Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಭೆಯಿಂದ ಸಲಹೆ ಪಡೆಯುವಂತೆ ಪೌಲನಿಗೆ ಸೂಚನೆ

    ತಮಗೆ ದೊರೆತ ಸುವಾರ್ತೆಯಬೆಳಕು ಮತ್ತು ಆಂತರಿಕ ಅನುಭವಕ್ಕೆ ತಾವು ಕ್ರಿಸ್ತನಿಗೆಮಾತ್ರಹೊಣೆಗಾರರಾಗಿದ್ದೇವೆಂದು ಅನೇಕರು ಅಭಿಪ್ರಾಯ ಪಡುತ್ತಾರೆ. ಆದರೆಯೇಸುಕ್ರಿಸ್ತನು ತನ್ನವಾಸ್ತವಾಂಶಗಳು, ಬೋಧನೆಗಳು ಹಾಗೂ ಉದಾಹರಣೆಗಳ ಮೂಲಕನಮಗೆ ಕೊಟ್ಟಿರುವ ಸಲಹೆಗಳಲ್ಲಿ ಈ ಅಭಿಪ್ರಾಯಗಳನ್ನು ಖಂಡಿಸಿದ್ದಾನೆ. ಕ್ರಿಸ್ತನುಅಪೊಸ್ತಲನಾದ ಪೌಲನನ್ನು ತನ್ನ ಅತ್ಯಂತ ಪ್ರಾಮುಖ್ಯವಾದ ಸುವಾರ್ತಾಸೇವೆಗಾಗಿಸ್ವತಃ ತಾನೇ ಸಾಧನವನ್ನಾಗಿ ಆರಿಸಿಕೊಂಡನು. ಆದಾಗ್ಯೂ ಅವನಿಗೆ ಸತ್ಯದ ವಿಷಯಗಳನ್ನುಕ್ರಿಸ್ತನೇ ತಿಳಿಸಲಿಲ್ಲ. ಪೌಲನು ಹಿಡಿದಿದ್ದ ಮಾರ್ಗವು ತಪ್ಪೆಂದು ಆತನು ಮನವರಿಕೆಮಾಡಿದನು. ಆಗ ಪೌಲನು - “ಕರ್ತನೇ ನಾನೇನು ಮಾಡಬೇಕು?” ಎಂದು ಕೇಳಲುಕರ್ತನು ಅವನಿಗೆ ನೀನು ದಮಸ್ಕ ಪಟ್ಟಣಕ್ಕೆ ಹೋಗು; ಮಾಡುವುದಕ್ಕೆ ನಿನಗೆನೇಮಿಸಿರುವುದೆಲ್ಲಾ ಅಲ್ಲಿ ತಿಳಿಸಲ್ಪಡುವುದು” ಎಂದು ಅಪ್ಪಣೆ ಮಾಡಿದನು (ಅ. ಕೃತ್ಯಗಳು22:10). ಪೌಲನು ಏನು ಮಾಡಬೇಕೆಂದು ರಕ್ಷಕನು ನೇರವಾಗಿ ಹೇಳಲಿಲ್ಲ; ಬದಲಾಗಿತನ್ನ ಸಭೆಯ ಸಲಹೆಗಳನ್ನು ಪಾಲಿಸುವಂತೆ ತಿಳಿಸಿದನು. ಅವನು