Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆಸ್ತಿಯ ಕ್ರಮಬದ್ಧ ವ್ಯವಸ್ಥೆ

    ತಂದೆತಾಯಿಯರು ಇನ್ನೂ ಆರೋಗ್ಯವಂತರಾಗಿದ್ದು ಒಳ್ಳೆಯ ನಿರ್ಧಾರ ಕೈಗೊಳ್ಳುವಂತಸ್ವಸ್ಥಬುದ್ದಿ ಇರುವಾಗಲೇ, ಪ್ರಾರ್ಥನಾಪೂರ್ವಕವಾಗಿ ದೈವಭಕ್ತಿಯುಳ್ಳ ವಿಶ್ವಾಸಿಗಳಸಮಾಲೋಚನೆಯೊಂದಿಗೆ ತಮ್ಮ ಆಸ್ತಿಯನ್ನು ಕ್ರಮಬದ್ಧವಾಗಿ ವ್ಯವಸ್ಥೆ ಮಾಡಬೇಕು.KanCCh 339.3

    ಇಂತಹ ತಂದೆತಾಯಿಯರ ಮಕ್ಕಳು ಬಡವರಾಗಿದ್ದಲ್ಲಿ, ಅವರು ತಮ್ಮ ಆದಾಯವನ್ನುನ್ಯಾಯಸಮ್ಮತವಾಗಿ ಉಪಯೋಗಿಸುತ್ತಾರೆಂದು ತಂದೆ ತಾಯಿಯರಿಗೆ ಕಂಡುಬಂದಲ್ಲಿ,ಅವರಿಗೆ ತಮ್ಮ ಆಸ್ತಿಯಲ್ಲಿ ಪಾಲು ಕೊಡಬೇಕು. ಆದರೆ ಅವರಿಗೆ ಶ್ರೀಮಂತರಾದಮಕ್ಕಳಿದ್ದು ದೈವಭಕ್ತಿಯಿಲ್ಲದೆಪ್ರಾಪಂಚಿಕವಾದ ವಿಷಯಗಳಲ್ಲಿ ಮಗ್ನರಾಗಿದ್ದಲ್ಲಿ, ಅವರಿಗೆಆಸ್ತಿಯಲ್ಲಿ ಪಾಲುಕೊಡಬಾರದು. ಒಂದು ವೇಳೆ ತಮ್ಮ ಮಕ್ಕಳೆಂಬ ಮಮತೆಯಿಂದತಂದೆತಾಯಿಯರು ಅವರಿಗೆ ಆಸ್ತಿಕೊಟ್ಟಲ್ಲಿ, ತಮ್ಮನ್ನು ಪಾರುಪತ್ಯಗಾರರನ್ನಾಗಿ ಮಾಡಿದದೇವರಿಗೆ ವಿರುದ್ಧವಾಗಿ ಅವರು ಪಾಪಮಾಡುತ್ತಾರೆ.ದೇವರವಾಕ್ಯಗಳನ್ನು ಆಲಕ್ಷ್ಯ ಮಾಡಬಾರದು. ತಂದೆತಾಯಿಯರು ದೇವರಸೇವೆಗೆ ಧಾರಾಳವಾಗಿ ಕೊಡಬೇಕು. ಇದರಿಂದಅವರಿಗೆ ಈ ಲೋಕದಲ್ಲಿ ತೃಪ್ತಿ ದೊರೆಯುವುದಲ್ಲದೆ, ಪರಲೋಕದಲ್ಲಿಯೂಪ್ರತಿಫಲವಿರುವುದು. ದೇವರಿಂದ ತಮಗೆ ಬಂದಿರುವ ಸಂಪತ್ತನ್ನು, ಆತನ ಸೇವೆಗೆಅಗತ್ಯವಾದ ರೀತಿಯಲ್ಲಿ ಉಪಯೋಗಿಸಬೇಕು.KanCCh 339.4

