Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-41 — ಆರೋಗ್ಯ ಸುಧಾರಣೆಯಲ್ಲಿ ಪ್ರಾಮಾಣಿಕತೆ

    (ಗಮನಿಸಿ : ಶ್ರೀಮತಿ ವೈಟಮ್ಮನವರು 1909ನೇ ಇಸವಿಯಲ್ಲಿ ಕೊನೆಯದಾಗಿ ಜನರಲ್ಕಾನ್ಫರೆನ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಆರೋಗ್ಯ ಸುಧಾರಣೆಗೆಸಂಬಂಧಪಟ್ಟಂತೆ ಅತ್ಯಾವಶ್ಯಕ ಅಂಶಗಳನ್ನು ಪುನರ್ ವಿಮರ್ಶಿಸುವ ಈ ಸಂದೇಶನೀಡಿದರು).KanCCh 288.1

    ಸೆವೆಂತ್ ಡೇ ಅಡ್ವೆಂಟಿಸ್ಟರಲ್ಲಿ ಅನೇಕರು ಆರೋಗ್ಯ ಸುಧಾರಣೆಗೆ ಸಂಬಂಧಪಟ್ಟತತ್ವಗಳಿಗೆ ಮೊದಲಿನ ಹಾಗೆ ನಿಷ್ಠೆ ತೋರುತ್ತಿಲ್ಲ. ಆದುದರಿಂದ ಈ ವಿಷಯದ ಬಗ್ಗೆ ಈಸಂದೇಶ ನೀಡಬೇಕೆಂದು ದೇವರು ಶ್ರೀಮತಿವೈಟಮ್ಮನವರಿಗೆ ದರ್ಶನದಲ್ಲಿ ಸೂಚಿಸಿದನು.ತನ್ನ ಮಕ್ಕಳು ಕ್ರಿಸ್ತನಲ್ಲಿ ಪರಿಪೂರ್ಣಸ್ತ್ರೀ-ಪುರುಷರಾಗಿ ಬೆಳವಣಿಗೆ ಹೊಂದಬೇಕೆಂಬುದುದೇವರ ಉದ್ದೇಶವಾಗಿದೆ. ಈ ಬೆಳವಣಿಗೆ ಹೊಂದಲು ಅವರು ತಮ್ಮ ಆತ್ಮ, ಪ್ರಾಣ,ಶರೀರಗಳ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಯೋಗ್ಯವಾದ ಹಾಗೂ ಅನುಗುಣವಾದರೀತಿಯಲ್ಲಿ ಉಪಯೋಗಿಸಬೇಕು. ಅವರು ತಮ್ಮ ಮಾನಸಿಕ ಅಥವಾ ಶಾರೀರಿಕ ಬಲವನ್ನುವ್ಯರ್ಥಮಾಡಬಾರದು.KanCCh 288.2

    ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದು ಅತ್ಯಂತ ಪ್ರಾಮುಖ್ಯವಾದಪ್ರಶ್ನೆಗಳಲ್ಲಿ ಒಂದಾಗಿದೆ. ಈ ಪ್ರಶ್ನೆಯನ್ನು ದೇವರ ಭಯಭಕ್ತಿಯಲ್ಲಿ ಅಧ್ಯಯನ ಮಾಡಿದಾಗ,ತಿನ್ನುವ ಆಹಾರದಲ್ಲಿ ಸರಳತೆ ಅನುಸರಿಸುವುದು ನಮ್ಮ ಶಾರೀರಿಕ ಮತ್ತು ಆತ್ಮೀಕಬೆಳವಣಿಗೆಗೆಉತ್ತಮಮಾರ್ಗವಾಗಿದೆ ಎಂದು ಅರಿಯಬಹುದು. ಈ ವಿಷಯದಲ್ಲಿ ವಿವೇಕದಿಂದಮುನ್ನಡೆಯಲು ಜ್ಞಾನ ಮತ್ತು ಯೋಗ್ಯವಾದ ನಿರ್ಣಯದ ಅಗತ್ಯವಿದೆ. ಪ್ರಕೃತಿಯನಿಯಮಗಳನ್ನು ವಿರೋಧಿಸಬಾರದು, ಬದಲಾಗಿವಿಧೇಯತೆಯಿಂದ ಅನುಸರಿಸಬೇಕು.KanCCh 288.3

    ಮಾಂಸಾಹಾರ, ಕಾಫಿ, ಚಹಾ ಮತ್ತು ಅನಾರೋಗ್ಯಕರವಾದ ಮಸಾಲೆಭರಿತಆಹಾರಗಳನ್ನು ಸೇವಿಸುವುದರಿಂದಾಗುವ ಕೆಡುಕುಗಳ ಬಗ್ಗೆ ದೈವೀಕ ಸೂಚನೆಗಳನ್ನುಪಡೆದುಕೊಂಡಿರುವವರು ಹಾಗೂ ತ್ಯಾಗದಿಂದ ದೇವರೊಂದಿಗೆ ಒಂದು ಒಡಂಬಡಿಕೆಮಾಡಿಕೊಳ್ಳಬೇಕೆಂದು ದೃಢನಿರ್ಧಾರ ಮಾಡುವವರು ಅನಾರೋಗ್ಯಕರವಾದ ಈ ಆಹಾರಪದಾರ್ಥಗಳ ಸೇವನೆಯನ್ನು ನಿಲ್ಲಿಸುವರು. ಇಂತವುಗಳನ್ನು ತ್ಯಜಿಸಬೇಕೆಂದು ದೇವರುಅಪೇಕ್ಷಿಸುತ್ತಾನೆ. ದೇವಜನರು ಆತನ ಮುಂದೆ ಪರಿಪೂರ್ಣರಾಗಿ ನಿಲ್ಲುವುದಕ್ಕೆ ಮೊದಲೇಈ ಕಾರ್ಯ ಮಾಡಬೇಕಾಗಿದೆ.KanCCh 288.4

