Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧಿಕ ಮಸಾಲೆಯುಕ್ತ ಆಹಾರಗಳು

    ಇಂದು ಜನರು ಹೆಚ್ಚಾಗಿ ಉಪಯೋಗಿಸುವ ಆಹಾರ ರುಚಿಸುವಂತೆ ಮಾಡುವಪದಾರ್ಥಗಳು, ಉಪ್ಪಿನಕಾಯಿ ಮೊದಲಾದ ವ್ಯಂಜನಗಳು (Condiments)ಜೀರ್ಣಕ್ರಿಯೆಗೆ ಬಹಳ ಹಾನಿಕರವಾಗಿವೆ. ಇಂದಿನ ಆಧುನಿಕ ಕಾಲದಲ್ಲಿ ಆಹಾರವುಸರಳವಾಗಿದ್ದಷ್ಟು ಒಳ್ಳೆಯದು. ಸಾಸಿವೆ, ಮೆಣಸು, ಉಪ್ಪಿನಕಾಯಿ, ಹೆಚ್ಚು ಮಸಾಲೆ ಹಾಕಿತಯಾರಿಸಿದ ಆಹಾರಗಳು ಜಠರವನ್ನು ಕೆರಳಿಸಿ, ರಕ್ತವನ್ನು ಮಲಿನಗೊಳಿಸುತ್ತವೆ. ಕುಡುಕರಜಠರವು ಉರಿಯೂತ ಸ್ಥಿತಿಯಲ್ಲಿರುವುದು ಪರಿಣಾಮಗಳೆಂದು ತಿಳಿದಿದೆ.ಮೇಲೆ ತಿಳಿಸಿದ ಪದಾರ್ಥಗಳೂ ಸಹ ಜಠರದಲ್ಲಿ ಇದೇ ರೀತಿಯಾದ ಕೆರಳಿಕೆಉಂಟುಮಾಡುತ್ತವೆ. ಇದನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಲ್ಲಿ, ಸರಳವಾಗಿ ತಯಾರಿಸಿದ ಆಹಾರವು ಹಸಿವನ್ನು ತೃಪ್ತಿಗೊಳಿಸುವುದಿಲ್ಲ. ದೇಹವು ಇನ್ನೂ ಹೆಚ್ಚಿನ ಪ್ರಚೋದನೆಉಂಟುಮಾಡುವ ಆಹಾರವನ್ನೇ ಬಯಸುತ್ತದೆ.KanCCh 275.3

    ಕೆಲವರು ಮಸಾಲೆಭರಿತ ಆಹಾರದ ರುಚಿಗೆ ಎಷ್ಟೊಂದು ದಾಸರಾಗಿದ್ದಾರೆಂದರೆ,ಅಂತಹ ಪದಾರ್ಥಗಳನ್ನು ಬಿಟ್ಟು ಬೇರೆ ಯಾವುದೂ ಸಹ ಅವರಿಗೆ ಸಂತೋಷತರುವುದಿಲ್ಲ (ಅಜಿನೊಮೋಟೋ ಅಂದರೆ ರುಚಿಹೆಚ್ಚಿಸುವ ಪೌಡರ್, ಮಸಾಲೆ ಭರಿತವಿವಿಧ ಮಂಚೂರಿಗಳು, ಕರಿದ ಪದಾರ್ಥಗಳು ಹೊಟ್ಟೆಯನ್ನು ಕೆರಳಿಸುವುದರಿಂದ,ಇದರ ರುಚಿಗೆ ಮನಸೋತವರು, ಬೇರೆ ರೀತಿಯ ಸರಳವಾದ ಆಹಾರವನ್ನುಇಷ್ಟಪಡುವುದಿಲ್ಲ). ಮಸಾಲೆಯುಕ್ತ ಆಹಾರಪದಾರ್ಥಗಳು ಮೊದಲು ಜಠರದಕೋಮಲವಾದ ಲೇಪ, ಪದರವನ್ನು (Coating) ಉರಿಯೂತಗೊಳಿಸಿ, ಕೊನೆಯಲ್ಲಿಅತಿಸೂಕ್ಷ್ಮವಾದ ಒಳಪರೆಯ (Membrane) ಸಹಜವಾದ ಸಂವೇದನತ್ವವನ್ನುKanCCh 276.1

    (Senstiveness, ಶರೀರದ ಇಂದ್ರಿಯಗಳಿಗೆ ಅಥವಾ ಮನಸ್ಸಿಗೆ ಒದಗುವ ಬಾಹ್ಯಪ್ರಚೋದನೆಗಳನ್ನು ಅರಿಯುವ ಸ್ಥಿತಿ) ನಾಶ ಮಾಡುತ್ತದೆ. ರಕ್ತವು ಮಲಿನಗೊಳ್ಳುವುದರಿಂದಅಂತವರಲ್ಲಿ ಮೃಗೀಯ ಪ್ರವೃತ್ತಿ ಕಂಡುಬರುವುದು. ಆಗ ಅವರಲ್ಲಿ ನೈತಿಕ ಹಾಗೂKanCCh 276.2

    ಬೌದ್ಧಿಕ ಸಾಮರ್ಥ್ಯಗಳು ಬಲಹೀನಗೊಳ್ಳುವುದರಿಂದ ಅವರು ನೀಚವಾದ ಭಾವೋದ್ರೇಕದದಾಸರಾಗುವರು. ಆದುದರಿಂದ ತಾಯಂದಿರು ಮನೆಯಲ್ಲಿ ಸರಳವಾದ ಆದರೆಪೋಷಕಾಂಶಭರಿತ ಆಹಾರವನ್ನು ಮಾತ್ರ ತಯಾರಿಸುವುದು ಕುಟುಂಬದ ಆರೋಗ್ಯದದೃಷ್ಟಿಯಿಂದ ಬಹಳ ಒಳ್ಳೆಯದು.KanCCh 276.3

    Larger font
    Smaller font
    Copy
    Print
    Contents