Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರು ಕಣ್ಣೆದುರಿನಲ್ಲಿದ್ದಾನೆಂಬ ರೀತಿಯಲ್ಲಿ ವರ್ತಿಸಬೇಕು

    ಮಹೋನ್ನತದೇವರ ಅನಂತವಾದ ಹಾಗೂ ಎಣೆಯಿಲ್ಲದ ಪ್ರಸನ್ನತೆ ಆಲಯದಲ್ಲಿದೆಎಂದು ತಿಳಿದುವಿಶ್ವಾಸಿಗಳು ಯಥಾರ್ಥ ಭಯಭಕ್ತಿಯಿಂದಲೂ ಹಾಗೂ ಗಾಂಭೀರ್ಯದಿಂದಲೂ ವರ್ತಿಸಬೇಕು. ಆತನು ಪ್ರತ್ಯಕ್ಷವಾಗಿ ನಮ್ಮ ಎದುರಿಗೆ ಇದ್ದಾನೆಂಬಭಾವನೆಮೂಡಿದಾಗ, ಎಲ್ಲರ ಹೃದಯದಲ್ಲಿಯೂ ಬಹಳ ಪರಿಣಾಮ ಉಂಟಾಗುವುದು.ಪ್ರಾರ್ಥನಾಲಯದಲ್ಲಿ ದೇವರು ಇರುವುದರಿಂದ ಆ ಸ್ಥಳ ಹಾಗೂ ಸಮಯವುಪವಿತ್ರವಾಗಿರುತ್ತವೆ. ಆದುದರಿಂದ ನಾವು ಭಯಭಕ್ತಿಯಿಂದಲೂ, ಸಭ್ಯತೆಯಿಂದಲೂವರ್ತಿಸುವಾಗ, ಆತನು ನಮ್ಮ ಮಧ್ಯದಲ್ಲಿದ್ದಾನೆಂಬ ತೀವ್ರವಾದ ಭಾವನೆ ಉಂಟಾಗುವುದು.“.... ಆತನ ನಾಮವು ಪರಿಶುದ್ಧವೂ, ಭಯಂಕರವೂ ಆಗಿದೆ” ಎಂದು ಕೀರ್ತನೆಗಾರನಹೇಳುತ್ತಾನೆ (111:9).KanCCh 313.4

    ಪ್ರಾರ್ಥನೆಯ ಮೂಲಕ ಆರಾಧನೆ ಆರಂಭವಾದಾಗ, ಎಲ್ಲರೂ ಮೊಣಕಾಲೂರಿಪರಿಶುದ್ಧನಾದ ದೇವರ ಮುಂದೆ ತಗ್ಗಿಸಿಕೊಂಡು, ಮೌನವಾದ ಧ್ಯಾನದ ಮೂಲಕದೇವರನ್ನು ಹೃದಯದಲ್ಲಿ ಸ್ತುತಿಸಬೇಕು. ನಂಬಿಗಸ್ತರಾದ ವಿಶ್ವಾಸಿಗಳು ಮಾಡುವಪ್ರಾರ್ಥನೆಯನ್ನು ದೇವರು ಕೇಳುತ್ತಾನೆ ಹಾಗೂ ಬೋಧಕರು ಕೊಡುವ ಸಂದೇಶವುಪರಿಣಾಮಕಾರಿಯಾಗುತ್ತದೆ. ದೇವಾರಾಧನೆ ಮಾಡಲು ಬರುವವರು ನಿರುತ್ಸಾಹಮನೋಭಾವ ಹೊಂದಿರುವುದು ದೇವರ ವಾಕ್ಯವು ಪರಿಣಾಮಕಾರಿಯಾಗಿಲ್ಲದಿರುವುದಕ್ಕೆಒಂದು ದೊಡ್ಡ ಕಾರಣವಾಗಿದೆ. ಭಕ್ತಿಪೂರ್ವಕವಾಗಿ ಹೃದಯಂತರಾಳದಿಂದ ಹಾಡುವಮಧುರವಾದ ಹಾಡುಗಳು ಆತ್ಮಗಳನ್ನು ರಕ್ಷಿಸುವ ದೇವರಮಾರ್ಗಗಳಲ್ಲಿ ಒಂದಾಗಿದೆ.