Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಕ್ಕಳಿಗೆ ಬೋಧಿಸುವುದರಲ್ಲಿ ತಂದೆ-ತಾಯಿಯರ ಕರ್ತವ್ಯ

    ಮಕ್ಕಳ ಬಳಿ ಇರುವ ಎಲ್ಲದರ ಮೇಲೂ ದೇವರಿಗೆ ಹಕ್ಕಿದೆ ಎಂದು ಅವರಿಗೆ ಬೋಧಿಸಬೇಕು ಹಾಗೂ ಯಾವುದೂ ಸಹ ಎಂದೆಂದಿಗೂ ಈ ಹಕ್ಕನ್ನು ರದ್ದು ಮಾಡಲು ಸಾಧ್ಯವಿಲ್ಲ. ಮಕ್ಕಳು ಈ ವಿಷಯದಲ್ಲಿ ದೇವರಿಗೆ ವಿಧೇಯರಾಗಿರುವರೆಂಬುದನ್ನು ದೃಢಪಡಿಸಬೇಕು. ಹಣವು ಅಗತ್ಯವಾದ ಖಜಾನೆಯಾಗಿದೆ, ಯಾರಿಗೆ ಅಗತ್ಯವಿಲ್ಲವೋ ಅವರಿಗೆ ದುಂದುವೆಚ್ಚ ಮಾಡಬಾರದು. ಬೇರೆ ಕೆಲವರಿಗೆ ನಿಮ್ಮ ಮನಃಪೂರ್ವಕವಾದ ಉಡುಗೊರೆ ಬೇಕಾಗಬಹುದು. ದುಂದುಗಾರಿಕೆ ಮಾಡುವ ಅಭ್ಯಾಸವು ನಿಮ್ಮಲ್ಲಿದ್ದರೆ, ಸಾಧ್ಯವಾದಷ್ಟು ಬೇಗನೆ ಅದನ್ನು ಬಿಡಬೇಕು. ಇದನ್ನು ಮಾಡದಿದ್ದಲ್ಲಿ ನೀವು ದಿವಾಳಿ ಆಗುವಿರಿ.KanCCh 181.2

    ಇಂದಿನ ಕಾಲದಲ್ಲಿ ಯೌವನಸ್ಥರು ಮಿತವ್ಯಯ ಮಾಡುವುದನ್ನು ನಿರ್ಲಕ್ಷಿಸಿ ತಿರಸ್ಕರಿಸುವರು ಹಾಗೂ ಇದು ಜಿಪುಣತನ ಮತ್ತು ಸಂಕುಚಿತ ಮನೋಭಾವವೆಂದು ತಪ್ಪಾಗಿ ಗೊಂದಲಕ್ಕೊಳಗಾಗುತ್ತಾರೆ. ಆದರೆ ಮಿತವ್ಯಯ ಅತ್ಯಂತ ವಿಶಾಲವಾದ ಮನೋಭಾವವೂ ಹಾಗೂ ಅಭಿಪ್ರಾಯವೂ ಆಗಿದೆ. ಮಿತವ್ಯಯ ಅನುಸರಿಸದಿದ್ದಲ್ಲಿ, ನಿಜವಾದ ಉದಾರತೆ ಕಂಡುಬರುವುದಿಲ್ಲ. ಯೌವನಸ್ಥರು ಹಾಗೂ ಮಕ್ಕಳೂ ಸಹ ತಮ್ಮ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಇಡಬೇಕು. ಅವರು ಹಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದನ್ನು ಕಲಿತುಕೊಳ್ಳಲಿ. ತಂದೆ ತಾಯಿಗಳು ಕೊಟ್ಟ ಹಣವಾಗಲಿ ಇಲ್ಲವೇ ಅವರು ಗಳಿಸಿದ ಹಣವೇ ಆಗಲಿ, ಮಕ್ಕಳು ತಾವು ತೆಗೆದುಕೊಂಡ ವಸ್ತುಗಳು, ಅದಕ್ಕಾದ ಖರ್ಚು ವೆಚ್ಚ, ಗಳಿಸಿದ ಆದಾಯ ಎಲ್ಲವನ್ನೂ ಬರೆದಿಡಬೇಕು. ಈಗ ಹಣದ ಮಹತ್ವ ಅವರಿಗೆ ಅರಿವಾಗುತ್ತಿದೆ. ತಂದೆ-ತಾಯಿಯರು ಮಕ್ಕಳಿಗೆ ಕೇಳಿದಾಗಲೆಲೆಲ್ಲಾ ಹಣ ಕೊಡುವುದು ತಪ್ಪುKanCCh 182.1

    ಮನಸ್ಸು ಬಂದಂತೆ ಇಂದ್ರಿಯಗಳ ಆಸೆ ಪೂರೈಸಿಕೊಳ್ಳುವ ಮತ್ತು ವಿವೇಕ ಹೀನಳಾದ ಹೆಂಡತಿ ತಾಯಿ ಹಣವನ್ನು ಖಾಲಿ ಮಾಡುವವಳಾಗಿದ್ದಾಳೆ. ಹಣವನ್ನು ಮನಸೋಇಚ್ಛೆ ಖರ್ಚು ಮಾಡುವುದರ ಪರಿಣಾಮವಾಗಿ ಉಂಟಾಗುವ ಕೆಟ್ಟತನದ ಬಗ್ಗೆ ತಂದೆ-ತಾಯಿಗಳು ಮಕ್ಕಳಿಗೆ ತಿಳುವಳಿಕೆ ಹೇಳಬೇಕು. ಅಲ್ಲದೆ ಮಿತವ್ಯಯದ ಉಪಯೋಗದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅಗತ್ಯವಲ್ಲದ್ದಕ್ಕೆ ಹಣ ಖರ್ಚು ಮಾಡಬಾರದು.KanCCh 182.2