Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಆರೋಗ್ಯ ಸುಧಾರಣಾ ತತ್ವಗಳ ಅಳವಡಿಕೆ

    ಆಹಾರದಲ್ಲಿ ಸುಧಾರಣೆ ಮಾಡಿಕೊಳ್ಳುವುದು ನಿಜವಾಗಿಯೂ ಒಂದು ಜಾಣತನವಾಗಿದೆ.ನಿಮ್ಮ ಆಹಾರ ಪದ್ಧತಿಗಿಂತ ಇತರರ ಆಹಾರ ಪದ್ಧತಿಯು ಬೇರೆಯಾಗಿದ್ದಲ್ಲಿ, ಅವರನ್ನುನೀವು ಟೀಕೆ ಮಾಡಬಾರದು. ಒಬ್ಬೊಬ್ಬರ ಅಭ್ಯಾಸಗಳನ್ನು ಒಂದೇರೀತಿಯ ನಿಯಮಗಳಮೂಲಕ ನಿಯಂತ್ರಿಸುವುದು ಅಸಾಧ್ಯ. ಆಹಾರಕ್ರಮದಲ್ಲಿ ತಾನು ಇತರರಿಗೆ ಮಾದರಿಯಾಗಿದ್ದೇನೆಂದು ಯಾರೂ ಸಹ ತಿಳಿದುಕೊಳ್ಳಬಾರದು. ಎಲ್ಲರೂ ಸಹ ಒಂದೇರೀತಿಯ ಆಹಾರ ತಿನ್ನಲಾಗದು. ಒಬ್ಬರಿಗೆ ಆರೋಗ್ಯಕರವಾದ ಮತ್ತು ರುಚಿಕರ ಆಹಾರವುಮತ್ತೊಬ್ಬರಿಗೆ ಇಷ್ಟವಾಗದಿರಬಹುದು ಅಥವಾ ಆರೋಗ್ಯಕ್ಕೆ ಹಾನಿಕರವಾಗಿಯೂಇರಬಹುದು. ಕೆಲವರು ಹಾಲು ಕುಡಿಯುವುದಿಲ್ಲ. ಬೇರೆ ಕೆಲವರು ಅದನ್ನು ಹೆಚ್ಚಾಗಿಉಪಯೋಗಿಸಬಹುದು. ಕೆಲವರಿಗೆ ಬಟಾಣಿ, ಬೀನ್ಸ್‌ಗಳು ಜೀರ್ಣವಾಗುವುದಿಲ್ಲ, ಬೇರೆಕೆಲವರಿಗೆ ಅದು ಆರೋಗ್ಯಕರವೂ ಹಿತಕರವೂ ಆಗಿರಬಹುದು. ಕೆಲವರಿಗೆ ಸಾಮಾನ್ಯವಾದಧಾನ್ಯದಿಂದ ಮಾಡಿದ ಆಹಾರವು ಅತ್ಯುತ್ತಮವಾಗಿದ್ದಲ್ಲಿ, ಬೇರೆ ಕೆಲವರಿಗೆ ಅದನ್ನುಉಪಯೋಗಿಸಲಾಗದಿರಬಹುದು.KanCCh 277.3

    ನಿಮ್ಮ ಆಹಾರಕ್ರಮವು ತಪ್ಪಾಗಿದಲ್ಲಿ, ಅದನ್ನು ಬೇಗನೆ ಸರಿಪಡಿಸಿಕೊಳ್ಳುವುದು ಒಳ್ಳೆಯದು.ಹೆಚ್ಚಾಗಿನಿಂದ ನಿಮಿತ್ತ ಅಜೀರ್ಣ ಉಂಟಾಗಿದ್ದಲ್ಲಿ, ಒಂದು ಹೊತ್ತು ತಿನ್ನದಿರುವುದುಉತ್ತಮ. ಇದರಿಂದ ಜಠರದ ಜೈವೀಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು. ಬಹಳಕಾಲದವರೆಗೆ ಹೆಚ್ಚೆಚ್ಚಾಗಿ ತಿಂದು ಜೀರ್ಣಾಂಗಗಳಿಗೆ ವಿಶ್ರಾಂತಿ ಇಲ್ಲದಿದ್ದಲ್ಲಿ, ಜಠರವುಮೊದಲಿನ ಆರೋಗ್ಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲಾಗದು.KanCCh 278.1

