Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹಂದಿಮಾಂಸವು ಅಶುದ್ಧ

    ಹಂದಿಯ ಅಂಗಾಂಶಗಳು ಪರೋಪಜೀವಿಗಳಿಂದ (Parasites) ತುಂಬಿರುತ್ತವೆ.ಹಂದಿಯ ವಿಷಯವಾಗಿ ದೇವರು “.ಅದು ನಿಮಗೆ ಅಶುದ್ಧ, ಇವುಗಳ ಮಾಂಸವನ್ನುನೀವು ತಿನ್ನಕೂಡದು; ಇವುಗಳ ಹೆಣವನ್ನು ಮುಟ್ಟ ಕೂಡದು” ಎಂದು ಹೇಳಿದ್ದಾನೆ(ಧರ್ಮೋಪದೇಶ ಕಾಂಡ 14:8), ಹಂದಿಮಾಂಸವು ತಿನ್ನುವುದಕ್ಕೆಆಯೋಗ್ಯವಾಗಿರುವುದರಿಂದ ದೇವರು ಈ ಆದೇಶ ಕೊಟ್ಟನು.ಹಂದಿಗಳು ಹೊಲಸನ್ನುಶುಚಿಮಾಡುವ ಜಾಡಮಾಲಿ (Scavenger) ಕೆಲಸ ಮಾಡುವ ಏಕೈಕ ಉದ್ದೇಶಕ್ಕಾಗಿಸೃಷ್ಟಿ ಮಾಡಲ್ಪಟ್ಟಿದೆ. ಎಂತಹ ಸಂದರ್ಭದಲ್ಲಿಯೂ ಅದರ ಮಾಂಸವನ್ನು ಮನುಷ್ಯರುತಿನ್ನಲೇಬಾರದು. ಹೊಲಸಾದ ಮತ್ತು ಅಸಹ್ಯಕರವಾದವುಗಳನ್ನು ತಿನ್ನುವ ಯಾವುದೇಪ್ರಾಣಿಯ ಮಾಂಸವು ಮನುಷ್ಯರಿಗೆ ಯೋಗ್ಯ ಅಲ್ಲ ಅಥವಾ ಆರೋಗ್ಯಕರವಾಗಿರುವುದಕ್ಕೆಸಾಧ್ಯವೂ ಅಲ್ಲ.KanCCh 284.3

    ಹಂದಿಮಾಂಸವು ಅತ್ಯಂತ ಹಾನಿಕರ ಪದಾರ್ಥಗಳಲ್ಲಿ ಒಂದು. ತನ್ನ ಅಧಿಕಾರತೋರಿಸುವುದಕ್ಕಲ್ಲ. ಬದಲಾಗಿ, ಹಂದಿಯು ಮಾನವರಿಗೆ ಯೋಗ್ಯವಾದ ಆಹಾರವಲ್ಲವೆಂಬ ಕಾರಣದಿಂದ ದೇವರು ಇಸ್ರಾಯೇಲ್ಯರು ಅದನ್ನು ತಿನ್ನಬಾರದೆಂದು ನಿಷೇಧಿಸಿದನು.ಇದು ಶರೀರದಲ್ಲಿ ಗ್ರಂಥಿಗಳು ಊದಿಕೊಂಡು, ಮುಖ್ಯವಾಗಿ ಗಂಟಲಿನಲ್ಲಿ ಗಡ್ಡೆ ಕಟ್ಟುವಗಂಡಮಾಲೆ ಎಂಬ ಹಾಗೂ ಇತರ ರೋಗಗಳನ್ನು (Scrotula) ಉಂಟು ಮಾಡುತ್ತದೆ.ಅದರಲ್ಲಿಯೂ ವಿಶೇಷವಾಗಿ ಉಷ್ಣ ಪ್ರದೇಶಗಳಲ್ಲಿ ಕುಷ್ಠ ಹಾಗೂ ಇತರ ನಾನಾವಿಧವಾದರೋಗಗಳಿಗೆ ಕಾರಣವಾಗುತ್ತದೆ. ಇದರ ಪರಿಣಾಮವು ಶೀತ ಪ್ರದೇಶಗಳಲ್ಲಿ ವಾಸಿಸುವರಿಗಿಂತಉಷ್ಣ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಹೆಚ್ಚು ಹಾನಿಕರವಾಗಿದೆ. ಹಂದಿಮಾಂಸವು ಸಹಜವಾಗಿಬಾಯಿಗೆ ರುಚಿಯಾಗಿರುವುದಿಲ್ಲ. ಮಸಾಲೆಭರಿತ ಪದಾರ್ಥಗಳಿಂದ ಅದನ್ನು ಒಗ್ಗರಣೆಹಾಕಿ ಸಿದ್ಧಪಡಿಸುವುದರಿದ ಅದು ರುಚಿಗೆ ಹೊಂದುತ್ತದೆ. ಆದರೆ ಮೊದಲೇ ಅನಾರೋಗ್ಯಕರವಾಗಿರುವ ಹಂದಿಮಾಂಸವು ಇವುಗಳನ್ನು ಉಪಯೋಗಿಸುವುದರಿಂದಇನ್ನೂ ಹೆಚ್ಚಾಗಿ ಅಪಾಯಕಾರಿಯಾಗುತ್ತದೆ. ಇತರೆಲ್ಲಾ ಮಾಂಸಗಳಿಗಿಂತ ಹಂದಿಮಾಂಸವುರಕ್ತವನ್ನು ಹೆಚ್ಚು ಮಲಿನಗೊಳಿಸುತ್ತದೆ. ಆದುದರಿಂದ ಇದನ್ನು ಹೆಚ್ಚಾಗಿ ತಿನ್ನುವವರುರೋಗಕ್ಕೆ ತುತ್ತಾಗುತ್ತಾರೆ.KanCCh 284.4

    ಹಂದಿಮಾಂಸ ಸೇವನೆಯು ವಿಶೇಷವಾಗಿ ಮೆದುಳಿನ ನವಿರಾದ ಹಾಗೂ ಸೂಕ್ಷಸಂವೇದನೆಯುಳ್ಳ ನರಗಳನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದ ಅದನ್ನುಸೇವಿಸುವವರಿಗೆ ಮೆದುಳು ಜಡವಾಗಿ ಪವಿತ್ರವಸ್ತುಗಳು ಮತ್ತು ಸಾಧಾರಣವಸ್ತುಗಳನಡುವಣ ವ್ಯತ್ಯಾಸ ಗ್ರಹಿಸಲು ಸಾಧ್ಯವಾಗುವುದಿಲ್ಲ. ಹೊರಾಂಗಣದಲ್ಲಿವ್ಯಾಯಾಮ ಮಾಡುವವರು ಹಂದಿಮಾಂಸ ಸೇವನೆಯ ಕೆಟ್ಟ ಪರಿಣಾಮಗಳನ್ನು ಮನವರಿಕೆಮಾಡಿಕೊಳ್ಳುವುದಿಲ್ಲ. ಆದರೆ ಕುಳಿತು ಕೆಲಸಮಾಡುವವರು ಮತ್ತುವ್ಯಾಯಾಮಮಾಡದವರುಇದರ ಪರಿಣಾಮವನ್ನು ತಿಳಿದುಕೊಳ್ಳುತ್ತಾರೆ.KanCCh 285.1