Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉತ್ತಮ ಗುಣಸ್ವಭಾವ ಬೆಳೆಸಿಕೊಳ್ಳುವುದರ ಪ್ರಾಮುಖ್ಯತೆ

    ತಂದೆತಾಯಿಗಳು ತಮ್ಮ ಮಕ್ಕಳಲ್ಲಿ ದೈವೀಕ ಮಾದರಿಯಂತೆ ಉತ್ತಮ ಗುಣಸ್ವಭಾವ ಬೆಳೆಸುವಂತೆ ಮಾಡುವುದು ಅವರಿಗೆ ದೇವರು ಕೊಟ್ಟ ಕರ್ತವ್ಯವಾಗಿದೆ. ಆತನ ಕೃಪೆಯಿಂದ ಅವರು ಈ ಕಾರ್ಯ ಸಾಧಿಸಬಹುದು; ಆದರೆ ಇದಕ್ಕೆ ಅಪಾರವಾದ ತಾಳ್ಮೆ, ಎಚ್ಚರಿಕೆಯ ಹಾಗೂ ಶ್ರದ್ಧೆಯ ಪ್ರಯತ್ನ, ದೃಢನಿರ್ಧಾರ ತೆಗೆದುಕೊಳ್ಳುವ ನೈತಿಕಸ್ಥೆರ್ಯದ ಅಗತ್ಯವಿದೆ. ಒಂದು ಹೊಲವನ್ನು ಅದರಷ್ಟಕ್ಕೆ ಬೆಳೆಯಲು ಬಿಟ್ಟರೆ, ಅದರಲ್ಲಿ ಮುಳ್ಳುಕಳೆಗಳು ಹಾಗೂ ಮುಳ್ಳುಪೊದೆಗಳು ಮಾತ್ರ ಹುಟ್ಟುತ್ತವೆ. ಆದರೆ ಉತ್ತಮವಾದ ಬೆಳೆ ಪಡೆದುಕೊಳ್ಳಬೇಕೆಂದು ಅಪೇಕ್ಷಿಸುವವನು ಮೊದಲು ಹೊಲವನ್ನು ಉತ್ತು ಹದಮಾಡಿ ಬೀಜಬಿತ್ತಬೇಕು. ಆನಂತರ ಭೂಮಿಯು ಮೆದುವಾಗುವಂತೆ ಮಾಡಲು ಮುಳ್ಳುಕಳೆಗಳನ್ನು ಕೀಳಬೇಕು. ಆಗ ಬಿತ್ತಿದ ಬೀಜವು ನಮ್ಮ ಶ್ರಮಕ್ಕೆ ತಕ್ಕಂತೆ ಸಮೃದ್ಧವಾದ ಫಲ ಕೊಡುತ್ತದೆ.KanCCh 240.1

    ಉತ್ತಮ ಗುಣಸ್ವಭಾವ ಬೆಳೆಸಿಕೊಳ್ಳುವುದು ಮಾನವರಿಗೆ ದೇವರು ಒಪ್ಪಿಸಿಕೊಟ್ಟಂತ ಅತ್ಯಂತ ಪ್ರಮುಖ ಕರ್ತವ್ಯವಾಗಿದೆ. ಇದು ಹಿಂದೆಂದಿಗಿಂತಲೂ ಈಗ ಅತ್ಯಂತ ಪ್ರಾಮುಖ್ಯವಾಗಿದೆ. ಹಿಂದಿನ ಜನಾಂಗ ಇಂತಹ ಮಹತ್ವ ಪೂರ್ಣ ಸಮಸ್ಯೆಗಳನ್ನು ಎದುರಿಸಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯುವಕಯುವತಿಯರು ಇಂದು ಎದುರಿಸುತ್ತಿರುವಂತ ಮಹಾ ಇಕ್ಕಟ್ಟಿನ ಪರಿಸ್ಥಿತಿಯನ್ನು ಹಿಂದಿನವರು ಯಾವಾಗಲೂ ಎದುರಿಸಿರಲಿಲ್ಲ.KanCCh 240.2

