ಮಕ್ಕಳು ಪವಿತ್ರಾತ್ಮನಿಂದ ಪ್ರೇರಿತರಾಗಿ ಪರಲೋಕದಿಂದ ಬಂದ ಸಂದೇಶವನ್ನು ಧೈರ್ಯದಿಂದ ತಿಳಿಸುವರು. ಆತನಿಂದ ಉತ್ತೇಜಿತರಾದವರೆಲ್ಲರ ಮೇಲೆ ವರವು ಸುರಿಸಲ್ಪಡುವುದು. ಇದರಿಂದ ಅವರು ಮನುಷ್ಯರ ಎಲ್ಲಾ ವಿಧವಾದ ತಂತ್ರೋಪಾಯಗಳನ್ನು ಮೆಟ್ಟಿ ನಿಂತು, ಅವರ ಎಲ್ಲಾ ನೇಮಗಳನ್ನು ಮೀರಿ ಪರಿಶುದ್ಧಾತ್ಮನ ಬಲದಿಂದ ಸತ್ಯವನ್ನು ಸಾರುವರು (ಎವಾಂಜಲಿಸಮ್, ಪುಟ 700, 1895).ಕೊಕಾಘ 119.4

    ಜನರು ಕ್ರಿಸ್ತನಂತೆ ಸತ್ಯವನ್ನು ಸರಳವಾಗಿ ತಿಳಿಸದಿರುವುದನ್ನು ಪರಲೋಕದ ದೇವದೂತರು ಗಮನಿಸಿದಾಗ, ಮಕ್ಕಳು ದೇವರ ಪವಿತ್ರಾತ್ಮನಿಂದ ಪ್ರೇರಿತರಾಗಿ ಈ ಕಾಲದ ಸಂದೇಶವನ್ನು ಧೈರ್ಯದಿಂದ ಸಾರುವರು (ದಿ ಸದರ್ನ್ ವರ್ಕ್ , ಪುಟ 66, 1895).ಕೊಕಾಘ 119.5