Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-55 — ಸರ್ಕಾರಿ ಅಧಿಕಾರಿಗಳು ಹಾಗೂ ಕಾನೂನುಗಳು

    ಅಪೋಸ್ತಲನಾದ ಪೇತ್ರನು ಕ್ರೈಸ್ತವಿಶ್ವಾಸಿಗಳು ಸರ್ಕಾರಿ ಅಧಿಕಾರಿಗಳನ್ನು ಹೇಗೆಗೌರವಿಸಬೇಕು ಹಾಗೂ ದೇಶದ ಕಾನೂನು ಕಟ್ಟಳೆಗಳಿಗೆ ಹೇಗೆ ವಿಧೇಯರಾಗಿರಬೇಕೆಂದುಸ್ಪಷ್ಟವಾಗಿ ತನ್ನ ಪತ್ರಿಕೆಯಲ್ಲಿ ಹೀಗೆ ತಿಳಿಸುತ್ತಾನೆ: “ಮನುಷ್ಯರು ನೇಮಿಸಿರುವ ಯಾವಅಧಿಕಾರಕ್ಕಾದರೂ ಕರ್ತನ ನಿಮಿತ್ತ ಅಧೀನರಾಗಿರಿ. ಅರಸರು ಸರ್ವಾಧಿಕಾರಿಯೆಂತಲೂ,ಬೇರೆ ಅಧಿಪತಿಗಳು ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ, ಒಳ್ಳೇ ನಡತೆಯುಳ್ಳವರನ್ನುಪ್ರೋತ್ಸಾಹ ಪಡಿಸುವುದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆಅಧೀನರಾಗಿರಿ, ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನೀವು ಒಳ್ಳೇನಡತೆಯಿಂದ ಕಟ್ಟಬೇಕೆಂಬುದೇ ದೇವರ ಚಿತ್ತ, ಸ್ವತಂತ್ರರಂತೆ ನಡೆದುಕೊಳ್ಳಿರಿ. ಆದರೆಕೆಟ್ಟತನವನ್ನು ಮರೆಮಾಚುವುದಕ್ಕೆ ನಿಮ್ಮ ಸ್ವಾತಂತ್ರವನ್ನು ಉಪಯೋಗಿಸಬೇಡಿರಿ.ನೀವು ದೇವರ ದಾಸರಾಗಿದ್ದೀರಲ್ಲಾ, ಎಲ್ಲರನ್ನೂ, ಸನ್ಮಾನಿಸಿರಿ; ಸಹೋದರರನ್ನು ಪ್ರೀತಿಸಿರಿ.ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ” (1 ಪೇತ್ರನು 2:13-17).KanCCh 394.1

    ಪ್ರಜೆಗಳಾದ ನಮ್ಮಮೇಲೆ ಆಡಳಿತ ನಡೆಸುವ ಅಧಿಪತಿಗಳು ಹಾಗೂ ಅಧಿಕಾರಿಗಳಿದ್ದಾರೆ.ಅಲ್ಲದೆ ಕಾನೂನು ಕಟ್ಟಳೆಗಳು, ಸಂವಿಧಾನದ ಆಧಾರದಲ್ಲಿ ಪ್ರಜೆಗಳ ಮೇಲೆ ಆಡಳಿತನಡೆಯುತ್ತದೆ. ಈ ನಿಯಮಗಳು, ಕಾನೂನು ಕಟ್ಟಳೆಗಳು ಹಾಗೂ ಸಂವಿಧಾನವಿಲ್ಲದಿದ್ದಲ್ಲಿಜಗತ್ತಿನ ಸ್ಥಿತಿಯು ಈಗಿರುವುದಕ್ಕಿಂತಲೂ ಇನ್ನೂ ಹೆಚ್ಚು ಕೆಟ್ಟದ್ದಾಗಿರುತ್ತಿತ್ತು. ಈನಿಯಮಗಳಲ್ಲಿ ಕೆಲವು ಒಳ್ಳೆಯವು ಮತ್ತು ಬೇರೆ ಕೆಲವು ಕೆಟ್ಟದ್ದಾಗಿವೆ. ಕೆಟ್ಟತನವುದಿನದಿಂದದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ತನ್ನ ವಾಕ್ಯದ ತತ್ವಗಳಿಗನುಸಾರ ನಡೆಯುವತನ್ನ ಜನರನ್ನು ದೇವರು ಪೋಷಿಸುತ್ತಾನೆ.KanCCh 394.2