    ಆದರೆ ಆಹಾರಸೇವನೆಯಲ್ಲಿ ಸರಿಯಾದ ಕ್ರಮ ಉಪಯೋಗಿಸುವಾಗ, ಜೀರ್ಣಾಂಗಗಳುಇನ್ನೂ ಹೆಚ್ಚು ಶಕ್ತಿಗುಂದುವುದನ್ನು ತಡೆಗಟ್ಟಬಹುದು. ಇದರಿಂದ ಆರೋಗ್ಯವು ತಿರುಗಿಹೆಚ್ಚುಕಡಿಮೆ ಸಂಪೂರ್ಣವಾಗಿ ಸುಧಾರಿಸುವುದು.KanCCh 278.2

    ಶಾರೀರಿಕ ಕೆಲಸವನ್ನು ಶ್ರಮವಹಿಸಿ ಮಾಡುವಂತವರು, ತಮ್ಮ ಊಟದ ಗುಣಮಟ್ಟಅಥವಾ ತೆಗೆದುಕೊಳ್ಳುವ ಆಹಾರದ ಪ್ರಮಾಣದ ಬಗ್ಗೆ, ಕುಳಿತು ಕೆಲಸ ಮಾಡುವವರಷ್ಟುಎಚ್ಚರಿಕೆಯಿಂದಿರಬೇಕಿಲ್ಲ. ಆದಾಗ್ಯೂ ಇಂತವರೂ ಸಹ ತಿನ್ನುವುದರಲ್ಲಿ ಹಾಗೂಕುಡಿಯುವುದರಲ್ಲಿ ಹಿತಮಿತವಾಗಿದ್ದಲ್ಲಿ, ಉತ್ತಮ ಆರೋಗ್ಯ ಹೊಂದಿರುತ್ತಾರೆ. ಆಹಾರದಸುಧಾರಣೆಯು ಹಂತಹಂತವಾಗಿ ನಡೆಯಬೇಕು. ಪ್ರಾಣಿಗಳಲ್ಲಿ ರೋಗಗಳುಹೆಚ್ಚಾಗುತ್ತಿರುವಾಗ, ಹಾಲು ಮತ್ತು ಮೊಟ್ಟೆಗಳ ಉಪಯೋಗವೂ ಸಹ ಅಷ್ಟೊಂದುಸುರಕ್ಷಿತವಾಗಿಲ್ಲ. ಇವುಗಳಿಗೆ ಬದಲಾಗಿ ಇಷ್ಟೇ ಪೌಷ್ಠಿಕಾಂಶ ದೊರೆಯುವ ಹೆಚ್ಚುಖರ್ಚಿಲ್ಲದಮತ್ತು ಆರೋಗ್ಯಕರವಾದ ಇತರ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವ ಪ್ರಯತ್ನಮಾಡಬೇಕು. ಮೊಟ್ಟೆ ಮತ್ತು ಹಾಲಿಲ್ಲದ ಆಹಾರಗಳನ್ನು ಸೇವಿಸಲು ಈಗಿನಿಂದಲೇರೂಢಿಸಿಕೊಳ್ಳಬೇಕು.KanCCh 278.3

    ಕೆಲವರು ತಮ್ಮ ಆಹಾರಕ್ರಮದಲ್ಲಿ ಒಂದು ಕಟ್ಟುನಿಟ್ಟಾದ ನಿಯಮ ಇರಬೇಕೆಂದುಬಯಸುತ್ತಾರೆ. ಅವರು ಹೆಚ್ಚಾಗಿ ತಿಂದು ಅನಂತರ ಅದರಿಂದಾದ ಕೆಟ್ಟ ಪರಿಣಾಮಗಳಬಗ್ಗೆ ವಿಷಾದ ಪಡುತ್ತಾರೆ. ಆದರೆ ಈ ರೀತಿ ಇರಬಾರದು. ಒಬ್ಬರಿಗೆ ಅನ್ವಯವಾಗುವನಿಯಮಗಳು ಮತ್ತೊಬ್ಬರಿಗೆ ಹೊಂದಿಕೆಯಾಗಲಾರದು. ಪ್ರತಿಯೊಬ್ಬರೂ ಸಹ ತೆಗೆದುಕೊಳ್ಳುವ ಆಹಾರದ ಬಗ್ಗೆ ವಿವೇಚನೆಯಿಂದ ತಮ್ಮನ್ನು ತಾವೇ ನಿಯಂತ್ರಣದಲ್ಲಿಟ್ಟುಕೊಂಡುಸಿದ್ಧಾಂತಗಳ ಪ್ರಕಾರ ನಡೆದುಕೊಳ್ಳಬೇಕು.KanCCh 278.4

