Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉಡುಪು ಧರಿಸುವ ಬಗ್ಗೆ ಮಾರ್ಗದರ್ಶನ

    ಪುರುಷ ಮತ್ತು ಸ್ತ್ರೀಯರು ಧರಿಸುವ ವಸ್ತ್ರಗಳು ಅವರ ಗುಣಸ್ವಭಾವವನ್ನು ತೋರಿಸುವ ಕೈಗನ್ನಡಿಯಾಗಿದೆ ಎಂದು ಸಾಮಾನ್ಯವಾಗಿ ತಿಳಿಯಲಾಗಿದೆ. ಒಬ್ಬ ವ್ಯಕ್ತಿಯು ಹಾಕುವ ಉಡುಪಿನ ಶೈಲಿಯ ಮೇಲೆ ನಾವು ಅವನ ಸ್ವಭಾವವನ್ನು ನಿರ್ಧರಿಸುತ್ತೇವೆ. ಸರಳವಾದ, ದೈವಭಕ್ತಿಯುಳ್ಳ ಮಹಿಳೆ ಯೋಗ್ಯವಾಗಿ ಒಪ್ಪುವಂತ ರೀತಿಯಲ್ಲಿ ಉಡುಪು ಧರಿಸುತ್ತಾಳೆ. ಇಂತಹ ಉಡುಪು ಹಾಕಿಕೊಳ್ಳುವುದು ಆ ವ್ಯಕ್ತಿಯ ಸುಸಂಸ್ಕೃತ ಅಭಿರುಚಿ ಮತ್ತು ಸನ್ನಡತೆಯ ಸಜ್ಜನ ಮನಸ್ಸನ್ನು ತಿಳಿಸುತ್ತದೆ. ತನ್ನ ಗುಣಸ್ವಭಾವ, ನಡತೆಯಲ್ಲಿಯೂ ಧರಿಸುವ ಉಡುಪಿನಲ್ಲಿಯೂ ಸರಳವಾಗಿಯೂ ನಿರಾಡಂಬರವಾದ ನೈತಿಕ ಮೌಲ್ಯವುಳ್ಳವಳೇ ನಿಜವಾದ ಮಹಿಳೆಯೆಂದು ತಿಳಿದುಕೊಳ್ಳುವಳು. ಉಡುಪಿನಲ್ಲಿ ಸರಳವಾಗಿಯೂ, ಆಕರ್ಷಕವಾಗಿಯೂ ಇರುವವರು ಅಡವಿಯಲ್ಲಿರುವ ಸುಂದರ ಹೂಗಳಿಗೆ ಹೋಲಿಕೆಯಾಗಿದ್ದಾರೆ.KanCCh 212.4

    ಅಡ್ಡೆಂಟಿಸ್ಟ್ ಕ್ರೈಸ್ತರು ದೇವರ ಮುಂದೆ ಎಚ್ಚರಿಕೆಯಿಂದಲೂ ಮತ್ತು ಸೂಕ್ಷ್ಮ ವಿವೇಚನೆಯಿಂದಲೂ ನಡೆದುಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರು ನಮಗೆ ನಮ್ರತೆಯಿಂದ ಹೇಳುತ್ತಾರೆ. ಆರೋಗ್ಯದ ತತ್ವಗಳಿಗೆ ಅನುಗುಣವಾದಂತ ಬಟ್ಟೆ ಧರಿಸುವ ಸಂಪ್ರದಾಯ ಅನುಸರಿಸಿ, ನಮ್ಮ ಅಡ್ರೆಂಟಿಸ್ಟ್ ಸೋದರಿಯರು ಸರಳವಾದ, ಒಳ್ಳೆಯದೂ ಮತ್ತು ಬಾಳಿಕೆ ಬರುವಂತ ಹಾಗೂ ಕಾಲಕ್ಕೆ ತಕ್ಕಂತೆ ಉಡುಪನ್ನು ಧರಿಸಬೇಕು. ಅವರು ದೇವರ ಕೃಪೆಯ ಅಂತರಂಗದ ಸೌಂದರ್ಯವುಳ್ಳವರಾಗಿ ಈ ಲೋಕಕ್ಕೆ ಉಡುಪಿನ ವಿಷಯದಲ್ಲಿ ಮಾದರಿಯಾಗಿರಬೇಕು.KanCCh 213.1

    ಎಲ್ಲಾ ವಿಧದಲ್ಲಿಯೂ ಅನುಕೂಲವೂ, ಸರಳವೂ ಮತ್ತು ಸತ್ಯವೇದಕ್ಕೆ ಅನುಗುಣವಾದ ಆರೋಗ್ಯಕರಶೈಲಿಯ ಉಡುಪು ಮಾರುಕಟ್ಟೆಗೆ ಬಂದಲ್ಲಿ, ಅದನ್ನು ಅಥೈಂಟಿಸ್ಟರು ಹಾಕಿಕೊಳ್ಳಬಹುದು. ಅದು ದೇವರೊಂದಿಗೂ ಅಥವಾ ಈ ಲೋಕದೊಂದಿಗೂ ನಮ್ಮ ಸಂಬಂಧವನ್ನು ಬದಲಾಯಿಸದು. ಕ್ರೈಸ್ತರು ಕ್ರಿಸ್ತನನ್ನು ಮಾದರಿಯಾಗಿಟ್ಟುಕೊಂಡು ದೇವರ ವಾಕ್ಯಕ್ಕೆ ಅನುಗುಣವಾದ ಬಟ್ಟೆ ಹಾಕಬೇಕು. ಉಡುಪಿನವಿಷಯದಲ್ಲಿ ಅತಿರೇಕಕ್ಕೆ ಹೋಗಬಾರದು. ಜನರು ಮೆಚ್ಚುಗೆ ವ್ಯಕ್ತಪಡಿಸಲಿ ಇಲ್ಲವೆ ಖಂಡಿಸಲಿ ನಾವು ಸರಳವಾದ ಉಡುಪು ಧರಿಸಬೇಕು.KanCCh 213.2

    ವಿಧವಿಧವಾದ ಆಧುನಿಕ ಫ್ಯಾಷನ್‌ಬಟ್ಟೆಗಳನ್ನು ಧರಿಸಬಾರದು. ಸರಳವಾಗಿಯೂ, ಆಡಂಬರವಿಲ್ಲದೆ, ಒಪ್ಪುವಂತ ಯೋಗ್ಯವಾದ ಬಟ್ಟೆಗಳನ್ನು ಹಾಕಬೇಕು. ಆದರೆ ಅತಿಯಾದ ಆಡಂಬರದ ಅಥವಾ ಒಪ್ಪ ಓರಣವಿಲ್ಲದ ಕೊಳಕಾದ ಬಟ್ಟೆಧರಿಸಿಕೊಂಡು ನೋಡುವವರು ಆಡಿಕೊಳ್ಳುವುದಕ್ಕೆ ಆಸ್ಪದ ಕೊಡಬಾರದು. ಪರಲೋಕದಿಂದ ದೇವರು ನಿಮ್ಮನ್ನು ನೋಡುತ್ತಾನೆಂದೂ ಹಾಗೂ ದೇವರು ನಿಮ್ಮ ಉಡುಪಿನ ವಿಷಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಸಮ್ಮತಿಸುತ್ತಾನೆಂದು ತಿಳಿದು ಅದಕ್ಕೆ ತಕ್ಕಂತೆ ಬಟ್ಟೆ ಧರಿಸಬೇಕು.KanCCh 213.3