    ನಮ್ಮ ದೇಶದ ಕಾನೂನು ಕಟ್ಟಳೆಗಳಿಗೆ ಪ್ರತಿಯೊಂದು ಸಂದರ್ಭದಲ್ಲಿಯೂವಿಧೇಯರಾಗಿರಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಸೀನಾಯಿ ಬೆಟ್ಟದಲ್ಲಿಸ್ವತಃ ಇಳಿದುಬಂದು ಸಮಸ್ತ ಇಸ್ರಾಯೇಲ್ಯರಿಗೆ ಕೇಳಿಸುವಂತೆ ನುಡಿದ ಹಾಗೂ ಅನಂತರತನ್ನ ಕೈಗಳಿಂದಲೇ ಬರೆದ ಉನ್ನತವಾದ ಹತ್ತು ಕಟ್ಟಳೆಗಳಿಗೆ ದೇಶದ ಕಾನೂನುಗಳುವಿರುದ್ಧವಾಗಿದ್ದಲ್ಲಿ ದೇಶದ ಕಾನೂನುಗಳಿಗೆ ನಾವು ವಿಧೇಯರಾಗಬೇಕಿಲ್ಲ. “.... ನನ್ನಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆಪ್ರಜೆಯಾಗಿರುವರು” ಎಂದು ದೇವರು ಹೇಳುತ್ತಾನೆ (ಯೆರೆಮೀಯ 31:33). ತನ್ನಹೃದಯದಲ್ಲಿ ದೇವರ ಆಜ್ಞೆಗಳು ಬರೆಯಲ್ಪಟ್ಟಿರುವವನು ಮನಷ್ಯರಿಗಿಂತ ಹೆಚ್ಚಾಗಿದೇವರಿಗೆ ವಿಧೇಯನಾಗಿರುತ್ತಾನೆ. ದೇವರ ಆಜ್ಞೆಗಳಿಂದ ದೂರವಾಗುವುದಕ್ಕೆ ಬದಲಾಗಿಅಂತವನು ಮನುಷ್ಯರಿಗೆ ಅವಿಧೇಯನಾಗುತ್ತಾನೆ. ಸತ್ಯದ ಪ್ರೇರೇಪಣೆಯಿಂದಶಿಕ್ಷಣಕ್ಕೊಳಪಟ್ಟು ಉತ್ತಮವಾದ ಮನಸ್ಸಾಕ್ಷಿಯಿಂದ ನಡೆಸಲ್ಪಟ್ಟು ದೇವರ ಪ್ರತಿಯೊಂದುಮಾತಿಗನುಸಾರ ಜೀವಿಸುವ ದೇವರ ಮಕ್ಕಳು ತಮ್ಮ ಹೃದಯದಲ್ಲಿ ಬರೆಯಲ್ಪಟ್ಟಿರುವದೇವರ ಹತ್ತುಆಜ್ಞೆಗಳನ್ನು ಮಾತ್ರ ಅಧಿಕಾರಯುಕ್ತವಾಗಿ ಬಂದದ್ದೆಂದು ಒಪ್ಪಿಕೊಂಡುವಿಧೇಯರಾಗುತ್ತಾರೆ. ದೇವರಿಂದ ಕೊಡಲ್ಪಟ್ಟ ಹತ್ತುಆಜ್ಞೆಗಳು ವಿವೇಕದಿಂದ ಕೂಡಿದ್ದುಅಧಿಕಾರಯುಕ್ತವಾಗಿರುವುದರಿಂದ ಮನುಷ್ಯರಿಂದ ಮಾಡಲ್ಪಟ್ಟ ಇತರೆಲ್ಲಾಕಾನೂನುಗಳಿಗಿಂತ ಅತ್ಯಂತ ಶ್ರೇಷ್ಠವಾಗಿವೆ.KanCCh 394.3

