Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ರಾಜಕೀಯಕ್ಕೆ ಸಂಬಂಧಿಸಿದಂತೆ ಸಂಭ್ರಮ

    ಸಭೆಗಳಲ್ಲಿ ಹಾಗೂ ಶಾಲೆಗಳಲ್ಲಿ ಸತ್ಯವೇದ ಬೋಧಿಸುವವರು ರಾಜಕಾರಣಿಗಳುಅಥವಾ ಅವರು ತೆಗೆದುಕೊಳ್ಳುವ ಕ್ರಮ, ನಿರ್ಣಯಗಳ ಪರವಾಗಿ ಅಥವಾ ವಿರುದ್ಧವಾಗಿಪೂರ್ವಾಗ್ರಹ ಪೀಡಿತರಾಗಿ ಯಾವುದೇ ವಿಮರ್ಶೆ ಮಾಡುವುದಕ್ಕೆ ಅವರಿಗೆ ಸ್ವಾತಂತ್ರವಿಲ್ಲ.ಹಾಗೆಮಾಡಿದಲ್ಲಿ ಇತರಸಭಿಕರಮನಸ್ಸನ್ನು ಕೆರಳಿಸಿ ಅವರವರ ಇಷ್ಟದ ರಾಜಕೀಯಪಕ್ಷಗಳ ಬಗ್ಗೆ ಮಾತಾಡಲು ಹಾಗೂ ಸಮರ್ಥಿಸಲು ಅವಕಾಶ ಕೊಟ್ಟಂತಾಗುತ್ತದೆ. ಆಗಸಭೆಯಲ್ಲಿ ಭಿನ್ನಾಭಿಪ್ರಾಯ ಹುಟ್ಟಿ ವಿಭಜನೆಗೆ ದಾರಿಮಾಡಿದಂತಾಗುತ್ತದೆ.KanCCh 397.2

    ರಾಜಕೀಯ ಪ್ರಶ್ನೆಗಳ ಬಗ್ಗೆ ಕ್ರೈಸ್ತರು ಮೌನ ವಹಿಸುವುದು ಬಹಳ ಒಳ್ಳೆಯದು.ಅದರ ಬಗ್ಗೆ ಅವರು ಗಮನ ಹರಿಸಬಾರದೆಂದು ಕರ್ತನು ಹೇಳುತ್ತಾನೆ. ದೇವರವಾಕ್ಯದಲ್ಲಿ ಸ್ಪಷ್ಟವಾಗಿ ಪ್ರಕಟಿಸಲ್ಪಟ್ಟಿರುವ ಪರಿಶುದ್ಧ ಸುವಾರ್ತೆಯ ಸಿದ್ಧಾಂತಗಳಲ್ಲಿಒಂದಾಗಬೇಕೆಂದು ಕ್ರಿಸ್ತನು ತನ್ನ ಹಿಂಬಾಲಕರಿಗೆ ತಿಳಿಸುತ್ತಾನೆ. ನಾವು ಎಂತಹ ವ್ಯಕ್ತಿಗಳಿಗೆಮತಚಲಾಯಿಸುತ್ತೇವೆಂದು ತಿಳಿಯದಿರುವುದರಿಂದ ನಮಗೆ ಸುರಕ್ಷತೆ ನೀಡದಿರುವರಾಜಕೀಯ ಪಕ್ಷಗಳಿಗೆ ಮತದಾನ ಮಾಡಬಾರದು.KanCCh 397.3

    ಕ್ರೈಸ್ತರು ನಿಜವಾದ ದ್ರಾಕ್ಷಾಬಳ್ಳಿಯ ಕೊಂಬೆಗಳಾಗಿದ್ದಾರೆ ಹಾಗೂ ಅದೇ ಬಳ್ಳಿಯಫಲ ಕೊಡುವರು. ಅವರು ಕ್ರೈಸ್ತ ಅನ್ನೋನ್ಯತೆಯಲ್ಲಿ ಸಾಮರಸ್ಯದಿಂದ ವರ್ತಿಸಬೇಕು.ಅವರು ಕ್ರಿಸ್ತನ ಲಾಂಛನ ಹೊಂದಿರಬೇಕೇ ಹೊರತು, ರಾಜಕೀಯ ಲಾಂಛನ (ಬ್ಯಾಡ್)ಹಾಕಿಕೊಳ್ಳಬಾರದು.KanCCh 397.4

    Larger font
    Smaller font
    Copy
    Print
    Contents