Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೀಕ್ಷಾಸ್ನಾನಕ್ಕಾಗಿ ಮಕ್ಕಳನ್ನು ಸಿದ್ಧತೆಗೊಳಿಸುವುದು

    ದೀಕ್ಷಾಸ್ನಾನ ತೆಗೆದುಕೊಳ್ಳಲು ಬಯಸುವ ಮಕ್ಕಳಿಗೆ ತಂದೆ-ತಾಯಿಯರುಭಯಭಕ್ತಿಯಿಂದ ಸಲಹೆಗಳನ್ನು ನೀಡಬೇಕು ಮತ್ತು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಬೇಕು.ದೀಕ್ಷಾಸ್ನಾನವು ಅತ್ಯಂತ ಪವಿತ್ರವಾದ ಹಾಗೂ ಪ್ರಾಮುಖ್ಯವಾದ ಸಂಸ್ಕಾರವಾಗಿರುವುದರಿಂದ,ಮಕ್ಕಳಿಗೆ ಅದರ ಅರ್ಥ ಮತ್ತು ಮಹತ್ವವನ್ನು ಸಂಪೂರ್ಣವಾಗಿ ಮನವರಿಕೆ ಮಾಡಬೇಕು.ಅಂದರೆ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಕ್ರಿಸ್ತಯೇಸುವಿನಲ್ಲಿ ಹೊಸ ಜೀವನಕ್ಕೆ ಪ್ರವೇಶಿಸುವುದುಎಂದು ಅರ್ಥಪಡಿಸಬೇಕು. ದೀಕ್ಷಾಸ್ನಾನ ತೆಗೆದುಕೊಳ್ಳುವುದಕ್ಕೆ ಅನಾವಶ್ಯಕವಾಗಿ ಆತುರತೋರಬಾರದು. ತಂದೆ-ತಾಯಿಯರು ಹಾಗೂ ಮಕ್ಕಳು ಒಟ್ಟಾಗಿಕುಳಿತು ಅದರ ಬಗ್ಗೆಪ್ರಾರ್ಥನಾಪೂರ್ವಕವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ತಂದೆ- ತಾಯಿಯರು ಮಕ್ಕಳಿಗೆದೀಕ್ಷಾಸ್ನಾನ ತೆಗೆದುಕೊಳ್ಳಲು ಅನುಮತಿನೀಡಿದಾಗ, ಅವರನ್ನು ಭಯಭಕ್ತಿಯಲ್ಲಿಯೂಹಾಗೂ ಉತ್ತಮ ಗುಣಸ್ವಭಾವದಲ್ಲಿಯೂ ಬೆಳೆಸುತ್ತೇವೆಂದೂ ಮತ್ತು ತಮ್ಮ ಮಕ್ಕಳಿಗೆನಂಬಿಗಸ್ತರಾದ ಪಾರುಪತ್ಯಗಾರರಾಗಿರುತ್ತೇವೆಂದು ದೇವರಮುಂದೆ ಗಂಭೀರವಾಗಿ ಪ್ರತಿಜ್ಞೆಮಾಡುತ್ತಾರೆ. ಮಂದೆಯಲ್ಲಿರುವ ಈ ಕುರಿಗಳು ಕ್ರೈಸ್ತನಂಬಿಕೆಗೆ ಅಗೌರವ ತರದಂತೆಅವರನ್ನು ಕಾಪಾಡುವೆವೆಂದು ತಂದೆ-ತಾಯಿಯರು ವಾಗ್ದಾನ ಮಾಡುತ್ತಾರೆ.KanCCh 360.1

    ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕ್ರೈಸ್ತಧರ್ಮದ ಉಪದೇಶಗಳನ್ನು ತಿಳಿಸಿ ಹೇಳಬೇಕು.ಶಿಕ್ಷೆ ನೀಡುವ ರೀತಿಯಲ್ಲಿ ಕಠಿಣವಾದ ಭಾವನೆಯಿಂದಲ್ಲ. ಬದಲಾಗಿ ಉಲ್ಲಾಸದಿಂದತಿಳಿಯಪಡಿಸಬೇಕು. ಮಕ್ಕಳಿಗೆ ತಿಳಿಯದ ರೀತಿಯಲ್ಲಿ ಶೋಧನೆಯು ಬರುವಸಾಧ್ಯತೆಯಿರುವುದರಿಂದ, ತಾಯಂದಿರು ಅವರನ್ನು ಯಾವಾಗಲೂ ಎಚ್ಚರಿಕೆಯಿಂದಗಮನಿಸಬೇಕು. ತಂದೆ-ತಾಯಿಯರು ಹಿತಕರವಾದ ಮತ್ತು ವಿವೇಕದಿಂದ ಕೂಡಿದಸಲಹೆಗಳ ಮೂಲಕ ಮಕ್ಕಳನ್ನು ಸೈತಾನನ ಶೋಧನೆ, ಈ ಲೋಕದ ಆಕರ್ಷಣೆಇವುಗಳ ವಿರುದ್ಧ ಕಾಯಬೇಕು. ಅನನುಭವಿಗಳಾದ ಮಕ್ಕಳಿಗೆ ತಂದೆ-ತಾಯಿಯರುಉತ್ತಮ ಗೆಳೆಯರಂತಿದ್ದು, ಶೋಧನೆಗೆ ವಿರುದ್ಧವಾಗಿ ಜಯಹೊಂದುವುದಕ್ಕೆಸಹಾಯಮಾಡಬೇಕು, ಒಳ್ಳೆಯದನ್ನು ಮಾಡಲು ಪ್ರಯತ್ನಿಸುವ ತಮ್ಮ ಪ್ರೀತಿಯ ಮಕ್ಕಳುಕರ್ತನ ಕುಟುಂಬದ ಕಿರಿಯ ಸದಸ್ಯರೆಂದು ಮನವರಿಕೆ ನೀಡುವುದಲ್ಲದೆ, ವಿಧೇಯತೆಯಿಂದಕ್ರಿಸ್ತನ ನೇರಮಾರ್ಗದಲ್ಲಿ ನಡೆಯಲು ಸಹಾಯ ಮಾಡಬೇಕು. ತಂದೆ-ತಾಯಿಯರುಪ್ರೀತಿಯಿಂದ ಅವರಿಗೆ ದೇವರ ಮಕ್ಕಳಾಗುವುದರ ಅರ್ಥವೇನೆಂದು ತಿಳಿಸುವುದಲ್ಲದೆ,ಆತನಿಗೆ ವಿಧೇಯರಾಗುವಂತೆ ಭಯಭಕ್ತಿಯಲ್ಲಿ ಬೆಳೆಸಬೇಕು. ದೇವರಿಗೆವಿಧೇಯರಾಗುವುದೆಂದರೆ, ತಂದೆ-ತಾಯಿಯರಿಗೂ ವಿಧೇಯರಾದಂತೆ ಎಂದು ಮಕ್ಕಳಿಗೆಬೋಧಿಸಬೇಕು. ಇದು ಪ್ರತಿದಿನದ, ಪ್ರತಿಕ್ಷಣದ ಕಾರ್ಯವಾಗಿದೆ. ತಂದೆ-ತಾಯಿಯರೇ,ಎಚ್ಚರವಾಗಿದ್ದು ಮಕ್ಕಳಿಗಾಗಿ ಪ್ರಾರ್ಥಿಸಿ ಹಾಗೂ ಅವರನ್ನು ನಿಮ್ಮ ಜೊತೆಗಾರನನ್ನಾಗಿ(Companion) ಮಾಡಿಕೊಳ್ಳಬೇಕು.KanCCh 360.2

    ಮಕ್ಕಳ ಜೀವನದ ಅತ್ಯಂತ ಸಂತೋಷಭರಿತ ಸಮಯ ಬಂದು, ಅವರು ಕ್ರಿಸ್ತನನ್ನುಪ್ರೀತಿಸಿ, ದೀಕ್ಷಾಸ್ನಾನ ತೆಗೆದುಕೊಳ್ಳಬೇಕೆಂದು ಅಪೇಕ್ಷಿಸಿದಾಗ, ತಂದೆ- ತಾಯಿಯರಾದನೀವು ಅವರೊಂದಿಗೆ ಬಹಳ ವಿಶ್ವಾಸದಿಂದ ವರ್ತಿಸಬೇಕು. ದೀಕ್ಷಾಸ್ನಾನ ಸಂಸ್ಕಾರತೆಗೆದುಕೊಳ್ಳುವ ಮೊದಲು, ದೇವರಿಗಾಗಿ ಸೇವೆಮಾಡುವುದು ನಿಮ್ಮ ಜೀವನದ ಪ್ರಮುಖಗುರಿಯಾಗಿದೆಯೇ ಎಂದು ಮಕ್ಕಳನ್ನು ವಿಚಾರಿಸಬೇಕು. ಅನಂತರ ಅದನ್ನು