Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ನಾನು ನಿಮ್ಮನ್ನು ಪ್ರೀತಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು

  ಮಾನವರ ರಕ್ಷಣೆಗೆ ದೇವರು ತನ್ನ ಕಾರ್ಯವನ್ನು ಮಾಡಿದ್ದಾನೆ. ಈಗ ಆತನುಸಭೆಯ ಸಹಕಾರ ಕೇಳುತ್ತಿದ್ದಾನೆ. ಒಂದುಕಡೆಯಲ್ಲಿ ಕ್ರಿಸ್ತನರಕ್ತ, ಸತ್ಯದ ವಾಕ್ಯ ಹಾಗೂಪರಿಶುದ್ಧಾತ್ಮನಿದ್ದಾನೆ. ಮತ್ತೊಂದೆಡೆ ನಾಶವಾಗುತ್ತಿರುವ ಜನರಿದ್ದಾರೆ. ಕ್ರಿಸ್ತನ ಪ್ರತಿಯೊಬ್ಬಹಿಂಬಾಲಕನೂ ಇತರರು ಪರಲೋಕದ ಆಶೀರ್ವಾದಗಳನ್ನು ಹೊಂದಿಕೊಳ್ಳುವಂತೆಅವರಿಗೆ ತಿಳಿಸಲು ತಮ್ಮ ಕಾರ್ಯ ಮಾಡಬೇಕು. ದೇವರು ನಮಗೆ ನೀಡಿದ ಕರ್ತವ್ಯವನ್ನುಮಾಡಿದ್ದೇವೆಯೋ ಎಂಬುದನ್ನು ಕೂಲಂಕುಶವಾಗಿ ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು.ನಮ್ಮ ಉದ್ದೇಶ ಮತ್ತು ಜೀವನದಪ್ರತಿಯೊಂದು ಕಾರ್ಯದ ಬಗ್ಗೆ ನಮ್ಮನ್ನು ನಾವೇಪ್ರಶ್ನಿಸಿಕೊಳ್ಳಬೇಕು.KanCCh 321.2

  ಇತರರ ತಪ್ಪುಪಾಪಗಳನ್ನು ಎತ್ತಿ ಆಡುವ ನಾವು, ಎಷ್ಟೊಂದು ಪಾಪಗಳನ್ನುಮಾಡಿದ್ದೇವೆಂಬುದನ್ನು ನೆನಪಿಸಿಕೊಳ್ಳಿ, ಅನೇಕಸಾರಿ ನಮಗೆ ಕ್ರಿಸ್ತನ ಕ್ಷಮೆ ಬೇಕಾಗಿತ್ತಲ್ಲವೇ?ಆತನ ಅನುಕಂಪ ಹಾಗೂ ಪ್ರೀತಿಯ ಮೇಲೆ ನಾವು ಯಾವಾಗಲೂ ಆತುಕೊಂಡಿರಲಿಲ್ಲವೇ!ಆದಾಗ್ಯೂ ಕ್ರಿಸ್ತನು ನಿಮಗೆ ತೋರಿಸಿದ ಅದೇ ಪ್ರೀತಿ ಅನುಕಂಪವನ್ನು ತಪ್ಪು ಮಾಡಿದಇತರರಿಗೆ ನೀವು ತೋರಿಸಲಿಲ್ಲ. ದೇವರನ್ನು ಬಿಟ್ಟು ದೂರಹೋಗುವವರ ವಿಷಯದಲ್ಲಿನಿಮ್ಮಲ್ಲಿ ಅನುತಾಪವಿದೆಯೇ? ಅವರನ್ನು ರಕ್ಷಿಸುವುದು ನನ್ನ ಜವಾಬ್ದಾರಿಯೆಂದುನಿಮಗೆ ಅನಿಸಿದೆಯೇ? ಅವರಿಗೆ ಕರುಣೆಯಿಂದ ಎಚ್ಚರಿಕೆ ನೀಡಿರುವಿರಾ? ಅವರಿಗಾಗಿದುಃಖಪಟ್ಟು ಅವರೊಂದಿಗೆ ಪ್ರಾರ್ಥಿಸಿದ್ದೀರಾ? ನಿಮ್ಮ ಕರುಣೆಯ ಮಾತುಗಳಿಂದಹಾಗೂ ಕ್ರಿಯೆಗಳಿಂದ ನಿನ್ನನ್ನು ಪ್ರೀತಿಸುತ್ತೇನೆ ಮತ್ತು ಪಾಪದ ಮಾರ್ಗದಿಂದ ರಕ್ಷಿಸಲುಬಯಸುತ್ತೇನೆಂದು ಅವರಿಗೆ ಹೇಳಿರುವಿರಾ?KanCCh 321.3

