Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ವಿಧೇಯತೆಯ ಮೂಲಕ ಬಲ

    ಸತ್ಯವನ್ನು ತಿಳಿದಿರುವವರು ಒಂದು ಗಂಭೀರವಾದ ಜವಾಬ್ದಾರಿ ಹೊಂದಿದ್ದಾರೆ.ಅದೇನೆಂದರೆ ಅವರ ಕ್ರಿಯೆಗಳು ಅವರ ನಂಬಿಕೆಗೆ ಅನುಗುಣವಾಗಿರಬೇಕು ಮತ್ತುಅವರ ಜೀವನವು ಪರಿಶುದ್ಧಗೊಂಡಿರಬೇಕು. ಅಲ್ಲದೆ ಕೊನೆಯ ದಿನಗಳಲ್ಲಿ ಈ ಸಂದೇಶವನ್ನುಶೀಘ್ರವಾಗಿಸಾರಲು ಅವರೂಸಹ ಸಿದ್ಧರಾಗಿರಬೇಕು. ಅವರಿಗೆ ತಮ್ಮ ಸ್ವಾಭಾವಿಕ ಅಪೇಕ್ಷೆಗಳನ್ನುಪೂರೈಸಿಕೊಳ್ಳಲು ಸಮಯವಾಗಲಿ ಇರುವುದಿಲ್ಲ. ಆದುದರಿಂದ ದೇವರು ನಿಮ್ಮಪಾಪಗಳನ್ನುಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನಕಡೆಗೆ ತಿರುಗಿಕೊಳ್ಳಿರಿ; ತಿರುಗಿದರೆದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗುವವು” (ಅ. ಕೃತ್ಯಗಳು 3:19) ಎಂಬವಾಕ್ಯಗಳು ನಮ್ಮನ್ನು ಪ್ರಚೋದಿಸಬೇಕು. ನಮ್ಮಲ್ಲಿ ಅನೇಕರು ಆತ್ಮೀಕವಾಗಿಬಲಹೀನರಾಗಿದ್ದಾರೆ. ಅಂತವರು ಸಂಪೂರ್ಣವಾಗಿ ಪರಿವರ್ತನೆ ಹೊಂದದಿದ್ದಲ್ಲಿ,ಖಂಡಿತವಾಗಿಯೂ ನಾಶವಾಗುವರು. ಇಂತಹ ಅಪಾಯ ಎದುರಿಸಲು ನೀವುಸಿದ್ಧರಾಗಿರುವಿರಾ?KanCCh 289.2

    ತನ್ನ ಜನರು ನಿರಂತರವಾಗಿ ಬೆಳವಣಿಗೆ ಹೊಂದಬೇಕೆಂದು ದೇವರು ಬಯಸುತ್ತಾನೆ.ಸ್ವಾಭಾವಿಕವಾದ ಅಪೇಕ್ಷೆಗಳನ್ನು ತಣಿಸಿಕೊಳ್ಳುವುದರಲ್ಲಿಯೇ ನಾವು ನಿರತರಾಗಿರುವುದುಮಾನಸಿಕ ಬೆಳವಣಿಗೆ ಮತ್ತು ನಾವು ಪರಿಶುದ್ಧತೆ ಹೊಂದುವುದಕ್ಕೆ ದೊಡ್ಡತಡೆಯಾಗಿದೆ ಎಂದು ನಾವು ತಿಳಿದಿರಬೇಕು. ಅಡ್ರೆಂಟಿಸ್ಟ್ ಸಭೆಯಲ್ಲಿರುವ ಆಹಾರಕ್ಕೆಸಂಬಂಧಪಟ್ಟ ಸುಧಾರಣೆಗಳ ಹೊರತಾಗಿಯೂ ಅನೇಕರು ಅನುಚಿತವಾಗಿ ತಿನ್ನುತ್ತಲೇಇರುತ್ತಾರೆ. ಇದು ಅವರ ದುರ್ಬಲತೆ ಮತ್ತು ಅಕಾಲಿಕ ಸಾವಿಗೂ ಕಾರಣವಾಗುತ್ತದೆ. ಕ್ರಿಸ್ತನಲ್ಲಿ ತಾನು ಪರಿಶುದ್ಧತೆ ಹೊಂದಬೇಕೆಂದಿರುವವರು ತಮ್ಮ ಸ್ವಾಭಾವಿಕ ಅಪೇಕ್ಷೆಗಳನ್ನುನಿಯಂತ್ರಿಸುವ ಶಕ್ತಿ ಕ್ರಿಸ್ತನಿಗಿದೆ ಎಂಬುದನ್ನು ತಿಳಿದುಕೊಂಡಿರಬೇಕು.KanCCh 289.3