ಏನು ಮಾಡಬೇಕೆಂದುಸಭೆಯವರು ಹೇಳಬೇಕಾಗಿತ್ತು. ಯೇಸುಸ್ವಾಮಿಯು ಪಾಪಿಗಳ ಸ್ನೇಹಿತನಾಗಿದ್ದಾನೆ, ಹಾಗೂಮಾನವರ ದುರವಸ್ಥೆಗಳ ಬಗ್ಗೆ ಯಾವಾಗಲೂ ಅನುಕಂಪ ಉಳ್ಳವನಾಗಿದ್ದಾನೆ.ಭೂಪರಲೋಕಗಳಲ್ಲಿ ಆತನಿಗೆ ಸಂಪೂರ್ಣ ಅಧಿಕಾರ ಕೊಡಲ್ಪಟ್ಟಿದೆ. ಆದರೆ ಮಾನವರರಕ್ಷಣೆಗಾಗಿ ಮತ್ತು ಜ್ಞಾನೋದಯಕ್ಕಾಗಿ ತಾನು ಅಭಿಷೇಕ ಮಾಡಿರುವ ವ್ಯಕ್ತಿಗಳನ್ನುಗೌರವಿಸುತ್ತಾನೆ. ಸಭೆಯಿಂದ ಮಾರ್ಗದರ್ಶನ ಪಡೆದುಕೊಳ್ಳುವಂತೆ ಕ್ರಿಸ್ತನು ಪೌಲನಿಗೆಸೂಚಿಸುತ್ತಾನೆ. ಇದರ ಮೂಲಕ ಕ್ರೈಸ್ತ ಸಭೆಯು ಜಗತ್ತಿಗೆ ಬೆಳಕಿನ ಸಾಧನವಾಗಿದೆಎಂದು ಅದಕ್ಕಿರುವ ಅಧಿಕಾರವನ್ನು ಆತನು ಮಾನ್ಯ ಮಾಡುತ್ತಾನೆ. ಸಭೆಯು ಈಲೋಕದಲ್ಲಿ ವ್ಯವಸ್ಥಿತವಾಗಿ ಸ್ಥಾಪಿಸಲ್ಪಟ್ಟ ಕ್ರಿಸ್ತನ ಶರೀರವಾಗಿದೆ. ಆದುದರಿಂದ ಆತನಆದೇಶಗಳಿಗೆ ಗೌರವ ಕೊಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಪೌಲನ ಉದಾಹರಣೆಯಲ್ಲಿಅನನೀಯನು ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ (ಅ.ಕೃತ್ಯಗಳು 9:12). ಅಲ್ಲದೆ ಈ ಲೋಕದಲ್ಲಿಸಭೆಯಪರವಾಗಿ ಕ್ರಿಸ್ತನಿಂದ ಆರಿಸಲ್ಪಟ್ಟಿರುವ ಆತನ ಸ್ಥಾನದಲ್ಲಿರುವ ದೇವರ ಸೇವಕರನ್ನೂಸಹ ಅನನೀಯನು ಪ್ರತಿನಿಧಿಸುತ್ತಾನೆ.KanCCh 301.2