    ಯೇಸುಕ್ರಿಸ್ತನು ಜೀವಿಸಿದ್ದ ಕಾಲದಲ್ಲಿದ್ದ ಸರ್ಕಾರವು ಅತ್ಯಂತ ಭ್ರಷ್ಟವಾಗಿತ್ತು ಮತ್ತುದಬ್ಬಾಳಿಕೆ ನಡೆಸುತ್ತಿತ್ತು. ಕ್ರೂರತ್ವ, ಅಸಹನೆ ಮತ್ತು ಅನ್ಯಾಯದ ಸುಲಿಗೆಯು ಎಲ್ಲಾಕಡೆಯಲ್ಲಿಯೂ ಕಂಡುಬರುತ್ತಿತ್ತು. ಆದಾಗ್ಯೂ ರಕ್ಷಕನಾದ ಯೇಸುವು ಸರ್ಕಾರದಲ್ಲಿಯಾವುದೇ ರೀತಿಯ ಸುಧಾರಣೆ ತರಲು ಪ್ರಯತ್ನಿಸಲಿಲ್ಲ. ಅಧಿಕಾರದ ದುರುಪಯೋಗಅಥವಾ ದೇಶದ ಶತ್ರುಗಳನ್ನು ಆತನು ಖಂಡಿಸಲಿಲ್ಲ ಅಥವಾ ದೂಷಿಸಲಿಲ್ಲ. ಅಧಿಕಾರಿಗಳಆಡಳಿತದಲ್ಲಿ ಕ್ರಿಸ್ತನು ಮಧ್ಯಪ್ರವೇಶಿಸಲಿಲ್ಲ ಅಥವಾ ಅವರ ಅಧಿಕಾರವನ್ನು ಪ್ರಶ್ನಿಸಲಿಲ್ಲ.ನಮಗೆ ಮಾದರಿಯಾಗಿರುವ ಆತನು ಈ ಲೋಕದ ಸರ್ಕಾರದ ವ್ಯವಹಾರದಿಂದದೂರವಾಗಿದ್ದನು. ಮನುಷ್ಯರ ಕಷ್ಟ ಸಂಕಟಗಳಿಗೆ ಆತನು ಉದಾಸೀನತೆ ತೋರಲಿಲ್ಲ.ಸರ್ಕಾರದ ಎಲ್ಲಾ ಕ್ರೂರತನ, ಸರ್ವಾಧಿಕಾರತ್ವಕ್ಕೆ ಪರಿಹಾರವು ಮನುಷ್ಯರಲ್ಲಾಗಲಿ ಅಥವಾಹೊರಗಿನ ಹೋರಾಟದಲ್ಲಿರುವುದಿಲ್ಲ. ಪರಿಹಾರವು ಮನುಷ್ಯರಿಗೆ ವೈಯಕ್ತಿಕವಾಗಿಮುಟ್ಟಬೇಕು ಮತ್ತು ಹೃದಯವನ್ನು ಪುನಃ ಚೈತನ್ಯಗೊಳಿಸಬೇಕು.KanCCh 395.1

    ಕಾನೂನಿಗೆ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ನಿರ್ಣಯತೆಗೆದುಕೊಳ್ಳಬೇಕೆಂದು ಜನರು ಕ್ರಿಸ್ತನನ್ನು ಪದೇಪದೇ ಕೇಳಿದರು. ಆದರೆ ಲೌಕಿಕವಾದವಿಷಯಗಳ ಬಗ್ಗೆ ಮಧ್ಯಪ್ರವೇಶಿಸಲು ಆತನು ನಿರಾಕರಿಸಿದನು. ಕ್ರಿಸ್ತನು ಆತ್ಮೀಕವಾದರಾಜ್ಯದಅಧಿಪತಿಯಾಗಿದ್ದು, ನೀತಿಯರಾಜ್ಯವನ್ನು ಸ್ಥಾಪಿಸಲು ಈ ಲೋಕಕ್ಕೆ ಬಂದನು. ಇಂತಹನೀತಿಯರಾಜ್ಯದ ಆಡಳಿತವು ಉದಾತ್ತವಾದ, ಶ್ರೇಷ್ಠಗೊಳಿಸುವಂತ ಹಾಗೂಪರಿಶುದ್ಧಗೊಳಿಸುವಂತ ತತ್ವಗಳ ಆಧಾರದಲ್ಲಿ ನೆಲೆಗೊಂಡಿರುತ್ತದೆಂದು ಕ್ರಿಸ್ತನು ತನ್ನಬೋಧನೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾನೆ. ಯೆಹೋವ ದೇವರರಾಜ್ಯದಲ್ಲಿ ನೀತಿ, ನ್ಯಾಯ,ಕರುಣೆ ಹಾಗೂ ಪ್ರೀತಿಯು ನೆಲೆಗೊಂಡಿದ್ದು, ಅವುಗಳಿಂದ ಆಡಳಿತ ನಡೆಸಲ್ಪಡುತ್ತದೆಂದುಆತನು ತೋರಿಸಿಕೊಟ್ಟನು.KanCCh 395.2

