Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಕ್ರಮಬದ್ಧವಾದ ಆಹಾರ ಸೇವನೆ

  ಊಟಮಾಡಿದ ನಂತರ ಐದುಗಂಟೆಗಳವರೆಗೆ ಹೊಟ್ಟೆಗೆ ವಿಶ್ರಾಂತಿ ಕೊಡಬೇಕು.ಮುಂದಿನ ಊಟಮಾಡುವ ತನಕ ಯಾವುದೇ ಆಹಾರವನ್ನು ಸಣ್ಣ ಪ್ರಮಾಣದಲ್ಲಿಯೂತೆಗೆದುಕೊಳ್ಳಬಾರದು. ಈ ಅವಧಿಯಲ್ಲಿ ಜಠರವು ತನ್ನ ಕಾರ್ಯವನ್ನು ಮಾಡುವುದರಿಂದಆಹಾರವು ಸಂಪೂರ್ಣವಾಗಿ ಜೀರ್ಣಗೊಂಡು, ತಿರುಗಿ ಆಹಾರಸೇವನೆಗೆ ಸಿದ್ಧವಾದಸ್ಥಿತಿಯಲ್ಲಿರುತ್ತದೆ.KanCCh 276.4

  ಕ್ರಮಬದ್ಧವಾಗಿ ಊಟ ಮಾಡುವುದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು.ಊಟವಾದ 4-5 ಗಂಟೆಗಳ ನಂತರ ತಿರುಗಿ ಆಹಾರ ಸೇವಿಸುವುದಕ್ಕೆ ಮೊದಲುಯಾವುದೇ ರೀತಿಯ ಬೇಕರಿತಿಂಡಿಗಳು, ಹಣ್ಣುಗಳು ಅಥವಾ ಇನ್ನಾವುದೇ ಆಹಾರಸೇವಿಸಬಾರದು. ಕ್ರಮವಿಲ್ಲದ ಆಹಾರಸೇವನೆಯು ಜೀರ್ಣಾಂಗಗಳ ಆರೋಗ್ಯಕರಸುಸ್ಥಿತಿಯನ್ನು ನಾಶಪಡಿಸುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರುಉಂಟಾಗುವುದಲ್ಲದೆ, ಅಂತವರಲ್ಲಿ ಹರ್ಷಭಾವನೆ ಇರುವುದಿಲ್ಲ. ಮಲಗುವುದಕ್ಕೆ ಮೊದಲುಜಠರವು ತನ್ನ ಕಾರ್ಯವನ್ನೆಲ್ಲಾ ಮುಗಿಸಿರಬೇಕು. ಆಗ ಜಠರವನ್ನೂ ಒಳಗೊಂಡಂತೆ, ದೇಹದ ಇತರ ಅಂಗಗಳೂ ಸಹ ವಿಶ್ರಾಂತಿ ಅನುಭವಿಸುತ್ತವೆ. ಕುಳಿತುಕೊಂಡು ಕೆಲಸಮಾಡುವಂತವರಿಗೆ ರಾತ್ರಿ 10-11 ಗಂಟೆಗೆ ಊಟಮಾಡುವುದು ಆರೋಗ್ಯಕ್ಕೆ ಬಹಳ ಹಾನಿಕರ.KanCCh 276.5