ಸಭೆಯಲ್ಲಿ ನಡೆಯುವ ಎಲ್ಲಾ ಆರಾಧನೆಗಳು ಕರ್ತನಾದ ದೇವರು ಅಲ್ಲಿ ಕಣ್ಣಿಗೆಕಾಣುವಂತೆ ಇದ್ದಾನೆಂಬ ಭಾವನೆಯಿಂದ ಬಹಳ ಗಾಂಭೀರ್ಯದಿಂದಲೂ ಹಾಗೂಭಯಭಕ್ತಿಯಿಂದಲೂ ನಡೆಯಬೇಕು.KanCCh 314.1

    ದೈವಸಂದೇಶವು ಕೊಡಲ್ಪಟ್ಟಾಗ, ಸಹೋದರ ಸಹೋದರಿಯರೇ, ದೇವರ ಪ್ರತಿನಿಧಿಯಮೂಲಕ ಆತನವಾಕ್ಯ ಕೇಳುತ್ತಿದ್ದೀರೆಂಬುದನ್ನು ನೀವು ನೆನಪಿನಲ್ಲಿಡಬೇಕು. ಸಂದೇಶವನ್ನುಗಮನವಿಟ್ಟು ಶ್ರದ್ಧೆಯಿಂದ ಕೇಳಬೇಕು. ಒಂದುಕ್ಷಣವಾದರೂ ನೀವು ತೂಕಡಿಸಬಾರದುಅಥವಾ ಮಲಗಬಾರದು. ಯಾಕೆಂದರೆ ಬೋಧಕರು ಕೊಡುವ ಸಂದೇಶವು ನಿಮ್ಮನ್ನುತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ತರಲು ಕಾರಣವಾಗಬಹುದು. ಸಂದೇಶದಮೂಲಕ ಬರುವ ಗದರಿಕೆ, ಎಚ್ಚರಿಕೆಗಳನ್ನು ಕೇಳದಂತೆ ಸೈತಾನನು ಹಾಗೂ ಅವನದೂತರು ನಮ್ಮ ಇಂದ್ರಿಯಗಳನ್ನೂ ನಿಷ್ಕ್ರಿಯಗೊಳಿಸುತ್ತಾರೆ ಅಥವಾ ಒಂದು ವೇಳೆಕೇಳಿದರೂ, ಹೃದಯದಲ್ಲಿ ಪರಿಣಾಮಬೀರದಂತೆಯೂ ಹಾಗೂ ಜೀವನದಲ್ಲಿ ಯಾವುದೇಬದಲಾವಣೆ ಬಾರದಂತೆಯೂ ವಾಕ್ಯಗಳನ್ನು ಸೈತಾನನು ತೆಗೆದುಬಿಡುತ್ತಾನೆ. ಕೆಲವುವೇಳೆಒಂದು ಚಿಕ್ಕಮಗುವಿನ ಆಟಪಾಟಗಳು ಸಭಿಕರ ಗಮನವನ್ನು ಬಹಳವಾಗಿ ಆಕರ್ಷಿಸುವಂತೆಮಾಡಿ, ವಾಕ್ಯವೆಂಬ ಅಮೂಲ್ಯ ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಫಲ ಕೊಡದಂತೆಮಾಡುತ್ತದೆ. ಕೆಲವು ವೇಳೆ ಯುವಕ ಯುವತಿಯರು ಬೋಧಕರು ದೈವಸಂದೇಶನೀಡುವಾಗ ಭಯಭಕ್ತಿಯಿಲ್ಲದೆ ತಮ್ಮದೇ ಆದ ಮಾತುಕತೆಯಲ್ಲಿ ತೊಡಗಿರುತ್ತಾರೆ. ದೇವದೂತರು ಅಲ್ಲಿಯೇ ಇದ್ದು ಇವರು ಮಾಡುವುದನ್ನೆಲ್ಲಾ ಗುರುತುಮಾಡಿಕೊಳ್ಳುತ್ತಿದ್ದಾರೆಂದುಯುವಕ ಯುವತಿಯರು ನೋಡಿದಲ್ಲಿ ನಾಚಿಕೆಯಿಂದತುಂಬಿ ತಮ್ಮ ಬಗ್ಗೆಯೇ ಅಸಹ್ಯಪಟ್ಟುಕೊಳ್ಳುತ್ತಾರೆ. ಶ್ರದ್ಧೆಯಿಂದ ಗಮನವಿಟ್ಟು ವಾಕ್ಯಕೇಳುವವರು ದೇವರಿಗೆ ಬೇಕಾಗಿದ್ದಾರೆ. ಜನರುದೇವಾಲಯದಲ್ಲಿ ಮಲಗಿರುವಾಗಸೈತಾನನು ತನ್ನ ಹಣಜಿ ಅಂದರೆ ಕಳೆಯನ್ನು ಬಿತ್ತುತ್ತಾನೆ.KanCCh 314.2

    ಸಂದೇಶಮುಗಿದು ದೈವಾಶೀರ್ವಾದ ಕೊಡುವಾಗ, ಕ್ರಿಸ್ತನ ಶಾಂತಿಯನ್ನುಕಳೆದುಕೊಳ್ಳುತ್ತೇವೆಯೋ ಎಂಬ ರೀತಿಯಲ್ಲಿ ಎಲ್ಲರೂ ಮೌನವಾಗಿರಬೇಕು. ಎಲ್ಲರೂಸಹ ಗಟ್ಟಿಯಾಗಿ ಮಾತಾಡದೆ, ಒಬ್ಬರ ಮೇಲೊಬ್ಬರು ಬಿದ್ದು ತಳ್ಳಾಡದೆ ತಾವು ದೇವರಸನ್ನಿಧಾನದಲ್ಲಿದ್ದೇವೆ ಹಾಗೂ ಆತನ ಕಣ್ಣುಗಳು ನಮ್ಮನ್ನು ನೋಡುತ್ತಿವೆ ಎಂಬ ಭಾವನೆಯಿಂದಭಯಭಕ್ತಿಯಿಂದ ಹೊರಗೆ ಹೋಗಬೇಕು. ಅಲ್ಲಿಯೇ ನಿಂತು ಮಾತಾಡುತ್ತಾ ಇತರರುಹೊರಹೋಗುವುದಕ್ಕೆ ಅಡ್ಡಿ ಮಾಡಬಾರದು. ದೇವಾಲಯದ ಆವರಣದಲ್ಲಿ ಪರಿಶುದ್ಧವಾದಭಯಭಕ್ತಿಯಿಂದ ನಡೆದುಕೊಳ್ಳಬೇಕು. ಅದು ಹಳೆಯಸ್ನೇಹಿತರನ್ನು ಸಂಧಿಸಿ ಲೌಕಿಕವಾದವ್ಯಾವಹಾರಿಕ ವಿಷಯಗಳನ್ನು ಮಾಡುವ ಸ್ಥಳವಾಗಬಾರದು. ಇದನ್ನೆಲ್ಲಾ ಸಭೆಯಿಂದಹೊರಗೆ ಮಾಡಬೇಕು. ಸಭೆಯೋಳಗೆ ಜೋರಾಗಿ ಮಾತಾಡುವುದು ಮತ್ತು ಅಲಕ್ಷದಿಂದಪ್ರಯಾಸಪಟ್ಟು ಕಾಲೆಳೆದುಕೊಂಡು ಹೋದಲ್ಲಿ ದೇವರಿಗೂ ಹಾಗೂ ಆತನ ದೂತರಿಗೂಅಗೌರವ ಮಾಡಿದಂತಾಗುತ್ತದೆ.KanCCh 315.1