Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹೊಟ್ಟೆಕಿಚ್ಚು ಮತ್ತು ತಪ್ಪು ಹುಡುಕುವುದು

    ಸಭೆಯ ಸದಸ್ಯರಲ್ಲಿ ನಾಲಿಗೆಯನ್ನು ಹತೋಟಿಯಲ್ಲಿಡದ ಮತ್ತು ಮನಸ್ತಾಪ ಹುಟ್ಟಿಸುವಂತವರು ಇದ್ದಾರೆಂಬುದು ತನಗೆ ದುಃಖ ತರುತ್ತದೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಅಲ್ಲದೆ ಕುಚೋದ್ಯಮಾಡುವ, ಗುಣಗುಟ್ಟುವ ಸುಳ್ಳುಸುದ್ದಿ ಹಬ್ಬಿಸುವ, ವಟವಟ ಒದರುವ, ತಲೆಹರಟೆ, ದುರಹಂಕಾರದ ಮಾತುಗಳನ್ನಾಡುವ, ಮತ್ತೊಬ್ಬರ ವಿಷಯದಲ್ಲಿ ತಲೆಹಾಕುವ ನಾಲಿಗೆಗಳೂ ಸಭೆಯಲ್ಲಿವೆ. ಕೆಲವರು ಕುತೂಹಲಕ್ಕಾಗಿ ಮತ್ತೆ ಕೆಲವರು ಹೊಟ್ಟೆಕಿಚ್ಚಿನಿಂದ ಇನ್ನೊಬ್ಬರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ತಮಗೆ ಬುದ್ಧಿಹೇಳುವವರ ಮೇಲೆ ಕೆಲವರು ದ್ವೇಷದಿಂದ ಆಧಾರವಿಲ್ಲದ ಸುದ್ದಿ ಹಬ್ಬಿಸುತ್ತಾರೆ. ಒಬ್ಬರಿಗೊಬ್ಬರು ಹೊಂದಿಕೊಳ್ಳದ ಈ ವ್ಯಕ್ತಿಗಳೆಲ್ಲರೂ ಕಾರ್ಯನಿರತರಾಗಿದ್ದಾರೆ. ಕೆಲವರು ತಮ್ಮ ನಿಜವಾದ ಮನೋಭಾವನೆಯನ್ನು ರಹಸ್ಯವಾಗಿಟ್ಟುಕೊಳ್ಳುತ್ತಾರೆ ಹಾಗೂ ಇತರರು ಬೇರೆಯವರ ವಿರುದ್ಧವಾಗಿ ತಮಗೆ ತಿಳಿದಿರುವ ಅಥವಾ ಸಂಶಯಿಸುವ ಕೆಟ್ಟವುಗಳನ್ನು ತಿಳಿಸುತ್ತಾರೆ.KanCCh 207.1

    ದೇವರ ಮಕ್ಕಳೆಂದು ಹೇಳಿಕೊಳ್ಳುವ ಇಂತವರ ಪರಿಸ್ಥಿತಿಯ ಬಗ್ಗೆ ಸೈತಾನನು ಹೆಚ್ಚಳಪಡುತ್ತಾನೆ. ಅನೇಕರು ತಮ್ಮ ಆತ್ಮಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೂ ಇತರರ ತಪ್ಪುಗಳನ್ನು ಟೀಕೆ ಮಾಡಿ ದೂಷಿಸುವ ಅವಕಾಶಕ್ಕಾಗಿ ಕಾತರದಿಂದ ಕಾದುಕೊಂಡಿರುತ್ತಾರೆ. ಸತ್ಯವನ್ನು ಅಸತ್ಯವನ್ನಾಗಿ, ಒಳ್ಳೆಯದನ್ನು ಕೆಟ್ಟದನ್ನಾಗಿ ಮತ್ತು ಮುಗ್ಧತೆಯನ್ನು ಅಪರಾಧವನ್ನಾಗಿ ಬದಲಾಯಿಸುವ ಮತ್ತು ಬೇಕೆಂದೇ ಸುಳ್ಳು ಸಾಕ್ಷಿ ಹೇಳುವ ವಚನಭ್ರಷ್ಟರು ಕ್ರಿಯಾಶೀಲರಾಗಿದ್ದಾರೆ. ಎಲ್ಲರೂ ಬಲಹೀನ ಸ್ವಭಾವ ಹೊಂದಿದ್ದಾರೆ. ಸ್ವಯಂನ್ಯಾಯಾಧೀಶರಾಗಿರುವ ಅನೇಕರು ತಪ್ಪು ಮಾಡಿದವರಿಗೆ “ನಮ್ಮಲ್ಲಿ ಸಾಕ್ಷಾಧಾರಗಳಿವೆ. ಈಗ ಎಂದೆಂದಿಗೂ ಬಿಡಿಸಿಕೊಳ್ಳಲಾಗದಂತ ಆಪಾದನೆ ಅವರಮೇಲೆ ಹೊರಿಸೋಣ” ಎಂದು ಹೇಳುತ್ತಾರೆ. ಅವರು ಸೂಕ್ತ ಸಮಯಕ್ಕಾಗಿ ಕಾದಿದ್ದು ತಮ್ಮ ಸ್ವಾರಸ್ಯದ ಗಾಳಿ ಮಾತುಗಳನ್ನು ತೇಲಿಬಿಡುತ್ತಾರೆ.KanCCh 207.2