    ಫರಿಸಾಯರು ಯೇಸುವನ್ನು ಅಧಿಪತಿಯವಶಕ್ಕೂ, ಅಧಿಕಾರಕ್ಕೂ ಒಪ್ಪಿಸಬೇಕೆಂದುಹೊಂಚಿನೋಡುವವರಾಗಿ ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನಮಾತಿನಲ್ಲಿ ಏನನ್ನಾದರೂ ಹಿಡಿಯುವುದಕ್ಕೆ ಆತನ ಬಳಿಗೆ ಕಳುಹಿಸಿದರು. ‘’ಇವರುಬೋಧಕನೇ ನೀನು ಸರಿಯಾಗಿ ಮಾತಾಡುತ್ತಾ ಉಪದೇಶ ಮಾಡುತ್ತೀ, ನೀನುಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದುಬಲ್ಲೆವು. ಕೈಸರನಿಗೆ ಕಂದಾಯ ಕೊಡುವುದು ಸರಿಯೋ ಸರಿಯಲ್ಲವೋ” ಎಂದುಆತನನ್ನು ಕೇಳಿದರು (ಲೂಕ 20:20-22).KanCCh 395.3

    ಈ ಪ್ರಶ್ನೆಗೆ ಕ್ರಿಸ್ತನು ನೆಪಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ, ಬದಲಾಗಿಮುಚ್ಚುಮರೆಯಿಲ್ಲದ ಉತ್ತರ ನೀಡಿದನು. ಆತನು ತನ್ನ ಕೈಯಲ್ಲಿ ಕೈಸರನ ಮುದ್ರೆಹಾಗೂ ತಲೆಯೂ ಇರುವ ಒಂದು ನಾಣ್ಯ ತೆಗೆದುಕೊಂಡು ಅವರು ರೋಮ್ಸರ್ಕಾರದ ರಕ್ಷಣೆಯಲ್ಲಿ ಜೀವಿಸುತ್ತಿರುವುದರಿಂದ, ದೇವರ ಉನ್ನತವಾದ ಹತ್ತು ಆಜ್ಞೆಗಳಿಗೆವಿರುದ್ಧವಾಗಿರದಿದ್ದಲ್ಲಿ, ರೋಮ್ ಸರ್ಕಾರಕ್ಕೆ ಎಲ್ಲಾ ವಿಧವಾದ ಸಹಕಾರ ನೀಡಬೇಕೆಂದುತಿಳಿಸಿದನು.KanCCh 396.1

    ಫರಿಸಾಯರು ಕ್ರಿಸ್ತನ ಉತ್ತರ ಕೇಳಿದಾಗ “ಆತನ ಮಾತಿನಲ್ಲಿ ಅವರು ಜನರಮುಂದೆಏನೂ ಹಿಡಿಯಲಾರದೆ... ಆಶ್ಚರ್ಯಪಟ್ಟು ಸುಮ್ಮಗಾದರು” (ಲೂಕ 20:26). ಆತನುಅವರ ದುರಹಂಕಾರ ಮತ್ತು ಕಪಟತನವನ್ನು ಗದರಿಸಿದನು. ಹಾಗೆ ಮಾಡಿದಾಗಸರ್ಕಾರಕ್ಕೆ ಮತ್ತು ದೇವರಿಗೆ ಮನುಷ್ಯರು ಮಾಡಬೇಕಾದ ಕರ್ತವ್ಯಗಳಬಗ್ಗೆ ಸ್ಪಷ್ಟವಾದಒಂದು ಮಹಾತತ್ವವನ್ನು ತೋರಿಸಿಕೊಟ್ಟನು.KanCCh 396.2

    Larger font
    Smaller font
    Copy
    Print
    Contents