  ಸಭೆಯವಿಶ್ವಾಸಿಗಳಲ್ಲಿ ಕೆಲವರು ತಮ್ಮದೇಆದ ಕೆಟ್ಟ ಅಭ್ಯಾಸಗಳಿಂದ ಹಾಗೂದೌರ್ಬಲ್ಯಗಳಿಂದ ಬಿದ್ದು ಹೋಗಿ ಪಾಪದ ಭಾರದಿಂದ ತೊಳಲುತ್ತಿರುವಾಗ, ಅವರೇ ಈ ಹೋರಾಟವನ್ನು ಮಾಡಲಿ ಎಂದು ಅವರಿಗೆ ಸಹಾಯ ಮಾಡದೆ ಸುಮ್ಮನಿರುವಿರಾ?ಬಹಳವಾಗಿ ಸೈತಾನನ ಶೋಧನೆಗೆ ಒಳಗಾಗಿರುವ ಅಂತವರಿಗೆ ನೀವು ಸಹಾಯಮಾಡದೆ,ಕಾಯಿನನು ಹೆಬೇಲನ ವಿಷಯದಲ್ಲಿ ಹೇಳಿದಂತೆ “ನನ್ನ ತಮ್ಮನನ್ನು ಕಾಯುವವನುನಾನೋ” ಎಂದು ಹೇಳುವಿರಾ? (ಆದಿಕಾಂಡ 4:9).KanCCh 321.4

  ಕ್ರೈಸ್ತಸಭೆಯ ಶಿರಸ್ಸಾಗಿರುವ ಕ್ರಿಸ್ತನು ನಿಮ್ಮ ಜೀವನವನ್ನು ಹೇಗೆ ಪರಿಗಣಿಸಬೇಕು?ತನ್ನ ರಕ್ತದಿಂದ ಅವರನ್ನೂ ಸಹ ಆತನು ಕೊಂಡುಕೊಂಡಿರುವುದರಿಂದ ಎಲ್ಲಾ ಜನರೂಸಹ ಆತನಿಗೆ ಅಮೂಲ್ಯರಾಗಿದ್ದಾರೆ. ಅಂದಮೇಲೆ ಕ್ರೈಸ್ತ ಮಾರ್ಗವನ್ನು ಬಿಟ್ಟುಅಲೆದಾಡುತ್ತಿರುವ ಸಭಾವಿಶ್ವಾಸಿಗಳ ಬಗ್ಗೆ ನಿಮಗಿರುವ ಉದಾಸೀನತೆಯನ್ನು ಕ್ರಿಸ್ತನುಹೇಗೆ ನೋಡುತ್ತಾನೆ? ಅವರನ್ನು ನೀವು ತಾತ್ಸಾರ ಮಾಡಿ ಸಹಾಯ ಮಾಡದೆ ಬಿಟ್ಟಂತೆಆತನೂ ಸಹ ನಿಮ್ಮನ್ನು ತ್ಯಜಿಸುತ್ತಾನೆಂಬ ಭಯ ನಿಮ್ಮಲ್ಲಿಲ್ಲವೇ? ನಿಮ್ಮ ಅಲಕ್ಷಹಾಗೂ ಉದಾಸೀನತೆಯನ್ನು ದೇವದೂತರು ಹಾಗೂ ಕ್ರಿಸ್ತನು ಗಮನಿಸುತ್ತಾರೆಂಬುದುನಿಮಗೆ ತಿಳಿದಿರಲಿ.KanCCh 322.1