    ಮಾಂಸಾಹಾರವು ಶಾರೀರಿಕ ಆರೋಗ್ಯಕ್ಕೆ ಹಾನಿಕರ. ಆದುದರಿಂದ ಅದನ್ನು ತ್ಯಜಿಸಬೇಕು.ಉತ್ತಮವಾದ ಸಸ್ಯಾಹಾರ ದೊರಕಿದರೂ, ಅದನ್ನು ಬಿಟ್ಟು ಉಣ್ಣುವುದು, ತಿನ್ನುವುದರಲ್ಲಿತಮಗಿಷ್ಟ ಬಂದಂತೆ ವರ್ತಿಸುವವರು, ಕ್ರಮೇಣವಾಗಿ ದೇವರು ಕೊಟ್ಟಿರುವ ಸತ್ಯಗಳಬಗ್ಗೆ ನಿರ್ಲಕ್ಷತೆ ತೋರಿಸಿದಲ್ಲಿ, ಅವರು ಖಂಡಿತವಾಗಿಯೂ, ತಾವು ಬಿತ್ತಿದ್ದನ್ನೇಕೊಯ್ಯುವರು.KanCCh 290.1

    ನಮ್ಮ ಶಾಲೆಗಳ ವಿದ್ಯಾರ್ಥಿಗಳಿಗೆ ಮಾಂಸಾಹಾರ ಅಥವಾ ಆರೋಗ್ಯಕ್ಕೆ ಹಾನಿಕರವಾದಆಹಾರ ಪದಾರ್ಥಗಳನ್ನು ಕೊಡಬಾರದೆಂದು ದೇವರು ಶ್ರೀಮತಿ ವೈಟಮ್ಮನವರಿಗೆದರ್ಶನದಲ್ಲಿ ತಿಳಿಸಿದ್ದಾನೆ. ಮಾದಕ ಪದಾರ್ಥಗಳಾದ ಅಫೀಮು, ಗಾಂಜಾ ಅಥವಾಆಲ್ನೋಹಾಲ್ ಬೆರೆಸಿದ ಪಾನೀಯಗಳು ಮುಂತಾದ ಮನಸ್ಸನ್ನು ತಾತ್ಕಾಲಿಕವಾಗಿಉತ್ತೇಜಿಸುವಂತವುಗಳ ಸೇವನೆ ಮಾಡಬಾರದು.KanCCh 290.2

    ಮಾಂಸಾಹಾರವಿಲ್ಲದೆ ನಾವು ಬದುಕಲಾರೆವೆಂದು ಹೇಳುವ ಅನೇಕರಿದ್ದಾರೆ. ಆದರೆಇಂತವರು ದೇವರಲ್ಲಿ ಭರವಸವಿಟ್ಟು, ಆತನ ಮಾರ್ಗದರ್ಶನದಲ್ಲಿ ನಡೆಯುತ್ತೇವೆಂದುದೃಢನಿರ್ಧಾರ ಮಾಡಿದಲ್ಲಿ, ದಾನಿಯೇಲನಿಗೂ ಹಾಗೂ ಆತನ ಮೂವರು ಸ್ನೇಹಿತರಿಗೂದೊರಕಿದಂತ ಬಲ ಹಾಗೂ ವಿವೇಕ ಅವರಿಗೆ ದೊರೆಯುವುದು. ಕರ್ತನು ತಮಗೆಉತ್ತಮ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಕೊಡುತ್ತಾನೆಂದು ಅವರು ತಿಳಿಯುವರು.ಸ್ವಾರ್ಥತ್ಯಾಗ ಮಾಡಿದಲ್ಲಿ, ಕರ್ತನ ಸೇವೆಗಾಗಿ ಎಷ್ಟೊಂದು ಉಳಿಸಬಹುದೆಂದು ತಿಳಿದಾಗ,ಅವರಿಗೇ ಆಶ್ಚರ್ಯವಾಗುವುದು. ಸ್ವಾರ್ಥತ್ಯಾಗವಿಲ್ಲದ ಅಧಿಕ ಹಣವು ಮಾಡುವುದಕ್ಕಿಂತಲೂಹೆಚ್ಚಿನ ದೇವರ ಸೇವೆಯನ್ನು ತ್ಯಾಗದಿಂದ ಉಳಿಸಿದ ಸ್ವಲ್ಪ ಹಣವು ಸಾಧಿಸುತ್ತದೆ.KanCCh 290.3