    ದೇಹವನ್ನು ಅಲಕ್ಷ ಮಾಡುವುದು ಅಥವಾ ದುರುಪಯೋಗ ಪಡಿಸಿಕೊಂಡುದೇವರ ಸೇವೆಗೆ ಅದನ್ನು ಯೋಗ್ಯವಲ್ಲದಂತೆ ಮಾಡಿಕೊಳ್ಳುವುದು ದೇವರಿಗೆ ಗೌರವತರುವುದಿಲ್ಲ. ರುಚಿಕರವಾದ ಹಾಗೂ ಆರೋಗ್ಯಕರ ಆಹಾರ ಒದಗಿಸಿ ದೇಹವನ್ನುಬಲಪಡಿಸುವುದು, ನಮ್ಮೆಲ್ಲರ ಮೊದಲ ಕರ್ತವ್ಯಗಳಲ್ಲಿ ಒಂದಾಗಿದೆ. ಆಹಾರದ ವಿಷಯದಲ್ಲಿಜಿಪುಣತನ ತೋರಿಸುವುದಕ್ಕಿಂತ ಬಟ್ಟೆ ಮತ್ತು ಮನೆಯ ಪೀಠೋಪಕರಣಗಳ ಬಗ್ಗೆಕಡಿಮೆ ಖರ್ಚುಮಾಡುವುದು ಎಷ್ಟೋ ಉತ್ತಮ. ಅತಿಥಿಗಳಿಗೆ ಸತ್ಕಾರಮಾಡುವುದುಒಳ್ಳೆಯದು. ಆದರೆ ಆಡಂಬರದಿಂದ ಖರ್ಚು ಮಾಡಿ ನಮ್ಮ ಮನೆಯ ಅಗತ್ಯಗಳಿಗೆಅನಾವಶ್ಯಕವಾಗಿ ಹಿಡಿತ ಮಾಡುತ್ತಾರೆ. ಇದು ವಿವೇಕತನವಲ್ಲ. ಮೊದಲು ಕುಟುಂಬದ ಅಗತ್ಯಗಳಿಗೆ ಗಮನಕೊಡಬೇಕು.KanCCh 279.1

    ಅತಿಥಿ ಸತ್ಕಾರಮಾಡುವುದು ಅಗತ್ಯ ಮತ್ತು ಆಶೀರ್ವಾದಕರವಾಗಿದೆ. ಆದರೆ ಹಣವನ್ನುಅವಿವೇಕತನದಿಂದ ದುಂದುವೆಚ್ಚ ಮಾಡುವುದು ಮತ್ತು ಕೆಲವು ತೋರಿಕೆಯಸಂಪ್ರದಾಯಗಳು ಇದಕ್ಕೆ ಅಡ್ಡಿಯಾಗಿವೆ. ಅನಿರೀಕ್ಷಿತವಾಗಿ ಅತಿಥಿ ಬಂದಾಗ, ಅವರಿಗೂಸಹ ಸಾಕಾಗುವಷ್ಟು ಆಹಾರ ಇರಬೇಕು. ಇದರಿಂದ ಗೃಹಿಣಿಗೆ ತಿರುಗಿ ಅಡುಗೆಮಾಡುವಪ್ರಯಾಸ ತಪ್ಪುವುದು.KanCCh 279.2