    ಉತ್ತಮ ಗುಣನಡತೆಯು ಬಲವಾದ ನಿರ್ಧಾರ ಹಾಗೂ ಬಲವಾದ ಸ್ವ ನಿಯಂತ್ರಣವೆಂಬ ಎರಡು ವಿಷಯಗಳನ್ನು ಒಳಗೊಂಡಿದೆ. ಅನೇಕ ಯೌವನಸ್ಥರು ನಿಯಂತ್ರಿಸಲಾಗದ ಬಲವಾದ ಉತ್ಸಾಹ ಹಾಗೂ ಆವೇಶವನ್ನು ಉತ್ತಮ ಗುಣಸ್ವಭಾವವೆಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಆದರೆ ಇಂತಹ ಆವೇಶ ಅಥವಾ ಉದ್ವೇಗದಿಂದ ನಿಯಂತ್ರಿಸಲ್ಪಡುವವನು ದುರ್ಬಲ ವ್ಯಕ್ತಿಯೆಂಬುದು ಸತ್ಯವಾದ ಮಾತು. ಒಬ್ಬ ವ್ಯಕ್ತಿಯ ನಿಜವಾದ ದೊಡ್ಡತನ, ಘನತೆ ಹಾಗೂ ಉದಾತ್ತಗುಣಗಳನ್ನು ಅವನು ನಿಯಂತ್ರಿಸುವ ಭಾವನೆಗಳ ಬಲದಿಂದ ಅಳೆಯುತ್ತಾರೆಯೇ ಹೊರತು, ಅವನನ್ನು ಹತೋಟಿಯಲ್ಲಿಟ್ಟುಕೊಂಡಿರುವ ಭಾವನೆಗಳ ಸಾಮರ್ಥ್ಯದಿಂದಲ್ಲ. ತನ್ನನ್ನು ಯಾರಾದರೂ ಬಯ್ದಾಗ ಅದನ್ನು ಮನಸ್ಸಿಗೆ ಹಚ್ಚಿಕೊಂಡರೂ, ತನ್ನ ಆವೇಶವನ್ನು ಅದುಮಿಟ್ಟುಕೊಂಡು ಶತ್ರುಗಳನ್ನು ಕ್ಷಮಿಸುವವನೇ ನಿಜವಾದ ಬಲಶಾಲಿ ವ್ಯಕ್ತಿಯಾಗಿದ್ದಾನೆ. ಅಂತವರು ತಾನೇ ನಿಜವಾದ ಹೀರೋಗಳು (ನಾಯಕರು).KanCCh 240.3

    ಕೆಲವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಉಪಯೋಗಿಸದೆ ಸಂಕುಚಿತ ಮನೋಭಾವ ಹೊಂದಿದವರಾಗಿ ಕಡಿಮೆ ಬುದ್ಧಿಶಕ್ತಿಯುಳ್ಳವರಾಗಿದ್ದಾರೆ. ಇಂತವರು ದೇವರು ತಮಗೆ ಕೊಟ್ಟ ಸಾಮರ್ಥ್ಯವನ್ನು ಕ್ರಿಸ್ತನಸೇವೆಯಲ್ಲಿ ಉಪಯೋಗಿಸಿಕೊಂಡು ಬೆಳವಣಿಗೆ ಹೊಂದಿದಾಗ, ಉನ್ನತವಾದ ಗುಣಸ್ವಭಾವ ಬೆಳೆಸಿಕೊಂಡು ಅನೇಕರನ್ನು ಆತನ ರಾಜ್ಯಕ್ಕೆ ತರುತ್ತಾರೆ. ಜ್ಞಾನವು ಒಂದು ಶಕ್ತಿಯಾಗಿದೆ; ಆದರೆ ಹೃದಯದಲ್ಲಿ ಒಳ್ಳೆತನವಿಲ್ಲದ ಬೌದ್ಧಿಕ ಸಾಮರ್ಥ್ಯವು (Intellectual) ಕೆಟ್ಟತನಕ್ಕಾಗಿ ಉಪಯೋಗಿಸಲ್ಪಡುವ ಶಕ್ತಿಯಾಗಿದೆ.KanCCh 241.1

    ದೇವರು ನಮಗೆ ಬೌದ್ಧಿಕ ಹಾಗೂ ನೈತಿಕ ಸಾಮರ್ಥ್ಯಗಳನ್ನು ಕೊಟ್ಟಿದ್ದಾನೆ. ಆದರೆ ಪ್ರತಿವ್ಯಕ್ತಿಯೂ ತನ್ನ ಗುಣಸ್ವಭಾವ ಬೆಳವಣಿಗೆಯಲ್ಲಿ ಬಹುಮಟ್ಟಿಗೆ ತಾನೇ ಕಾರಣನಾಗಿದ್ದಾನೆ. ನಿತ್ಯವಾದ ಬಂಡೆಯಾದ ಕ್ರಿಸ್ತನೆಂಬ ಅಸ್ತಿವಾರದ ಮೇಲೆ ಹೇಗೆ ಕಟ್ಟಲ್ಪಡಬೇಕೆಂಬ ವಿಷಯದಲ್ಲಿ ದೇವರವಾಕ್ಯವು ನಮ್ಮನ್ನು ಎಚ್ಚರಿಸುತ್ತದೆ. ನಮ್ಮ ಕಾರ್ಯವು ಹೇಗಿದೆ ಎಂಬುದನ್ನು ಪ್ರಕಟಪಡಿಸುವ ಒಂದುದಿನ ಬರಲಿದೆ. ದೇವರು ನಮಗೆ ಕೊಟ್ಟಿರುವ ಬೌದ್ಧಿಕ ಹಾಗೂ ನೈತಿಕ ಸಾಮರ್ಥ್ಯಗಳನ್ನು ಈ ಲೋಕದಲ್ಲಿ ಉಪಯುಕ್ತಕರವಾಗಿಯೂ ಮತ್ತು ಮುಂದಿನ ಪರಲೋಕದ ಉನ್ನತಜೀವನಕ್ಕಾಗಿ ಬೇಕಾದ ಉತ್ತಮಗುಣಸ್ವಭಾವ ಬೆಳೆಸಿಕೊಳ್ಳುವ ಸಮಯವು ಇಂದೇಆಗಿದೆ.KanCCh 241.2