    ಪೌಲನ ಮಾನಸಾಂತರದಲ್ಲಿ ನಾವು ಯಾವಾಗಲೂ ನೆನಪಿನಲ್ಲಿಡಬೇಕಾದಪ್ರಾಮುಖ್ಯವಾದಸಿದ್ಧಾಂತಗಳು ನಮಗೆ ಕೊಡಲ್ಪಟ್ಟಿವೆ. ತನ್ನಿಂದಲೇ ಸ್ಥಾಪಿತವಾದಹಾಗೂ ಸ್ವತಃ ತಾನೇ ಮಾನ್ಯಮಾಡಿದ ಸಭೆಯಹೊರತಾಗಿ ಧಾರ್ಮಿಕ ವಿಷಯಗಳಿಗೆಸಂಬಂಧಪಟ್ಟಂತೆ ಬೇರೆ ಯಾವುದೇ ಅಧಿಕಾರವನ್ನು ರಕ್ಷಕನಾದ ಕ್ರಿಸ್ತನು ಇತರರಿಗೆಕೊಟ್ಟಿಲ್ಲ.KanCCh 302.1

    ಮನುಷ್ಯಕುಮಾರನು ತಾನು ಸ್ಥಾಪಿಸಿದ ಸಭೆಯ ಅಧಿಕಾರ ಹಾಗೂಕಾರ್ಯಸ್ಥಾನದೊಂದಿಗೆ ಸ್ವತಃ ತಾನು ಗುರುತಿಸಿಕೊಂಡಿದ್ದಾನೆ. ಆತನ ಆಶೀರ್ವಾದಗಳುಆತನೇ ಅಭಿಷೇಕಿಸಿದ ಸಭೆಯ ಮೂಲಕ ಬರುತ್ತದೆ. ಇದರಿಂದ ಮನುಷ್ಯನನ್ನು ತನ್ನಆಶೀರ್ವಾದ ಬರುವ ಸಭೆಯೊಂದಿಗೆ ಕ್ರಿಸ್ತನು ಸಂಪರ್ಕ ಕಲ್ಪಿಸಿದ್ದಾನೆ. ಯೆಹೂದ್ಯಧರ್ಮದಬಗ್ಗೆ ಬಹಳ ನಿಷ್ಠೆಯಿಂದಿದ್ದ ಪೌಲನು ಕ್ರೈಸ್ತರನ್ನು ಹಿಂಸೆಪಡಿಸುವ ತನ್ನ ಕಾರ್ಯದಲ್ಲಿಬಹಳ ನೀತಿಬದ್ಧನಾಗಿದ್ದನು. ಆದರೆ ದೇವರ ಪವಿತ್ರಾತ್ಮನು ಪೌಲನು ಮಾಡುವಕೂರ ಕಾರ್ಯದ ಮನವರಿಕೆ ಮಾಡಿದಾಗಲೂ ಅವನು ನಿರಪರಾಧಿಯೆಂದುಎಣಿಸಲ್ಪಡಲಿಲ್ಲ. ಬದಲಾಗಿ ಪೌಲನು ಶಿಷ್ಯರ ಬಳಿಯಲ್ಲಿ ಕಲಿತುಕೊಳ್ಳಬೇಕಾಗಿತ್ತು.KanCCh 302.2

    ಸಭೆಯ ಎಲ್ಲಾ ಸದಸ್ಯರು ದೇವರ ಮಕ್ಕಳಾಗಿದ್ದಲ್ಲಿ, ಈ ಲೋಕಕ್ಕೆ ಬೆಳಕಾಗುವುದಕ್ಕೆಮೊದಲು ಕಠಿಣವಾದ ಶಿಸ್ತನ್ನು ಕಲಿತುಕೊಳ್ಳಬೇಕು. ನಾವು ಇನ್ನೂ ಕತ್ತಲೆಯಲ್ಲಿದ್ದು,ಬೆಳಕಿನ ಮೂಲನಾದ ಕ್ರಿಸ್ತನೊಂದಿಗೆ ದೈವೀಕ ಸಂಬಂಧ ಹೊಂದುವುದಕ್ಕೆ ವಿಶೇಷವಾದಯಾವುದೇ ಪ್ರಯತ್ನ ಮಾಡದಿದ್ದಲ್ಲಿ, ದೇವರು ನಮ್ಮನ್ನು ಈ ಲೋಕದಲ್ಲಿ ಬೆಳಕನ್ನುಪ್ರತಿಫಲಿಸುವ ಸಾಧನವನ್ನಾಗಿ ಮಾಡಿಕೊಳ್ಳುವುದಿಲ್ಲ. ತಾವು ಕ್ರಿಸ್ತನ ಸುವಾರ್ತೆಯಬೆಳಕನ್ನು ಸಾರುವುದಕ್ಕೆ ಯೋಗ್ಯರಲ್ಲವೆಂದುತಿಳಿದುಕೊಂಡವರು, ಮನಃಪೂರ್ವಕವಾಗಿಅದಕ್ಕಾಗಿ ಪ್ರಾರ್ಥಿಸಿದಲ್ಲಿ ದೈವೀಕ ಸಹಾಯಹೊಂದಿಕೊಳ್ಳುವರು. ನಾವು ಕಲಿಯುವುದುಸಾಕಷ್ಟಿದೆ. ಅದರಂತೆಯೇ ಮರೆತು ಬಿಡಬೇಕಾದ ಕೆಟ್ಟ ಅಭ್ಯಾಸಗಳೂ ಬಹಳಷ್ಟಿವೆ.ನಮ್ಮೆಲ್ಲಾ ಹಳೆಯ ಸ್ವಭಾವ, ಅಭ್ಯಾಸಗಳನ್ನು ಬಿಡಬೇಕು. ಮನಃಪೂರ್ವಕವಾಗಿ ನಾವುಅದಕ್ಕಾಗಿ ಬೇಡಿಕೊಂಡು, ಸತ್ಯದ ತತ್ವಗಳನ್ನು ಅನುಸರಿಸಿ ನಡೆದಾಗ, ದೇವರ ಕೃಪೆಯಿಂದಜಯಹೊಂದುವವು.KanCCh 303.1