ಹೇಗೆಆರಂಭಿಸಬೇಕೆಂದು ತಿಳಿಸಿ. ಇದು ಅವರಿಗೆ ಮೊದಲ ಪಾಠವಾಗಿರುವುದರಿಂದ ಬಹಳಪ್ರಾಮುಖ್ಯವಾಗಿದೆ. ಮಕ್ಕಳು ದೇವರಿಗೆ ಮೊದಲನೆಯದಾಗಿ ಸೇವೆಯನ್ನುಹೇಗೆಮಾಡಬೇಕೆಂದು ತಂದೆ-ತಾಯಿಯರು ಸರಳವಾಗಿ ತಿಳಿಸಿಹೇಳಬೇಕು. ಅವರಿಗೆ ಸಾಧ್ಯವಾದಷ್ಟು ಮನವರಿಕೆಯಾಗುವಂತೆ ಸುಲಭವಾಗಿ ವಿವರಿಸಿಹೇಳಬೇಕು. ಕ್ರೈಸ್ತ ತಂದೆ-ತಾಯಿಯರ ಮಾರ್ಗದರ್ಶನದಲ್ಲಿ ಕರ್ತನಿಗೆ ತಮ್ಮನ್ನು ಒಪ್ಪಿಸಿಕೊಡುವುದರ ಅರ್ಥವೇನುಹಾಗೂ ಆತನವಾಕ್ಯದ ಪ್ರಕಾರನಡೆಯುವ ಬಗ್ಗೆ ಮಕ್ಕಳಿಗೆ ವಿವರಿಸಬೇಕು.KanCCh 361.1

    ಇಷ್ಟೆಲ್ಲಾ ತಿಳಿಸಿದಮೇಲೆ ಮಕ್ಕಳು ಪರಿವರ್ತನೆ ಹಾಗೂ ದೀಕ್ಷಾಸ್ನಾನದ ಅರ್ಥಹಾಗೂ ಮಹತ್ವವನ್ನು ಚೆನ್ನಾಗಿ ಮನವರಿಕೆ ಮಾಡಿಕೊಂಡಿದ್ದಾರೆಂದು ತಂದೆ-ತಾಯಿಯರಿಗೆತೃಪ್ತಿಯಾದಲ್ಲಿ, ಮಕ್ಕಳು ದೀಕ್ಷಾಸ್ನಾನ ತೆಗೆದುಕೊಳ್ಳಬೇಕು. ಆದರೆ ಅದಕ್ಕೆ ಮೊದಲುಪೋಷಕರು ತಮ್ಮ ಮಕ್ಕಳು ಇಕ್ಕಟ್ಟಾದ ಮಾರ್ಗದಲ್ಲಿ ವಿಧೇಯರಾಗಿ ನಡೆಯುವಂತೆಮಾರ್ಗದರ್ಶನ ನೀಡುವಲ್ಲಿ ಪ್ರಾಮಾಣಿಕರಾದ ಕುರುಬರಂತೆ ಸಿದ್ಧತೆ ಮಾಡಿಕೊಳ್ಳಬೇಕು.ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಪ್ರೀತಿ, ವಿನಯತೆ, ಕ್ರೈಸ್ತ ವಿಧೇಯತೆ ಹಾಗೂಕ್ರಿಸ್ತನಿಗೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡುವ ವಿಷಯದಲ್ಲಿ ತಾವೇ ಸ್ವತಃ ಯೋಗ್ಯವಾದಮಾದರಿಯಾಗುವಂತೆ ದೇವರು ಅವರಲ್ಲಿ ಕಾರ್ಯ ಮಾಡಬೇಕು. ತಮ್ಮ ಮಕ್ಕಳನ್ನುದೀಕ್ಷಾಸ್ನಾನ ತೆಗೆದುಕೊಳ್ಳಲು ಒಪ್ಪಿಗೆ ನೀಡಿದ ಪೋಷಕರು, ಅನಂತರ ಅವರನ್ನು ಅವರಷ್ಟಕ್ಕೆಬಿಟ್ಟು, ತಮ್ಮ ಜವಾಬ್ದಾರಿ ಮುಗಿಯಿತೆಂದು ಭಾವಿಸಿದಲ್ಲಿ, ಒಂದು ವೇಳೆ ಮಕ್ಕಳುಸತ್ಯಮಾರ್ಗದಿಂದ ದೂರವಾಗಿ ಅದರಲ್ಲಿ ನಂಬಿಕೆ, ಧೈರ್ಯ ಹಾಗೂ ಆಸಕ್ತಿ ಕಳೆದುಕೊಂಡಲ್ಲಿ.ಅದಕ್ಕೆ ತಂದೆ-ತಾಯಿಯರೇ ಜವಾಬ್ದಾರರು.KanCCh 361.2