    ನಮ್ಮ ಜೀವನದಲ್ಲಿ ಮಾಡುವ ಪ್ರತಿಯೊಂದು ಕಾರ್ಯವೂ ಸಹ, ಅದು ಅಷ್ಟೇನೂ ಮುಖ್ಯವಲ್ಲದಿದ್ದರೂ, ನಮ್ಮ ಗುಣಸ್ವಭಾವ ರೂಪಿಸುವುದರಲ್ಲಿ ಪ್ರಭಾವ ಬೀರುತ್ತದೆ. ಈ ಲೋಕದ ಎಲ್ಲಾ ಸಂಪತ್ತಿಗಿಂತಲೂ ಒಳ್ಳೆಯ ಸ್ವಭಾವ ಹಾಗೂ ಹೆಸರು ಬಹಳ ಅಮೂಲ್ಯವಾಗಿದೆ. ಇಂತಹ ಸ್ವಭಾವ ಬೆಳೆಸಿಕೊಳ್ಳುವ ಕಾರ್ಯವು ಅತ್ಯಂತ ಶ್ರೇಷ್ಟವಾಗಿದ್ದು, ಎಲ್ಲರೂ ಸಹ ಅದನ್ನು ಗಳಿಸಿಕೊಳ್ಳಬೇಕು. ಸನ್ನಿವೇಶ ಅಥವಾ ಸಂದರ್ಭಗಳಿಂದ ರೂಪಿತವಾದ ಗುಣಸ್ವಭಾವವು ಬದಲಾಗುತ್ತದೆ ಮತ್ತು ಅಸಮಂಜಸವಾಗಿದೆ. ಇಂತಹ ಗುಣ ಹೊಂದಿರುವವರು ತಮ್ಮ ಜೀವನದಲ್ಲಿ ಯಾವುದೇ ಉನ್ನತವಾದ ಗುರಿ ಅಥವಾ ಉದ್ದೇಶ ಹೊಂದಿರುವುದಿಲ್ಲ. ಅಲ್ಲದೆ ಇತರರ ಗುಣ ಸ್ವಭಾವ ವನ್ನು ಉತ್ತಮಗೊಳಿಸುವಲ್ಲಿಯೂ ಯಾವುದೇ ಪ್ರಭಾವ ಇರುವುದಿಲ್ಲ. ಅವರು ನಿಷ್ಟಯೋಜಕರೂ ಹಾಗೂ ದುರ್ಬಲರೂ ಆಗಿರುತ್ತಾರೆ.KanCCh 241.3

    ಈ ಲೋಕದಲ್ಲಿ ನಾವು ಜೀವಿಸುವುದು ಅಲ್ಪಕಾಲ ಮಾತ್ರ. ಆದುದರಿಂದ ಅದನ್ನು ವಿವೇಕತನದಿಂದ ಉಪಯೋಗಿಸಿಕೊಳ್ಳಬೇಕು. ದೇವರು ತನ್ನ ಸಭೆಯು ಲವಲವಿಕೆ ಯಿಂದಲೂ, ಉತ್ಸಾಹ ದಿಂದಲೂ, ಭಕ್ತಿಪೂರ್ವಕವಾಗಿ ಚಟುವಟಿಕೆಯಿಂದಿರಬೇಕೆಂದು ಬಯಸುತ್ತಾನೆ. ಆದರೆ ಅಲ್ವೆಂಟಿಸ್ಪರಾದ ನಮ್ಮ ಜನರು ಈ ಉದ್ದೇಶದಿಂದ ದೂರವಿದ್ದಾರೆ. ದೇವರು ಆತ್ಮೀಕವಾಗಿ ಬಲಶಾಲಿಗಳೂ, ನೈತಿಕತೆಯಲ್ಲಿ ಧೈರ್ಯವುಳ್ಳವರೂ ಹಾಗೂ ಕ್ರಿಯಾತ್ಮಕವಾಗಿ ಚೈತನ್ಯಶಾಲಿಗಳಾಗಿರುವ ಕ್ರೈಸ್ತರನ್ನು ಕರೆದು ಅವರು ಆತನಿಗಾಗಿ ನಿರ್ಣಾಯಾತ್ಮಕವಾದ ಪ್ರಭಾವ ಬೀರಬೇಕೆಂದು ಬಯಸುತ್ತಾನೆ. ದೇವರು ನಮಗೆ ಅತ್ಯಂತ ಪ್ರಾಮುಖ್ಯವಾದ ಗಂಭೀರಸತ್ಯಗಳನ್ನು ಪವಿತ್ರವಾದ ವಿಶ್ವಾಸದಿಂದ ಒಪ್ಪಿಸಿಕೊಟ್ಟಿದ್ದಾನೆ. ಇವುಗಳ ಪ್ರಭಾವವನ್ನು ನಾವು ನಮ್ಮ ಜೀವನದಲ್ಲಿ ಹಾಗೂ ಶೀಲಸ್ವಭಾವದಲ್ಲಿ ತೋರಿಸಬೇಕಾಗಿದೆ.KanCCh 242.1