Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವದೂತರ ಸುವಾರ್ತಾ ಸೇವೆ

    ಪರಲೋಕದ ದೇವದೂತರು ಸತ್ಯವೇದದ ಸತ್ಯಾಂಶಗಳನ್ನು ಹುಡುಕುವಂತೆ ಮನುಷ್ಯರ ಮನಸ್ಸುಗಳನ್ನು ಎಚ್ಚರಿಸುವರು. ಇದುವರೆಗೂ ನಡೆಯದಿರುವಂತ ಬಹಳ ಮಹತ್ತರವಾದ ಸುವಾರ್ತಾ ಸೇವೆಯು ನಡೆಯುವುದು. ಅದರ ಯಶಸ್ಸು ಯಾವ ಮನುಷ್ಯನಿಗೂ ಸಲ್ಲುವುದಿಲ್ಲ. ಯಾಕೆಂದರೆ ರಕ್ಷಣೆಗೆ ಬಾಧ್ಯಸ್ಥರಾದವರಿಗೆ ದೇವದೂತರು ಹಗಲಿರುಳು ಸೇವೆ ಮಾಡುವರು (ಕೌನ್ಸೆಲ್ಸ್ ಟು ರೈಟರ್ಸ್, ಪುಟ 140, 1875).ಕೊಕಾಘ 119.6

    ನಮ್ಮಲೋಕದಲ್ಲಿ ಕೊರ್ನೆಲ್ಯನಂತ ಅನೇಕರಿದ್ದಾರೆ... ದೇವರು ಕೊರ್ನೆಲ್ಯನಿಗಾಗಿ ಕಾರ್ಯಮಾಡಿದಂತೆ, ಅಂತವರಿಗಾಗಿಯೂ ಸಹ ಕಾರ್ಯಮಾಡುತ್ತಾನೆ. ಪರಲೋಕದ ದೇವದೂತರ ಭೇಟಿಯ ನಂತರ ಕೊರ್ನೆಲ್ಯನು ದೇವರಜ್ಞಾನ ಪಡೆದುಕೊಂಡಂತೆಯೇ, ಅವರೂ ಸಹ ಪಡೆದುಕೊಳ್ಳುತ್ತಾರೆ.ಕೊಕಾಘ 120.1

    ದೈವೀಕ ಶಕ್ತಿಯು ಮಾನವ ಪ್ರಯತ್ನದೊಂದಿಗೆ ಜೊತೆಯಾದಾಗ, ದೇವರ ಸೇವೆಯು ಕೊಯ್ದು ಪೈರಿನಲ್ಲಿ ಉಳಿದುಕೊಂಡಿರುವ ಕೂಳೆಯ ಬೆಂಕಿಯಂತೆ ಅತಿವೇಗವಾಗಿ ಹರಡುವುದು ದೇವರು ಈ ಕಾರ್ಯಕ್ಕಾಗಿ ತನ್ನದೇ ಆದ ಸಾಧನಗಳನ್ನು ಉಪಯೋಗಿಸುವನು. ಅವು ಎಲ್ಲಿಂದ ಬಂದವೆಂದು ಮನುಷ್ಯರಿಗೆ ತಿಳಿಯುವುದಿಲ್ಲ, ದೇವರ ಕರೆಯುವಿಕೆಗೆ ಉತ್ತರಕೊಡಲು ಮನುಷ್ಯರು ನಿರಾಕರಿಸಿದ ಕಾರಣದಿಂದ ಅವರು ಈ ಸೇವೆಯನ್ನು ಸಾಧಿಸುವ ಅವಕಾಶ ಕಳೆದುಕೊಂಡರು. ಈ ಕಾರ್ಯವನ್ನು ದೇವದೂತರು ಸಾಧಿಸುತ್ತಾರೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 118, 1885).ಕೊಕಾಘ 120.2