Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಭೆಯಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದು

    ಅಂತಿಯೋಕ್ಯದಿದ ಬಂದಿದ್ದ ಸಭಾವಿಶ್ವಾಸಿಗಳು ಯೆರೂಸಲೇಮಿನಲ್ಲಿ ಸೇರಿದ್ದಅನೇಕ ಸಭೆಗಳ ವಿಶ್ವಾಸಿಗಳನ್ನು ಭೇಟಿಮಾಡಿ ಅನ್ಯಜನರ ಮಧ್ಯದಲ್ಲಿಅವರು ಮಾಡುತ್ತಿದ್ದಸೇವೆಯು ಹೇಗೆ ಯಶಸ್ವಿಯಾಯಿತೆಂದು ತಿಳಿಸಿದರು. ಅಲ್ಲದೆ ಕ್ರೈಸ್ತರಾಗಿದ್ದ ಕೆಲವುಫರಿಸಾಯರು ಅಂತಿಯೋಕ್ಯದಲ್ಲಿದ್ದ ಅನ್ಯಜನರಾಗಿದ್ದ ವಿಶ್ವಾಸಿಗಳಿಗೆ ನೀವು ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ಸುನ್ನತಿ ಮಾಡಿಸಿಕೊಂಡಲ್ಲಿ ಮಾತ್ರ ರಕ್ಷಿಸಲ್ಪಡುವಿರೆಂದುಅವರ ಮನಸ್ಸಿನಲ್ಲಿ ಗಲಿಬಿಲಿ ಹುಟ್ಟಿಸಿದ ವಿಷಯವನ್ನೂ ಸಹ ವಿವರಿಸಿದರು (ಅ.ಕೃತ್ಯಗಳು15:4-5). ಈ ಪ್ರಶ್ನೆಯು ಎಲ್ಲಾ ಸಭಾ ಹಿರಿಯರ ಮುಂದೆ ಚರ್ಚಿಸಲ್ಪಟ್ಟಿತು. ಅವರುಬಹಳವಾಗಿ ಚರ್ಚಿಸಿ ಕೊನೆಯಲ್ಲಿ ಒಂದು ನಿರ್ಣಯಕ್ಕೆ ಬಂದರು. ಅನ್ಯಜನರಿಂದಕ್ರೈಸ್ತರಾದ ವಿಶ್ವಾಸಿಗಳ ಮೇಲೆ ಔಪಚಾರಿಕವಾದ (Ceremonial) ನಿಯಮಗಳನ್ನುಅನುಸರಿಸಬೇಕೆಂಬ ಭಾರವನ್ನು ಹಾಕಬಾರದೆಂದೂ ಹಾಗೂ ಅವರಲ್ಲಿ ದೇವರ ಕಡೆಗೆತಿರುಗಿಕೊಂಡವರಿಗೆ ತೊಂದರೆ ಪಡಿಸಬಾರದೆಂದೂ ಅಧ್ಯಕ್ಷತೆ ವಹಿಸಿದ್ದ ಯಾಕೋಬನುನಿರ್ಣಯ ತಿಳಿಸಿದನು (ಅ.ಕೃತ್ಯಗಳು 15:10, 13, 19), ಅವನ ಈ ನಿರ್ಣಯವುಚರ್ಚೆಯನ್ನು ಮುಕ್ತಾಯಗೊಳಿಸಿತು.KanCCh 306.3

    ಈ ಪ್ರಕರಣದಲ್ಲಿ ಆಲೋಚನಾ ಸಭೆಯವರು ಕೈಕೊಂಡ ನಿರ್ಣಯವನ್ನು ತಿಳಿಸುವುದಕ್ಕೆಯಾಕೋಬನನ್ನು ಆರಿಸಿಕೊಳ್ಳಲಾಯಿತೆಂದು ಕಂಡುಬರುತ್ತದೆ. ಆದರೆ ಅನ್ಯಜನರಲ್ಲಿಕ್ರಿಸ್ತನನ್ನು ನಂಬಿದವರು ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ಹಾದರವನ್ನೂ, ಕುತ್ತಿಗೆಹಿಸುಕಿಕೊಂಡದ್ದನ್ನೂ, ರಕ್ತವನ್ನೂ, ವಿಸರ್ಜಿಸಬೇಕೆಂದು ಯಾಕೋಬನು ತಿಳಿಸಿದನು.ಅವರು ದೇವರಾಜ್ಞೆಗಳನ್ನು ಕೈಕೊಂಡು ಪರಿಶುದ್ಧ ಜೀವನ ನಡೆಸಬೇಕೆಂದೂ ತಿಳಿಸಲಾಯಿತು.ಅಲ್ಲದೆ ಮೋಶೆಯ ಧರ್ಮಶಾಸ್ತ್ರದ ಮೇರೆಗೆ ಸುನ್ನತಿ ಮಾಡಿಸಿಕೊಳ್ಳಬೇಕೆಂದುಒತ್ತಾಯಿಸುತ್ತಿರುವ ಫರಿಸಾಯರಿಗೆ ಅಪೋಸ್ತಲರು ಈ ರೀತಿ ಹೇಳುವುದಕ್ಕೆ ಅನುಮತಿಕೊಟ್ಟಿರಲಿಲ್ಲವೆಂದೂ ಸಹ ಭರವಸೆ ನೀಡಲಾಯಿತು.KanCCh 307.1