  ಊಟಮಾಡಿದ ನಂತರ ಜೀರ್ಣಾಂಗಗಳಿಗೆ ವಿಶ್ರಾಂತಿಬೇಕು. ಅನೇಕರಲ್ಲಿ ಬಳಲಿಕೆಉಂಟಾಗಿ ಆಹಾರ ಸೇವಿಸಬೇಕೆಂಬ ಭಾವನೆ ಬರುವುದುಂಟು. ಅವರು ಆಗಾಗ್ಗೆ ಹೆಚ್ಚುಆಹಾರಸೇವಿಸಿ ಜೀರ್ಣಾಂಗಗಳಿಗೆ ವಿಶ್ರಾಂತಿ ಕೊಡದಿರುವುದೇ ಇದಕ್ಕೆ ಕಾರಣ. ಒಂದುಸಾರಿಊಟಮಾಡಿದ ನಂತರ 5-6 ಗಂಟೆಗಳ ನಂತರ ಊಟ ಮಾಡುವುದು ಒಳ್ಳೆಯದು.ಇಂತಹ ಯೋಜನೆ ಹಾಕಿಕೊಂಡಲ್ಲಿ ದಿನಕ್ಕೆ ಮೂರುಸಾರಿಗೆ ಬದಲಾಗಿ ಎರಡುಸಾರಿಊಟ ಮಾಡುವುದು ಅತ್ಯುತ್ತಮ ಅಭ್ಯಾಸವಾಗಿದೆ. ಇದರಿಂದ ಆರೋಗ್ಯಕ್ಕೆ ಒಳ್ಳೆಯದು.ಆದರೆ ದಿನಕ್ಕೆ ಮೂರುಸಾರಿ ಊಟಮಾಡಬೇಕೆಂದು ಬಯಸುವವರು, ಸಂಜೆಯಲ್ಲಿಬಹಳ ಕಡಿಮೆಯಾಗಿ ಸೇವಿಸಬೇಕು. ಇದರಿಂದ ಮಲಗುವ ಮೊದಲು ಆಹಾರವುಸುಲಭವಾಗಿ ಜೀರ್ಣಗೊಳ್ಳುವುದು. ಹೆಚ್ಚಾಗಿ ಹಣ್ಣು ಸೇವಿಸುವುದು ಇನ್ನೂ ಒಳ್ಳೆಯದು.KanCCh 277.1

  ನಾವು ತಿನ್ನುವ ಆಹಾರವು ಹೆಚ್ಚು ಬಿಸಿಯಾಗಿಯೂ ಅಥವಾ ಹೆಚ್ಚು ತಣ್ಣಗೂಇರಬಾರದು. ಆಹಾರವು ತಣ್ಣಗಿದ್ದಲ್ಲಿ ಅದು ಜೀರ್ಣವಾಗುವುದಕ್ಕೆ ಮೊದಲು, ಅದನ್ನುಜಠರವು ಬೆಚ್ಚಗೆ ಮಾಡಲು ತನ್ನಲ್ಲಿರುವ ಜೈವಿಕಶಕ್ತಿಯನ್ನು ಉಪಯೋಗಿಸಬೇಕಾಗುತ್ತದೆ.ತಂಪುಪಾನೀಯಗಳು ಈ ಕಾರಣದಿಂದಲೇ ಹಾನಿಕರವಾದಲ್ಲಿ, ಬಿಸಿಪಾನೀಯಗಳುಶಕ್ತಿಗುಂದಿಸುತ್ತವೆ. ಊಟಮಾಡುವಾಗ ಹೆಚ್ಚು ನೀರು ಕುಡಿದಷ್ಟು, ಆಹಾರವುಜೀರ್ಣವಾಗುವುದಕ್ಕೆ ಅಷ್ಟೇ ಕಷ್ಟವಾಗುತ್ತದೆ. ಯಾಕೆಂದರೆ ಜೀರ್ಣಕ್ರಿಯೆ ಆರಂಭವಾಗುವುದಕ್ಕೆಮೊದಲು ದ್ರವ ಪದಾರ್ಥವು ಹೀರಿಕೊಳ್ಳಬೇಕು. ಉಪ್ಪನ್ನು ಸಾಧ್ಯವಾದಷ್ಟು ಕಡಿಮೆಉಪಯೋಗಿಸಬೇಕು. ಉಪ್ಪಿನಕಾಯಿ ಮತ್ತು ಮಸಾಲೆಭರಿತ ವಸ್ತುಗಳನ್ನು ತಿನ್ನಬಾರದು.ಆಯಾ ಋತುಮಾನಗಳಲ್ಲಿ ದೊರೆಯುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಆಗಊಟಮಾಡುವಾಗ ನೀರು ಕುಡಿಯಬೇಕಾಗುವುದಿಲ್ಲ. ಆಹಾರವನ್ನು ನಿಧಾನವಾಗಿಯೂಹಾಗೂ ಚೆನ್ನಾಗಿ ಅಗಿದು ತಿನ್ನಬೇಕು. ಆಹಾರದೊಂದಿಗೆ ಜೊಲ್ಲು ಅಂದರೆ ಲಾಲಾರಸವುಸಮರ್ಪಕವಾಗಿ ಮಿಶ್ರಗೊಂಡು, ಜೀರ್ಣಾಂಗ ದ್ರವಗಳು ತಮ್ಮ ಕಾರ್ಯ ಮಾಡಲುಇದು ಅಗತ್ಯವಾಗಿದೆ.KanCCh 277.2

  Larger font
  Smaller font
  Copy
  Print
  Contents