    ದೀಕ್ಷಾಸ್ನಾನ ತೆಗೆದುಕೊಳ್ಳುವ ಗಂಡು ಹಾಗೂ ಹೆಣ್ಣುಮಕ್ಕಳು ಯೌವನಾವಸ್ಥೆತಲುಪಿದ್ದಲ್ಲಿ, ತಮ್ಮ ಕರ್ತವ್ಯವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಆದರೆ ಇಂತವರವಿಷಯದಲ್ಲಿ ಸಭಾಪಾಲಕರೂ ಸಹ ಜವಾಬ್ದಾರಿ ಹೊಂದಿದ್ದಾರೆ. ದೀಕ್ಷಾಸ್ನಾನತೆಗೆದುಕೊಳ್ಳುವ ಯುವಕ ಯುವತಿಯರು ಯಾವುದಾದರೂ ಕೆಟ್ಟ ಅಭ್ಯಾಸ ಹೊಂದಿದ್ದಲ್ಲಿಅವರೊಂದಿಗೆ ಪ್ರತ್ಯೇಕವಾಗಿ ಭೇಟಿ ಮಾಡುವುದು ಸಭಾಪಾಲಕರ ಕರ್ತವ್ಯವಾಗಿದೆ.ಸತ್ಯವೇದ ಓದಿ ಅವರೊಂದಿಗೆ ಪ್ರಾರ್ಥಿಸಿ, ಕರ್ತನಿಗೆ ಅವರ ಬಗ್ಗೆ ಇರುವ ಅಧಿಕಾರವನ್ನುಸರಳವಾಗಿ ತಿಳಿಸಿಹೇಳಬೇಕು. ಪಶ್ಚಾತ್ತಾಪ ಹಾಗೂ ಮನಃಪರಿವರ್ತನೆಯ ವಿಷಯವಾಗಿಸತ್ಯವೇದದಲ್ಲಿ ತಿಳಿಸಿರುವುದನ್ನು ದೀಕ್ಷಾಸ್ನಾನ ತೆಗೆದುಕೊಳ್ಳಲಿರುವ ಯುವಕ ಯುವತಿಯರಿಗೆಸಭಾಪಾಲಕರು ಬೋಧಿಸಬೇಕು. ಯಥಾರ್ಥವಾದ ಮನಃಪರಿವರ್ತನೆಯ ಫಲವು.ಅವರು ದೇವರನ್ನು ಪ್ರೀತಿಸುವುದರ ಸಾಕ್ಷಾಧಾರವಾಗಿದೆ ಎಂದು ತಿಳಿಸಿ ಹೇಳಬೇಕು.ಯಥಾರ್ಥ ಮನಃಪರಿವರ್ತನೆಯು ಅವರ ಆಲೋಚನೆಗಳು, ಉದ್ದೇಶಗಳು ಹಾಗೂಹೃದಯದಲ್ಲಾಗುವ ನಿಜವಾದ ಬದಲಾವಣೆಯೆಂದು ದೀಕ್ಷಾಸ್ನಾನ ತೆಗೆದುಕೊಳ್ಳಲಿರುವಯೌವನಸ್ಥರಿಗೆ ತೋರಿಸಿಕೊಡಬೇಕು. ಎಲ್ಲಾ ವಿಧವಾದ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು.ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದು, ಹೊಟ್ಟೆಕಿಚ್ಚು ಪಡುವುದು, ಅವಿಧೇಯತೆತೋರಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇಂತಹ ಕೆಟ್ಟ ಅಭ್ಯಾಸಗಳ ವಿರುದ್ಧವಾಗಿನೈತಿಕಹೋರಾಟ ಮಾಡಬೇಕು. ಆಗ ವಿಶ್ವಾಸಿಯು ಬೇಡಿಕೊಳ್ಳಿರಿ. ನಿಮಗೆದೊರೆಯುವುದು...” (ಮತ್ತಾಯ 7:7) ಎಂಬ ದೇವರ ವಾಗ್ದಾನವನ್ನುಪಡೆದುಕೊಳ್ಳಬಹುದು.KanCCh 362.1

    *****