  ಇಂತವರ ವಿಷಯದಲ್ಲಿ ನೀವು ತೋರಿದ ಉದಾಸೀನತೆಯನ್ನು ಸರಿಪಡಿಸಿಕೊಳ್ಳುವುದಕ್ಕೆಸಮಯವು ಇನ್ನೂ ಮೀರಿಲ್ಲ. ನಿಮ್ಮಲ್ಲಿ ಅವರ ಬಗ್ಗೆ ಇದ್ದ ಮೊದಲಿನ ಪ್ರೀತಿ ಮತ್ತುಅತ್ಯುತ್ಸಾಹವು ಪುನಃ ಕಂಡುಬರಲಿ. ನಿಮ್ಮ ತಾತ್ಸಾರ ಮನೋಭಾವದಿಂದ ಸಭೆಯನ್ನುಬಿಟ್ಟುಹೋಗಿರುವವರಿಗೆ ನೀವುಮಾಡಿದ ನೋವಿನ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿ.ನೀವು ಮೊದಲು ಪ್ರೀತಿ ಅನುಕಂಪದ ಬುಗ್ಗೆಯಾಗಿರುವ ಕ್ರಿಸ್ತನ ಬಳಿಗೆ ಬನ್ನಿರಿ. ಆದೈವೀಕ ಪ್ರೀತಿಯು ನಿಮ್ಮ ಹೃದಯಕ್ಕೆ ಹರಿದು ಬರಲಿ ಹಾಗೂ ನಿಮ್ಮಿಂದ ಇತರರಹೃದಯಗಳಿಗೆ ಹರಿಯಲಿ. ಇತರರನ್ನು, ಅದರಲ್ಲಿಯೂ ವಿಶೇಷವಾಗಿ ಕ್ರಿಸ್ತನಲ್ಲಿಸಹೋದರರಾಗಿರುವವರಿಗೆ ಆತನು ತನ್ನ ಅಮೂಲ್ಯ ಜೀವನದಲ್ಲಿ ಕರುಣೆ, ದಯೆಮೊದಲಾದ ಒಳ್ಳೆಯ ಗುಣಗಳ ಮಾದರಿಯನ್ನು ತೋರಿಸಿದಂತೆ ನಾವೂ ಸಹ ಅನುಸರಿಸಿತೋರಿಸೋಣ.KanCCh 322.2

  ಕ್ರೈಸ್ತ ವಿಶ್ವಾಸಿಗಳಲ್ಲಿ ಅನೇಕರು ಜೀವನದ ಮಹಾಹೋರಾಟದಲ್ಲಿ ಸೋತು ಬಹಳನಿರಾಶರಾಗಿದ್ದಾರೆ. ನಮ್ಮಿಂದ ಬರುವ ಕರುಣೆಯ ಮಾತುಗಳು ಮತ್ತು ಉತ್ತೇಜನವುಅವರನ್ನು ಎಷ್ಟೋ ಮಟ್ಟಿಗೆ ಆತ್ಮೀಕವಾಗಿ ಬಲಪಡಿಸಿ ಅವರು ಆ ಹೋರಾಟದಲ್ಲಿಜಯಹೊಂದಬಹುದಾಗಿತ್ತು. ಎಂದಿಗೂ ಸಹ ನಾವು ನಿರ್ದಯೆ, ಕ್ರೂರತನನಿಷ್ಟುರತೆಯುಳ್ಳವರೂ ಮತ್ತು ಇತರರಲ್ಲಿ ಯಾವಾಗಲೂ ತಪ್ಪು ಹುಡುಕುವವರೂಆಗಿರಬಾರದು. ಪಾಪ, ಕಷ್ಟದ ಭಾರದಿಂದ ದುಃಖಿತರಾಗಿರುವವರಿಗೆ ನಿರೀಕ್ಷೆ ಹುಟ್ಟಿಸುವಉತ್ತೇಜನಕಾರಿ ಮಾತುಗಳನ್ನು ಹೇಳುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬಾರದು.ನಮ್ಮ ಕರುಣೆಯ ಮಾತುಗಳು ಹಾಗೂ ಕ್ರಿಸ್ತನ ಮಾದರಿಯಂತೆ ಪ್ರಯತ್ನಗಳು ಅವರ ಭಾರವನ್ನು ಎಷ್ಟೊಂದು ಹಗುರ ಮಾಡುತ್ತದೆಂದು ಹೇಳಲಾಗದು. ಪ್ರೀತಿ, ಅನುಕಂಪ,ಕರುಣೆಯಿಂದ ಕೂಡಿದ ಮಾತುಗಳಿಂದ ಅವರನ್ನು ಕ್ರಿಸ್ತನಲ್ಲಿ ಆತ್ಮಿಕವಾಗಿ ಬಲಪಡಿಸುವಾಗಅವರು ತಮ್ಮ ತಪ್ಪುಮಾರ್ಗಗಳನ್ನು ಬಿಟ್ಟು ಕ್ರಿಸ್ತನ ಕಡೆಗೆ ತಿರುಗಿಕೊಳ್ಳುತ್ತಾರೆ.KanCCh 322.3