    ನಿಮ್ಮ ಆಹಾರಕ್ರಮವನ್ನು ಎಚ್ಚರಿಕೆಯಿಂದ ಗಮನಿಸಿ, ಕಾರಣ ಮತ್ತು ಪರಿಣಾಮಗಳನ್ನುತಿಳಿದುಕೊಳ್ಳಿ. ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ, ಹೊಟ್ಟೆಬಾಕರಾಗಿಹೆಚ್ಚಾಗಿ ತಿಂದು ಜಠರಕ್ಕೆ ಶ್ರಮ ಕೊಡಬಾರದು. ಬದಲಾಗಿ ರುಚಿಕರವಾದ ಪೌಷ್ಟಿಕ ಆಹಾರಕ್ಕೆಹೆಚ್ಚು ಗಮನಕೊಡಿ. ಆರೋಗ್ಯದ ನಿಯಮಗಳನ್ನು ಅರಿತುಕೊಂಡವರು ಹೆಚ್ಚಾಗಿಯೂತಿನ್ನುವುದಿಲ್ಲ ಅಥವಾ ಕಡಿಮೆಯಾಗಿಯೂ ತಿನ್ನುವುದಿಲ್ಲ. ಅಂತವರು ಹೊಟ್ಟೆತುಂಬುವುದಕ್ಕಾಗಿಯಲ್ಲ, ಬದಲಾಗಿ ಶರೀರವನ್ನು ಸಮತೋಲನ ವಾದಆರೋಗ್ಯದಲ್ಲಿರಿಸುವುದಕ್ಕಾಗಿ ತಿನ್ನುತ್ತಾರೆ. ಅವರು ತಮ್ಮ ಸಾಮರ್ಥ್ಯವನ್ನು ದೇವರಮತ್ತು ಮನುಷ್ಯರ ಸೇವೆಗಾಗಿ ಉಪಯೋಗಿಸುವುದಕ್ಕಾಗಿ, ಉತ್ತಮವಾದ ಸ್ಥಿತಿಯಲ್ಲಿರಿಸಲುಪ್ರಯತ್ನಿಸುತ್ತಾರೆ. ವಿವೇಚನೆಯಿಂದ ಹಿತಮಿತವಾಗಿ ಆಹಾರ ಸೇವಿಸಿ ‘ಸ್ವಸ್ಥವಾದ ಶರೀರದಲ್ಲಿಸ್ವಸ್ಥವಾದ ಮನಸ್ಸು” ಎಂಬ ನಾಣ್ಣುಡಿಯಂತೆ ಮನಸ್ಸು ಹಾಗೂ ದೇಹವನ್ನುಉತ್ತಮಸ್ಥಿತಿಯಲ್ಲಿ ಕಾಪಾಡಿಕೊಳ್ಳುತ್ತಾರೆ. ಅವರು ತಮ್ಮ ಅಭಿಪ್ರಾಯಗಳನ್ನು ಇತರರಮೇಲೆ ಬಲವಂತವಾಗಿ ಹೇರುವುದಿಲ್ಲ. ಆದರೆ ಅವರ ಮಾದರಿಯು ಆಹಾರದ ವಿಷಯದಲ್ಲಿಸರಿಯಾದ ಸಿದ್ಧಾಂತಗಳನ್ನು ಅನುಸರಿಸುವುದರಿಂದಾಗುವ ಪ್ರಯೋಜನಕ್ಕೆಸಾಕ್ಷಾಧಾರವಾಗಿದೆ. ಇಂತಹ ವ್ಯಕ್ತಿಗಳು ಇತರರ ಮೇಲೆ ಅಪಾರವಾದ ಒಳ್ಳೆಯಪ್ರಭಾವಹೊಂದಿರುತ್ತಾರೆ.KanCCh 279.3

    ಸಬ್ಬತ್‌ದಿನದಲ್ಲಿ ಬೇರೆ ದಿನಗಳಲ್ಲಿ ಮಾಡುವುದಕ್ಕಿಂತಲೂ ಹೆಚ್ಚಿನ ವಿವಿಧ ರೀತಿಯಆಹಾರ ತಯಾರಿಸಬಾರದು. ಬದಲಾಗಿ ಅದು ಸರಳವಾಗಿರಬೇಕು ಮತ್ತು ನಾವುಕಡಿಮೆ ತಿನ್ನಬೇಕು. ಇದರಿಂದ ಆತ್ಮೀಕ ವಿಷಯಗಳನ್ನು ಗ್ರಹಿಸಿಕೊಳ್ಳುವುದಕ್ಕೆ ಮನಸ್ಸುಸ್ಪಷ್ಟವಾಗಿಯೂ ಮತ್ತು ಚೈತನ್ಯವಾಗಿಯೂ ಇರುವುದು. ಸಬ್ಬತ್‌ದಿನದಲ್ಲಿ ಅಡುಗೆಮಾಡಬಾರದು, ಆದರೆ ತಣ್ಣಗಿರುವ ಆಹಾರ ಸೇವಿಸಬಾರದು. ಚಳಿಗಾಲದಲ್ಲಿ ಹಿಂದಿನದಿನ ಮಾಡಿದ್ದ ಆಹಾರವನ್ನು ಬಿಸಿ ಮಾಡಬೇಕು. ಆದರೆ ಆಹಾರವು ಸರಳವಾಗಿಯೂ,ರುಚಿಕರವಾಗಿಯೂ ಹಾಗೂ ಆಕರ್ಷಣೀಯವಾಗಿಯೂ ಇರಬೇಕು. ಸಬ್ಬತ್‌ದಿನದಲ್ಲಿ,ಅದರಲ್ಲಿಯೂ ಮಕ್ಕಳಿರುವ ಮನೆಗಳಲ್ಲಿ ಅವರಿಗೆ ಆನಂದ ತರುವಂತ ಯಾವುದಾದರೂವಿಶೇಷ ಆಹಾರವನ್ನು ಹಿಂದಿನ ದಿನದಲ್ಲಿಯೇ ತಯಾರಿಸಬೇಕು.KanCCh 280.1

    Larger font
    Smaller font
    Copy
    Print
    Contents