Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೈಹಿಕ ಶ್ರಮದ ಗೌರವ

    ದೈಹಿಕ ಶ್ರಮಕ್ಕೆ ನಿಜವಾದ ಗೌರವವಿದೆ ಎಂಬುದರ ಬಗ್ಗೆ ಯುವಕ ಯುವತಿಯರಿಗೆಮನವರಿಕೆ ಮಾಡಬೇಕು. ದೇವರು ನಿರಂತರವಾದ ಕೆಲಸಗಾರನಾಗಿದ್ದಾನೆಂದು ಅವರಿಗೆತಿಳಿಸಿ. ನಿಸರ್ಗದ ಎಲ್ಲವೂಸಹ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತವೆ. ನಮ್ಮದೈವನಿಯಮಿತ ಕಾರ್ಯ ನೆರವೇರಿಸಲು ನಾವೂ ಸಹ ಕಾರ್ಯಶೀಲರಾಗಿರಬೇಕು.ಉಪಯುಕ್ತ 1 ಮಾನಸಿಕ ಕೆಲಸದೊಂದಿಗೆ ದೈಹಿಕ ಶ್ರಮವೂ ಸೇರಿದಾಗ, ಅದು ನಿಜಜೀವನದಲ್ಲಿ ಶಿಸ್ತು ಪಾಲಿಸಿದಂತಾಗುತ್ತದೆ. ದೇವರ ಕಾರ್ಯವನ್ನು ಉತ್ತಮವಾಗಿನಿರ್ವಹಿಸಲು ಅರ್ಹರಾಗುವಂತೆ ಇದರಿಂದ ಮನಸ್ಸು ಮತ್ತು ಶರೀರಕ್ಕೆ ಶಿಕ್ಷಣದೊರೆತಂತಾಗುವುದು.KanCCh 257.3

    ಕೆಲಸವು ಎಷ್ಟೇ ಕೀಳಾಗಿರಲಿ ಅಥವಾ ಗುಲಾಮತನದ ಚಾಕರಿಯಾಗಿರಲಿ, ಅದನ್ನುಮಾಡುವುದಕ್ಕೆ ನಾವು ನಾಚಿಕೆಪಡಬಾರದು. ದೈಹಿಕ ಶ್ರಮವು ಶ್ರೇಷ್ಠವಾಗಿದೆ. ಯಾರುಪಾತ್ರೆ ತೊಳೆಯುವುದಾಗಲಿ ಅಥವಾ ಬಟ್ಟೆ ಒಗೆಯುವ ಕೆಲಸ ಮಾಡಲಿ, ಅಂತವರುತಮ್ಮ ಕರ್ತವ್ಯ ಮಾಡುವುದಲ್ಲದೆ, ತಮ್ಮ ಧರ್ಮವನ್ನು ಗೌರವಿಸುತ್ತಾರೆ. ಕೈಗಳಿಂದದೈಹಿಕ ಕೆಲಸಮಾಡುತ್ತಿರುವಾಗ, ಮನಸ್ಸು ಉನ್ನತವಾದ ಹಾಗೂ ಪರಿಶುದ್ಧವಾದಆಲೋಚನೆಗಳಿಂದ ಶ್ರೇಷ್ಠವಾಗುತ್ತದೆ.KanCCh 258.1

    ದೈಹಿಕ ಕೆಲಸವನ್ನು ಅಜಾಗರೂಕತೆಯಿಂದಲೂ, ನಿರ್ಲಕ್ಷ್ಯದಿಂದಲೂ ಹಾಗೂತಾತ್ಸಾರದಿಂದಲೂ ಮಾಡುವುದೇ, ಜನರು ಇದನ್ನು ಕೀಳುಕೆಲಸವೆಂದು ಭಾವಿಸುವುದಕ್ಕೆಒಂದು ಮುಖ್ಯಕಾರಣವಾಗಿದೆ. ಇದನ್ನು ಅನಿವಾರ್ಯವಾಗಿ ಮಾಡುತ್ತಾರೆಯೇ ಹೊರತು,ಇಷ್ಟಪಟ್ಟಿದ್ದರಿಂದಲ್ಲ. ಕೆಲಸಗಾರನು ಆಸಕ್ತಿಯಿಲ್ಲದೆ ದೈಹಿಕ ಕೆಲಸಮಾಡುವುದರಿಂದ,ಅವನು ಸ್ವಗೌರವ ಮಾತ್ರವಲ್ಲದೆ, ಇತರರಗೌರವವನ್ನೂ ಕಳೆದುಕೊಳ್ಳುತ್ತಾನೆ. ಈತಪ್ಪನ್ನು ಅವರು ಸರಿಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳುಸಮಯದ ಮಹತ್ವವನ್ನುಅರಿತು ಕೆಲಸ ಮಾಡಬೇಕು. ಅಲ್ಲದೆ ತಮ್ಮ ಬುದ್ಧಿ ಹಾಗೂ ಕೈಗಳನ್ನು ಉಪಯೋಗಿಸಿಮಾಡುವ ಕೆಲಸವು ಪರಿಪೂರ್ಣವಾಗಿರಬೇಕು.KanCCh 258.2

    ಮಕ್ಕಳನ್ನು ಸೋಮಾರಿಗಳಂತೆ ಬೆಳೆಸುವುದು ಪಾಪವಾಗಿದೆ. ಬೇಸರವಾದರೂ ಸರಿಯೇದೈಹಿಕ ಕೆಲಸಗಳನ್ನು ಅವರು ಮಾಡಬೇಕು. ಬೇಸರ ಮತ್ತು ಬಳಲಿಕೆಯ ನಡುವೆಸಾಕಷ್ಟು ವ್ಯತ್ಯಾಸವಿದೆ. ಕೆಲಸ ಮಾಡುವಾಗ ದೊಡ್ಡವರಿಗಿಂತ ಮಕ್ಕಳಿಗೆ ಹೆಚ್ಚುವಿಶ್ರಾಂತಿಬೇಕಾಗಿದೆ. ದೈಹಿಕ ಶ್ರಮದಿಂದ ಅವರಿಗೆ ತಾವು ಉಪಯುಕ್ತಕಾರ್ಯಮಾಡುತ್ತಿದ್ದೇವೆಂಬ ಸಂತೋಷವುಂಟಾಗುವುದು. ಆರೋಗ್ಯಕರ ಶ್ರಮದ ನಂತರಸುಖವಾದ ನಿದ್ರೆಬರುವುದರಿಂದ ಮಕ್ಕಳು ಮರುದಿನದ ಕೆಲಸಕ್ಕೆ ಚೈತನ್ಯ ಹೊಂದುವರು.KanCCh 258.3