Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-27 — ರಜಾದಿನಗಳು ಮತ್ತು ವಾರ್ಷಿಕೋತ್ಸವಗಳಲ್ಲಿ ಕುಟುಂಬದ ಚಟುವಟಿಕೆಗಳು

    ಕ್ರೈಸ್ತರಾದ ನಾವು ನಿಮ್ಮ ರಜಾದಿನಗಳನ್ನು ಲೋಕದವರ ರೀತಿಯಲ್ಲಿ ಮಸ್ತಿ, ಮೋಜು ಮಾಡಿ ಕಳೆಯಬಾರದು. ಆದರೂ ಮಕ್ಕಳಿಗೆ ಅತೃಪ್ತಿಯಾಗದಂತೆ ರಜಾದಿನಗಳನ್ನು ಸಂತೋಷವಾಗಿ ಕಳೆಯಬೇಕು. ಇಂದಿನ ಆಧುನಿಕ ಯುಗದಲ್ಲಿ ಈ ಲೋಕದ ಕಲುಷಿತವಾದ ಕೆಟ್ಟ ಪ್ರಭಾವದಿಂದ ನಮ್ಮ ಮಕ್ಕಳು ಲೌಕಿಕವಾದ ದುಂದೌತಣ, ಸಂಭ್ರಮ, ಸಡಗರಗಳಿಂದ ಕೆಟ್ಟುಹೋಗುವ ಅಪಾಯಗಳು ಹೆಚ್ಚಾಗಿರುವುದರಿಂದ ತಾಯಿ ತಂದೆಯರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ತಮ್ಮ ಸಂತೋಷ ಮತ್ತು ಒಳಿತನ್ನು ತಂದೆ ತಾಯಿಗಳು ಬಯಸುತ್ತಾರೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. KanCCh 183.1

    ಲೋಕದ ಅನ್ಯ ಜನರು ಮಾತ್ರವಲ್ಲ, ಕ್ರೈಸ್ತರೂ ಸಹ ರಜೆ ದಿನಗಳನ್ನು ಮೋಸದಿಂದ ಕಳೆಯುವುದು ತಮ್ಮ ಆರೋಗ್ಯ ಮತ್ತು ಸಂತೋಷಕ್ಕೆ ಅಗತ್ಯವೆಂದು ತಿಳಿದುಕೊಂಡಿದ್ದಾರೆ. ಆದರೆ ಇದು ಕೆಟ್ಟದ್ದೆಂದು ಫಲಿತಾಂಶಗಳು ತಿಳಿಸುತ್ತವೆ. ನಿಮ್ಮ ಮಕ್ಕಳಿಗೂ ಹಾಗೂ ಯೌವನಸ್ಥರಿಗೂ ರಜಾದಿನಗಳು ಆಕರ್ಷಕವಾಗಿರುವಂತೆ ಮಾಡಲು ಮನಃಪೂರ್ವಕವಾಗಿ ಪ್ರಯತ್ನಿಸಬೇಕು. ಅವಿಶ್ವಾಸಿಗಳ ಮನರಂಜನೆಯಲ್ಲಿ ಅವರನ್ನು ಸೇರಿಸದಿರುವುದು ನಮ್ಮ ಉದ್ದೇಶವಾಗಿರಬೇಕು.KanCCh 183.2

    ಸಂತೋಷದಿಂದ ಕಳೆಯುವ ಆ ದಿನವು ಮುಗಿದಾಗ, ಅದನ್ನು ಹುಡುಕುವವರಿಗೆ ಎಲ್ಲಿ ತೃಪ್ತಿಯಾಗುತ್ತದೆ? ಕ್ರೈಸ್ತ ಕೆಲಸಗಾರರು ಉನ್ನತವಾದ ಹಾಗೂ ಶುದ್ಧವಾದ ಜೀವನ ನಡೆಸಲು ಯಾರಿಗೆ ಸಹಾಯ ಮಾಡಿದ್ದಾರೆ? ದೇವದೂತರು ಬರೆದಂತ ದಾಖಲೆಯನ್ನು ನೋಡಬೇಕಾಗಿ ಬಂದಲ್ಲಿ, ಅವರು ಅಲ್ಲಿ ಏನು ಗಮನಿಸುತ್ತಾರೆ? ಒಂದು ದಿನವು ವ್ಯರ್ಥವಾಗಿ ಕಳೆದು ಹೋಯಿತು! ಆ ದಿನ ಯಾವುದೇ ಒಳ್ಳೆಯದನ್ನು ಸಾಧಿಸಲಾಗದ್ದರಿಂದ ಕ್ರಿಸ್ತನ ಸೇವೆಯಲ್ಲಿ ಒಂದು ದಿನವು ವ್ಯರ್ಥವಾಯಿತಲ್ಲವೇ! ಹುಡುಗರು ಹುಡುಗಿಯರೊಂದಿಗೆ ಹಾಗೂ ಹುಡುಗಿಯರು ಹುಡುಗರೊಂದಿಗೆ ವ್ಯರ್ಥವಾದ ಹರಟೆ ಮಾತುಗಳನ್ನಾಡುವುದರಲ್ಲಿಯೇ ಕಾಲ ಕಳೆದುಹೋಯಿತು. ಕ್ರಿಸ್ತನ ಸೇವೆ ಮಾಡಬೇಕಾದ ಇಂತಹ ಅವಕಾಶಗಳು ಅವರಿಗೆ ತಿರುಗಿ ಸಿಕ್ಕದಿರಬಹುದು. ಯೌವನಸ್ಥರು ಹಾಗೂ ಮಕ್ಕಳು ರಜಾದಿನಗಳಲ್ಲಿ ಶ್ರಮದಾಯಕ ಕೆಲಸ ಮಾಡಲಿ. ತಮ್ಮ ರಜಾದಿನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲಿಲ್ಲ ವಾದ್ದರಿಂದ ಅದು ಇತಿಹಾಸಕ್ಕೆ ಸೇರಿಹೋಯಿತು. ನ್ಯಾಯವಿಚಾರಣೆಯ ದಿನದಲ್ಲಿ ಆ ದಿನವು ವ್ಯರ್ಥವಾಗಿ ಕಳೆದುಹೋಯಿತೆಂದು ದಾಖಲಾಗುವುದು.KanCCh 183.3