Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-52 — ರೋಗಿಗಳಿಗಾಗಿ ಪ್ರಾರ್ಥಿಸುವುದು

    “ಮನುಷ್ಯರು ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸಬೇಕು” ಎಂದು ಸತ್ಯವೇದವುಹೇಳುತ್ತದೆ (ಲೂಕ 18:1). ನಮ್ಮ ಬಲವು ಕುಂದಿಹೋಗಿ ಜೀವನದಲ್ಲಿ ನಿರಾಶೆ ತುಂಬಿರುವಾಗನಮಗೆ ಪ್ರಾರ್ಥನೆಯ ಅಗತ್ಯ ಹೆಚ್ಚಾಗಿರುತ್ತದೆ. ಆರೋಗ್ಯವಂತರಾಗಿರುವವರು ಅನೇಕವೇಳೆ ದೇವರು ಇಷ್ಟುವರ್ಷಗಳ ಕಾಲ ತಮಗೆತೋರಿಸಿದ ಅದ್ಭುತವಾದ ಕರುಣೆಯನ್ನುಮರೆತು, ಆತನು ಮಾಡಿದ ಉಪಕಾರಗಳಿಗೆ ಕೃತಜ್ಞತೆಸಲ್ಲಿಸುವುದಿಲ್ಲ. ಆದರೆ ಅವರಿಗೆರೋಗ ಬಂದಾಗ, ದೇವರ ನೆನಪು ಬರುವುದು. ಮಾನವರ ಬಲವು ಕುಂದಿ ಹೋದಾಗ,ತಮಗೆ ದೈವೀಕಸಹಾಯದ ಅಗತ್ಯವಿದೆಯೆಂದು ಅವರಿಗೆ ಅನಿಸುವುದು. ಆದರೆಕರುಣೆಯುಳ್ಳ ನಮ್ಮದೇವರು ಪ್ರಾಮಾಣಿಕವಾಗಿ ತನ್ನ ಸಹಾಯ ನಿರೀಕ್ಷಿಸುವವರನ್ನುಎಂದಿಗೂ ಕೈ ಬಿಡುವುದಿಲ್ಲ ಹಾಗೂ ತೊರೆಯುವುದಿಲ್ಲ. ಆರೋಗ್ಯದಲ್ಲಿ ಮಾತ್ರವಲ್ಲದೆ,ರೋಗರುಜಿನದಲ್ಲಿಯೂ ಆತನು ನಮ್ಮ ಆಶ್ರಯವಾಗಿದ್ದಾನೆ.KanCCh 378.1

    ಕ್ರಿಸ್ತನು ಈ ಲೋಕದಲ್ಲಿದ್ದಾಗ, ಅನುಕಂಪವುಳ್ಳ ವೈದ್ಯನಾಗಿದ್ದ ಹಾಗೆಯೇ ಇಂದೂಸಹನಮಗೆಅನುಕಂಪತೋರಿಸುವ ದೇವರಾಗಿದ್ದಾನೆ. ಆತನಲ್ಲಿ ಎಲ್ಲಾ ರೋಗಗಳನ್ನುಗುಣಪಡಿಸುವ ಔಷಧವುಂಟು ಹಾಗೂ ಎಲ್ಲಾ ರೀತಿಯ ದೌರ್ಬಲ್ಯಗಳನ್ನು ಹೋಗಲಾಡಿಸಿಚೈತನ್ಯಗೊಳಿಸುವಶಕ್ತಿಯಿದೆ. ಕ್ರಿಸ್ತನ ಶಿಷ್ಯರು ಅಂದು ರೋಗಿಗಳಿಗೆ ಪ್ರಾರ್ಥಿಸಿದಂತೆಯೇ,ಆತನ ಅನುಯಾಯಿಗಳಾದ ನಾವು ಇಂದು ರೋಗಿಗಳಿಗಾಗಿ ಪ್ರಾರ್ಥಿಸಬೇಕು. ಆಗ“ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವುದು” (ಯಾಕೋಬನು5:15) ಎಂಬ ವಾಗ್ದಾನದಂತೆ ರೋಗಿಯು ಆರೋಗ್ಯ ಹೊಂದುವನು. ದೇವರವಾಗ್ದಾನಗಳನ್ನು ಹೊಂದಿಕೊಳ್ಳುವಂತ ಪವಿತ್ರಾತ್ಮನ ಶಕ್ತಿಯು ನಮ್ಮಲ್ಲಿದೆ.“.... ಅವರುರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವುದು” (ಮಾರ್ಕ 16:18) ಎಂದುದೇವರು ವಾಗ್ದಾನ ಮಾಡಿದ್ದಾನೆ. ಈ ಮಾತು ಅಪೊಸ್ತಲರ ಕಾಲದಂತೆಯೇ ಇಂದೂಸಹ ವಿಶ್ವಾಸಾರ್ಹವಾಗಿದೆ. ಇದು ದೇವರಮಕ್ಕಳಿಗೆ ಕೊಟ್ಟಂತ ವಿಶೇಷ ಸೌಲಭ್ಯವಾಗಿದ್ದು,ನಾವು ನಂಬಿಕೆಯಿಂದ ಅದನ್ನು ಪಡೆದುಕೊಳ್ಳಬೇಕು. ಕ್ರಿಸ್ತನು ಸೇವಕರಾದ ನಮ್ಮಮೂಲಕತನ್ನ ಕೆಲಸಮಾಡುವುದಲ್ಲದೆ, ತನ್ನ ಗುಣ ಮಾಡುವ ಶಕ್ತಿಯನ್ನು ತೋರಿಸಬೇಕೆಂದುಬಯಸುತ್ತಾನೆ. ನಾವು ನಂಬಿಕೆಯ ಮೂಲಕ ರೋಗರುಜಿನದಲ್ಲಿಯೂ, ಕಷ್ಟದಲ್ಲಿಯೂಇರುವವರನ್ನು ದೇವರ ಮುಂದೆ ಜ್ಞಾಪಕಪಡಿಸಬೇಕು. ಅವರು ಮಹಾವೈದ್ಯನಾದಕ್ರಿಸ್ತನಲ್ಲಿ ನಂಬಿಕೆಯಿಡುವಂತೆ ಪ್ರೇರಿಸಬೇಕು.KanCCh 378.2