    ಅಂತಿಯೋಕ್ಯ ಸಭೆಯಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಲು ಸೇರಿದ್ದಸಮಾಲೋಚನಾ ಸಭೆಯಲ್ಲಿ ಅಪೋಸ್ತಲರೂ ಹಾಗೂ ಹಿರಿಯರೂ ಇದ್ದರು. ಇವರುಯೆಹೂದ್ಯರಿಂದಲೂ ಮತ್ತು ಅನ್ಯರಿಂದಲೂ ಕ್ರೈಸ್ತರಾದವರಿಗೆ ಕ್ರೈಸ್ತಸಭೆಗಳನ್ನುಸ್ಥಾಪಿಸುವುದರಲ್ಲಿ ಪ್ರಮುಖರಾಗಿದ್ದರು. ಅಲ್ಲದೆ ವಿವಿಧ ಸ್ಥಳಗಳಿಂದ ಆಯ್ಕೆ ಮಾಡಲ್ಪಟ್ಟಿದ್ದಪ್ರತಿನಿಧಿಗಳೂ ಸಹ ಸಮಾಲೋಚನಾ ಸಭೆಯಲ್ಲಿ ಕೂಡಿದ್ದರು. ಯೆರೂಸಲೇಮ್ ಮತ್ತುಅಂತಿಯೋಕ್ಯ ಸಭೆಯ ಹಿರಿಯರೂ ಸಹ ಅಲ್ಲಿದ್ದರು. ಈ ಸಮಾಲೋಚನಾ ಮಂಡಳಿಯುಪವಿತ್ರಾತ್ಮನ ಪ್ರೇರಣೆಯಿಂದಲೂ ಹಾಗೂ ದೇವರಿಂದ ಸ್ಥಾಪಿಸಲ್ಪಟ್ಟ ಸಭೆಯಒಮ್ಮತದಿಂದಲೂ ಅಂತಿಯೋಕ್ಯ ಸಭೆಯಲ್ಲಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಲುನಿರ್ಣಯ ತೆಗೆದುಕೊಂಡಿತು. ಇದರ ಪರಿಣಾಮವಾಗಿ ಅನ್ಯಜನರಿಗೆ ಪವಿತ್ರಾತ್ಮನನ್ನುಸುರಿಸುವುದರ ಮೂಲಕ ದೇವರು ತಾನೇ ಸ್ವತಃ ಮೇಲಿನ ಸಮಸ್ಯೆಗೆ ಉತ್ತರ ನೀಡಿದನು.ಪವಿತ್ರಾತ್ಮನ ಮಾರ್ಗದರ್ಶನ ಅನುಸರಿಸುವುದು ತಮ್ಮ ಕರ್ತ್ಯವೆಂದು ಅವರಿಗೆಮನವರಿಕೆಯಾಯಿತು.KanCCh 307.2

    ಅಂತಿಯೋಕ್ಯ ಸಭೆಯ ಸಮಸ್ಯೆ ಪರಿಹರಿಸಲು ಸಮಸ್ತ ಕ್ರೈಸ್ತ ಸಮೂಹವನ್ನೇ ಆಹ್ವಾನಿಸಲಿಲ್ಲ. ಅಪೊಸ್ತಲರು, ಸಭಾಹಿರಿಯರು ಹಾಗೂ ಸಭೆಯಲ್ಲಿ ಪ್ರಮುಖರಾದವ್ಯಕ್ತಿಗಳು ನಿರ್ಣಯ ತೆಗೆದುಕೊಂಡು ಅದನ್ನು ಅನುಸರಿಸುವಂತೆ ಆದೇಶನೀಡಿದರು.ಅದನ್ನು ಇತರೆಲ್ಲಾ ಕ್ರೈಸ್ತಸಭೆಗಳು ಒಪ್ಪಿಕೊಂಡವು. ಆದರೆ ಈ ನಿರ್ಣಯವು ಎಲ್ಲರಿಗೂಸಂತೋಷ ತರಲಿಲ್ಲ. ಬಹಳ ಆತ್ಮವಿಶ್ವಾಸವುಳ್ಳ ಹಾಗೂ ಮಹತ್ವಾಕಾಂಕ್ಷೆ ಹೊಂದಿದ್ದಕ್ರೈಸ್ತ ಸಹೋದರರು ಇದಕ್ಕೆ ಸಮ್ಮತಿಸಲಿಲ್ಲ. ಈ ನಿರ್ಣಯದ ಬಗ್ಗೆ ಅವರು ಗುಣಗುಟ್ಟಿಅಸಮ್ಮತಿ ವ್ಯಕ್ತಪಡಿಸಿದ್ದಲ್ಲದೆ, ಅದರಲ್ಲಿ ತಪ್ಪು ಹುಡುಕತೊಡಗಿದರು. ಅಲ್ಲದೆಹೊಸದಾದಏರ್ಪಾಡುಗಳನ್ನು ಸೂಚಿಸಿದ್ದಲ್ಲದೆ, ಸುವಾರ್ತಾಸೇವೆಗಾಗಿ ದೇವರಿಂದ ಪ್ರತಿಷ್ಟಿಸಲ್ಪಟ್ಟಿದ್ದಜನರು ತೆಗೆದುಕೊಂಡ ನಿರ್ಣಯವನ್ನು ದುರ್ಬಲಗೊಳಿಸಲು ಪ್ರಯತಿಸಿದರು. ಕ್ರೈಸ್ತಸಭೆಯುಆರಂಭದಿಂದಲೇ ಇಂತಹ ಅಡೆತಡೆಗಳನ್ನು ಎದುರಿಸಬೇಕಾಯಿತು; ಅಲ್ಲದೆಕ್ರಿಸ್ತನಎರಡನೇಬರೋಣದವರೆಗೂ ಸಹ ಇಂತದ್ದೇ ಸಮಸ್ಯೆಗಳನ್ನು ಎದುರಿಸುತ್ತಲೇಇರುತ್ತದೆ.KanCCh 307.3