Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-48 — ಪ್ರಾರ್ಥನಾ ಕೂಟಗಳು

    ಪ್ರಾರ್ಥನಾಕೂಟಗಳು ವಿಶ್ವಾಸಿಗಳೆಲ್ಲರೂ ಒಟ್ಟಾಗಿ ಕೂಡಿರುವ ಒಂದು ಆಸಕ್ತಿಕರವಾದಸಭೆಯಾಗಿರಬೇಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವು ಬಹಳ ನೀರಸವಾಗಿರುತ್ತವೆ.ಅನೇಕರು ಸಭೆಯಲ್ಲಿ ಸಂದೇಶ ಕೇಳಲು ಬರುತ್ತಾರೆ, ಆದರೆ ಪ್ರಾರ್ಥನಾ ಕೂಟಗಳನ್ನುಅಲಕ್ಷಿಸುತ್ತಾರೆ. ಇದರ ಬಗ್ಗೆ ಚಿಂತಿಸಬೇಕು. ದೇವರಿಂದ ವಿವೇಕಕ್ಕಾಗಿ ಬೇಡಿಕೊಳ್ಳಬೇಕುಹಾಗೂ ಅವು ಆಕರ್ಷಣೀಯವೂ, ಆಸಕ್ತಿಕರವೂ ಆಗಿರುವಂತೆ ಸಾಕಷ್ಟು ಮುಂಚಿತವಾಗಿಯೋಜಿಸಿಕೊಳ್ಳಬೇಕು. ಜನರು ಜೀವದ ರೊಟ್ಟಿಗಾಗಿ ಹಸಿದಿದ್ದಾರೆ. ಈ ಜೀವದರೊಟ್ಟಿಪ್ರಾರ್ಥನಾ ಕೂಟಗಳಲ್ಲಿ ಅವರಿಗೆ ದೊರೆತಲ್ಲಿ, ಅದನ್ನು ಪಡೆದುಕೊಳ್ಳಲು ಅಲ್ಲಿಗೆಹೋಗುತ್ತಾರೆ.KanCCh 353.1

    ಪ್ರಾರ್ಥನಾ ಕೂಟಗಳಲ್ಲಿಯಾಗಲಿ ಅಥವಾ ಹುಟ್ಟುಹಬ್ಬ, ಮದುವೆ, ನಿಶ್ಚಿತಾರ್ಥಮುಂತಾದ ಸಾಮಾಜಿಕ ಕೂಟಗಳಲ್ಲಿಯಾಗಲಿ ಉದ್ದವಾದ, ಬೇಸರಗೊಳಿಸುವ ಸಂದೇಶನೀಡಬಾರದು ಹಾಗೂ ಪ್ರಾರ್ಥನೆಗಳನ್ನು ಮಾಡಬಾರದು. ಮಾತಾಡಲು ಯಾವಾಗಲೂಸಿದ್ಧರಾಗಿ ಮುಂದೆ ಬರುವಂತ ವ್ಯಕ್ತಿಗಳಿಂದ ಪುಕ್ಕಲು ಹಾಗೂ ಸಂಕೋಚಸ್ವಭಾವದಜನರು ಸಾಕ್ಷಿಕೇಳಲು ಹಿಂಜರಿಯುತ್ತಾರೆ. ದೇವರ ವಾಕ್ಯದ ಬಗ್ಗೆ ಆಳವಾದ ಜ್ಞಾನವಿಲ್ಲದವರೇಹೆಚ್ಚು ಮಾತಾಡುತ್ತಾರೆ. ಅವರು ಮಾಡುವ ಪ್ರಾರ್ಥನೆಗಳು ದೀರ್ಘವಾಗಿಯೂ ಮತ್ತುಹೇಳಿದ್ದನ್ನೇ ಪದೇ ಪದೇ ಹೇಳುವಂತೆ ಯಾಂತ್ರಿಕವಾಗಿರುತ್ತದೆ. ಇದರಿಂದ ಅವರುಕೇಳುತ್ತಿರುವ ವಿಶ್ವಾಸಿಗಳಿಗೆ ಮಾತ್ರವಲ್ಲ, ದೇವದೂತರಿಗೂ ಬೇಸರ ಹುಟ್ಟಿಸುತ್ತಾರೆ. ನಾವುಮಾಡುವ ಪ್ರಾರ್ಥನೆಗಳು ಚಿಕ್ಕದಾಗಿಯೂ ಹಾಗೂ ಸನ್ನಿವೇಶಕ್ಕೆ ತಕ್ಕಂತೆಯೂಪೂರಕವಾಗಿರಬೇಕು. ವಿಷಯಕ್ಕೆ ಸಂಬಂಧಪಟ್ಟಿರಬೇಕು. ಉದ್ದವಾದ, ಬೇಸರ ಹುಟ್ಟಿಸುವಪ್ರಾರ್ಥನೆ ಮಾಡುವವರು ನಿಮ್ಮ ಮನೆಗಳಲ್ಲಿ ಬೇಕಾದರೆ ನಿರಂತರವಾಗಿ ಪ್ರಾರ್ಥನೆಮಾಡಿಕೊಳ್ಳಿ, ನೀರಸವಾದ ಹಾಗೂ ಔಪಚಾರಿಕವಾದ (Formality) ಪ್ರಾರ್ಥನೆಗಳುನಿಮ್ಮಿಂದ ದೂರವಾಗುವಂತೆ ದೇವರಾತ್ಮನು ನಿಮ್ಮ ಹೃದಯಗಳಲ್ಲಿ ಪ್ರವೇಶಿಸಲಿ.KanCCh 353.2