    ಅನೇಕರು ತಮ್ಮ ಸ್ವಂತ ಜವಾಬ್ದಾರಿಯಿಂದ ದೇವರಸಂದೇಶ ಸಾರಲು ಆರಂಭಿಸುತ್ತಾರೆ.ತಾವು ದೇವರಿಂದ ಕರೆಯಲ್ಪಟ್ಟಿದ್ದೇವೆ ಹಾಗೂ ನಡೆಸಲ್ಪಡುತ್ತಿದ್ದೇವೆಂದು ಅವರುಹೇಳಿಕೊಂಡರೂ, ದೇವರು ಸ್ಥಾಪಿಸಿದ ಸಭೆಯನ್ನು ನಾಶಮಾಡುವುದನ್ನು ತಮ್ಮ ವಿಶೇಷಉದ್ದೇಶವಾಗಿ ಮಾಡಿಕೊಂಡಿದ್ದಾರೆ. ಅಂತವರು ದೇವರ ಚಿತ್ತ ನೆರವೇರಿಸುತ್ತಿಲ್ಲ. ಬದಲಾಗಿಸೈತಾನನಿಗೆ ಸೇರಿದರೆಂಬುದು ನಿಮಗೆ ತಿಳಿದಿರಲಿ. ಅವರನ್ನು ನಂಬಬಾರದು.KanCCh 303.2

    ದೇವರ ಸಭೆಯಲ್ಲಿರುವ ಹಣಕಾಸು ಮತ್ತು ತಲಾಂತುಗಳಿಗೆ ಮೇಲ್ವಿಚಾರಕರಾಗಿಸೇವಿಸಲ್ಪಟ್ಟವರು ತಪ್ಪನ್ನು ಹರಡುವುದರ ಮೂಲಕ ದೇವರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ದೇವರ ಹತ್ತು ಆಜ್ಞೆಗಳು ರದ್ದು ಮಾಡಲ್ಪಟ್ಟಿಲ್ಲ. ಅವುಗಳನ್ನು ನಾವುಖಂಡಿತವಾಗಿ ಅನುಸರಿಸಬೇಕೆಂದು ಸಾರುವವರನ್ನು ಜಗತ್ತು ದ್ವೇಷಮಾಡುತ್ತದೆ, ಕರ್ತನಾದಯೆಹೋವನಿಗೆ ನಿಷ್ಠೆಯಾಗಿರುವ ಸಭೆಯು ಸಾಧಾರಣ ಜನರೊಂದಿಗೆ ಹೋರಾಡುತ್ತಿಲ್ಲ. “ನಾವು ಹೋರಾಡುವುದು ಮನುಷ್ಯ ಮಾತ್ರದವರ ಸಂಗಡವಲ್ಲ: ರಾಜತ್ವಗಳ ಮೇಲೆಯೂ,ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶಮಂಡಲದಲ್ಲಿರುವ ದುರಾತ್ಮಗಳಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ” (ಎಫೆಸ 6:12). ಈಹೋರಾಟವು ಏನೆಂದು ಮನವರಿಕೆ ಮಾಡಿಕೊಂಡಿರುವವರು ಸಭೆಯ ವಿರುದ್ಧವಾಗಿತಮ್ಮ ಆಯುಧಗಳನ್ನು ಉಪಯೋಗಿಸುವುದಿಲ್ಲ. ಆದರೆ ಅವರು ದೇವಜನರೊಂದಿಗೆಸೇರಿ ತಮ್ಮೆಲ್ಲಾ ಶಕ್ತಿ ಮೀರಿ ದುಷ್ಟಕೂಟಗಳ ವಿರುದ್ಧವಾಗಿ ಹೋರಾಡುತ್ತಾರೆ.KanCCh 303.3

    *****