    ಒಬ್ಬನಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನದಲ್ಲಿ ಕೆಲವರು ಸಹಜವಾಗಿಯೇ ತಾವು ಮೋಸ ಹೋಗುವುದು ಮಾತ್ರವಲ್ಲ, ಇತರರನ್ನೂ ಸಹ ಮೋಸಗೊಳಿಸುವ ಅಪಾಯಕ್ಕೊಳಗಾಗುವ ಸಾಧ್ಯತೆಯಿದೆ. ಒಂದುವೇಳೆ ಅಚಾತುರ್ಯದಿಂದ, ಮತ್ತೊಬ್ಬರ ಮನನೋಯಿಸಬೇಕೆಂಬ ಉದ್ದೇಶದಿಂದ ಹೇಳಿರಬಹುದಾದ ತಿಳಗೇಡಿತನದ ಮಾತುಗಳನ್ನು ಇವರು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ಇವು ನಿರ್ಲಕ್ಷಿಸ ಬಹುದಾದ ಕ್ಷುಲ್ಲಕ ವಿಚಾರಗಳಾಗಿದ್ದರೂ, ಕೆಲವು ವೇಳೆ ಸೈತಾನನ ಪ್ರೇರಣೆಯಿಂದ ಮತ್ತೆ ಮತ್ತೆ ಎಲ್ಲರ ಬಳಿ ಹೇಳಿ ಸಣ್ಣ ವಿಷಯವನ್ನು ಬೆಟ್ಟವನ್ನಾಗಿ ಮಾಡುತ್ತಾರೆ.KanCCh 207.3

    ಗಾಳಿ ಮಾತುಗಳಿಗೆ ಕಿವಿಗೊಟ್ಟು, ಮತ್ತೊಬ್ಬರ ಗುಣಸ್ವಭಾವದ ಬಗ್ಗೆ ಸಂಶಯ ಹುಟ್ಟಿಸಿ ಅವರಮನಸ್ಸಿಗೆ ನೋವುಮಾಡಿ ತಾವು ಸಂತೋಷಪಡುವುದು ಕ್ರೈಸ್ತರಿಗೆ ಯೋಗ್ಯವಾದ ನಡವಳಿಕೆಯೇ? ಕ್ರಿಸ್ತನ ಹಿಂಬಾಲಕರನ್ನು ಅವಮಾನಗೊಳಿಸಿದಾಗ ಅಥವಾ ನೋವುಂಟುಮಾಡಿದಾಗ, ಸೈತಾನನು ಸಂತೋಷಿಸುತ್ತಾನೆ. ಅವನು “ಸಹೋದರರ ಮೇಲೆ ದೂರುಹೇಳುವ ದೂರುಗಾರನು” (ಪ್ರಕಟನೆ 12:10), ಸೈತಾನನ ಈ ಕಾರ್ಯದಲ್ಲಿ ಕ್ರೈಸ್ತರಾದ ನಾವು ಅವನಿಗೆ ಸಹಾಯ ಮಾಡಬಹುದೇ?KanCCh 208.1

    ಎಲ್ಲವನ್ನೂ ನೋಡುವ ದೇವರು ನಮ್ಮೆಲ್ಲರ ತಪ್ಪುದೋಷಗಳನ್ನು ಗಮನಿಸುತ್ತಾನೆ. ಆದಾಗ್ಯೂ ಆತನು ನಮ್ಮೆಲ್ಲಾ ತಪ್ಪುಗಳನ್ನು ತಾಳಿಕೊಂಡು ನಮ್ಮ ಬಲಹೀನತೆಗಾಗಿ ಕನಿಕರ ಪಡುತ್ತಾನೆ. ಅಂತದ್ದೇ ಗುಣವನ್ನು ತನ್ನ ಮಕ್ಕಳೂ ಸಹ ಬೆಳೆಸಿಕೊಳ್ಳಬೇಕೆಂಬುದು ದೇವರು ಬಯಸುತ್ತಾನೆ. ಯಥಾರ್ಥರಾದ ಕ್ರೈಸ್ತರು ಇತರರ ತಪ್ಪುದೋಷಗಳನ್ನು ಎತ್ತಿ ಆಡುವುದರಲ್ಲಿ ಸಂತೋಷ ಪಡುವುದಿಲ್ಲ. ತಪ್ಪು ಹುಡುಕುವ ಪ್ರತಿಯೊಂದು ಕಾರ್ಯವೂ, ದೂಷಣೆ, ನಿಂದಿಸುವ ಪ್ರತಿಯೊಂದು ಮಾತುಗಳೂ ಅವರಿಗೆ ನೋವು ತರುತ್ತದೆ.KanCCh 208.2