    ದೇವರಿಗೆ ಸಲ್ಲಬೇಕಾದ ದಶಾಂಶ ಕಾಣಿಕೆಗಳನ್ನು ಕೊಡದೆ ತಮ್ಮ ಮಕ್ಕಳಿಗಾಗಿಹಿಡಿದಿಟ್ಟುಕೊಳ್ಳುವವರು ತಮ್ಮ ಮಕ್ಕಳ ಆತ್ಮೀಕ ಆಸಕ್ತಿಗೆ ಅಪಾಯವುಂಟು ಮಾಡುತ್ತಾರೆ.ತಮಗೆಅಡೆತಡೆಯಾಗಿರುವ ಆಸ್ತಿಯನ್ನು ತಮ್ಮ ಮಕ್ಕಳು ಎಡವಿಬಿದ್ದು ನಾಶಕ್ಕೆಗುರಿಯಾಗುವಂತೆ ಅವರಿಗೂ ಅಡೆತಡೆ ಉಂಟುಮಾಡುತ್ತಾರೆ. ಈ ಜೀವನಕ್ಕೆ ಸಂಬಂಧಿಸಿದವಿಷಯಗಳಲ್ಲಿ ಅನೇಕರು ದೊಡ್ಡ ತಪ್ಪು ಮಾಡುತ್ತಿದ್ದಾರೆ. ತಮಗೆ ದೊರೆತ ಆಸ್ತಿಯನ್ನುಸರಿಯಾದ ರೀತಿಯಲ್ಲಿ ಉಪಯೋಗಿಸಿ ತಮಗೂ ಹಾಗೂ ಇತರರಿಗೂ ಒಳ್ಳೆಯದುಮಾಡುವುದಕ್ಕೆ ಬದಲಾಗಿ ಕೆಲವರು ಸ್ವಾರ್ಥಿಗಳೂ ಹಾಗೂ ಹಣದ ಮೇಲೆದುರಾಶೆಯುಳ್ಳವರೂ ಆಗುತ್ತಾರೆ. ತಾವು ಉಪಯೋಗಿಸಲಾಗದ ಹಣವನ್ನು ಗಳಿಸಬೇಕೆಂಬಉದ್ದೇಶದಿಂದ ಇಂತವರು ತಮ್ಮ ಆತ್ಮೀಕ ವಿಷಯಗಳನ್ನು ನಿರ್ಲಕ್ಷಿಸಿ ಕೈಸ್ತೀಯಧಾರ್ಮಿಕತೆಯಲ್ಲಿಬೆಳವಣಿಗೆ ಹೊಂದಲಾರರು. ಅವರು ತಮ್ಮ ಆಸ್ತಿಯನ್ನು ಮಕ್ಕಳಿಗೆಬಿಟ್ಟು ಹೋಗುತ್ತಾರೆ. ಅದುಅವರಿಗಿಂತಲೂ ಹೆಚ್ಚಾಗಿ ಅವರ ಮಕ್ಕಳಿಗೆ ಹೆಚ್ಚಿನ ಶಾಪವಾಗಿಪರಿಣಮಿಸುತ್ತದೆ. ತಮ್ಮ ತಂದೆಯರಆಸ್ತಿಯ ಮೇಲೆ ಅವಲಂಬಿಸಿರುವ ಮಕ್ಕಳು ಈಜೀವನದಲ್ಲಿ ಯಶಸ್ಸು ಪಡೆಯಲು ವಿಫಲರಾಗುತ್ತಾರೆ ಹಾಗೂ ಸಾಮಾನ್ಯವಾಗಿ ಪರಲೋಕಸೇರುವುದೂ ಇಲ್ಲ.KanCCh 340.1

    ತಂದೆತಾಯಿಯರು ತಮ್ಮ ಮಕ್ಕಳಿಗೆ ಉಪಯುಕ್ತವಾದ ಶ್ರಮದ ಬಗ್ಗೆ ತಿಳುವಳಿಕೆನೀಡುವುದು ಹಾಗೂ ನಿಷ್ಪಕ್ಷಪಾತವಾದ ಮತ್ತು ನಿಸ್ವಾರ್ಥದಿಂದ ಕೂಡಿದ ಉದಾರತೆಯಮಾದರಿಯಾದ ಜೀವನ ನಡೆಸುವುದೇ ಅವರಿಗೆ ಕೊಡಬಹುದಾದ ಅತ್ಯುತ್ತಮಕೊಡುಗೆಯಾಗಿದೆ. ಇಂತಹ ಜೀವನವು ಹಣದ ನಿಜವಾದ ಮೌಲ್ಯವೇನೆಂದುತೋರಿಸುವುದು ಮಾತ್ರವಲ್ಲದೆ, ದೇವರ ಸುವಾರ್ತಾಸೇವೆಯಬೆಳವಣಿಗೆಗೆಸಹಕಾರಿಯಾಗಿದೆ.KanCCh 340.2