    ದೇವರ ಸತ್ಯಸಭೆಯ ಉಳಿದ ಜನರು ಸಂಪೂರ್ಣವಾಗಿ ಪರಿವರ್ತನೆ ಹೊಂದಿರಬೇಕು.ಆರೋಗ್ಯದ ಈ ಸಂದೇಶವು ಜನರಲ್ಲಿ ಪರಿವರ್ತನೆ ತಂದು ಅವರನ್ನುಪರಿಶುದ್ಧಗೊಳಿಸಬೇಕು. ಈ ಚಳುವಳಿಯಲ್ಲಿ ದೇವರ ಪವಿತ್ರಾತ್ಮನ ಶಕ್ತಿಯ ಭಾವನೆ.ಉಂಟಾಗಬೇಕು. ಆರೋಗ್ಯದ ಸಂದೇಶವು ಒಂದು ಅದ್ಭುತವಾದ ಹಾಗೂ ಕರಾರುವಕ್ಕಾದಸಂದೇಶವಾಗಿದೆ. ಇದನ್ನು ಘಂಟಾಘೋಷವಾಗಿ ಸಾರಿಹೇಳಬೇಕು. ಈ ಸಂದೇಶದಲ್ಲಿನಾವು ಯಥಾರ್ಥವಾದ ಹಾಗೂ ಸ್ಥಿರವಾದ ವಿಶ್ವಾಸವಿಟ್ಟಿರಬೇಕು. ಈ ಸಂದೇಶವುಕ್ರಿಸ್ತನ ಬರೋಣದವರೆಗೆ ಹೆಚ್ಚಿನ ಪ್ರಾಮುಖ್ಯತೆಯಿಂದ ಸಾರಲ್ಪಡಬೇಕು.KanCCh 288.5

    ದೇವರಸಂದೇಶದ ಸಾಕ್ಷಗಳಲ್ಲಿ ಕೆಲವು ಭಾಗಗಳನ್ನು ಒಪ್ಪಿಕೊಂಡು, ತಮ್ಮ ಇಷ್ಟವಾದದೈಹಿಕಬಯಕೆಗಳನ್ನು ತೃಪ್ತಿಗೊಳಿಸುವುದನ್ನು ಖಂಡಿಸುವ ಭಾಗಗಳನ್ನು ನಿರಾಕರಿಸುವಕ್ರೈಸ್ತರೆಂದು ಹೇಳಿಕೊಳ್ಳುವ ವಿಶ್ವಾಸಿಗಳಿದ್ದಾರೆ. ಇಂತವ್ಯಕ್ತಿಗಳು ತಮ್ಮ ಹಿತಕ್ಕೆ ಮಾತ್ರವಲ್ಲ,ಸಭೆಯಹಿತದ ವಿರುದ್ಧವಾಗಿ ಕಾರ್ಯಮಾಡುತ್ತಾರೆ. ನಮಗೆ ಬೆಳಕಿರುವಾಗ ಆ ಬೆಳಕಿನಲ್ಲಿನಾವು ನಡೆಯಬೇಕಾದದ್ದು ಅಗತ್ಯ. ಅಡ್ರೆಂಟಿಸ್ಟ್ಸಭೆಯ ಆರೋಗ್ಯ ಸುಧಾರಣಾಸಂದೇಶಗಳಲ್ಲಿ ನಂಬಿಕೆ ಇಟ್ಟಿದ್ದೇವೆಂದು ಹೇಳಿಕೊಂಡು, ಆದರೆ ದಿನನಿತ್ಯದ ಆಚರಣೆಯಲ್ಲಿಆ ತತ್ವಗಳ ವಿರುದ್ಧವಾಗಿರುವವರು ತಮ್ಮ ಶರೀರವನ್ನು ಹಾನಿ ಮಾಡಿಕೊಳ್ಳುತ್ತಾರೆ.ಅಲ್ಲದೆ ಕ್ರೈಸ್ತವಿಶ್ವಾಸಿಗಳು ಮತ್ತು ವಿಶ್ವಾಸಿಗಳಲ್ಲದವರಲ್ಲಿ ತಪ್ಪು ಅಭಿಪ್ರಾಯ ಹುಟ್ಟಿಸುತ್ತಾರೆ.KanCCh 289.1

    Larger font
    Smaller font
    Copy
    Print
    Contents