Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಎಚ್ಚರಿಕೆಯಿಲ್ಲದೆ ಕೊಡುವ ಹೇಳಿಕೆಗಳಿಂದಾಗುವ ಅಪಾಯಗಳು

    ದೇಶದ ಕಾನೂನು ಕಟ್ಟಳೆಗಳು ದೇವರಾಜ್ಞೆಗಳಿಗೆ ವಿರುದ್ಧವಾಗಿಲ್ಲದಿದ್ದಲ್ಲಿ ಕ್ರೈಸ್ತರುಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಿರಬೇಕು ಹಾಗೂ ಅನುಸರಿಸಿ ನಡೆಯಬೇಕು.ಕ್ರೈಸ್ತರಲ್ಲಿ ಕೆಲವರು ನೀಡುವ ಹೇಳಿಕೆಗಳು ಅಥವಾ ಬರೆಯುವ ಲೇಖನಗಳು ಸರ್ಕಾರಹಾಗೂ ಅದರ ನೀತಿನಿಯಮಗಳಿಗೆ ವಿರುದ್ಧವಾಗಿರಬಹುದು. ಈ ರೀತಿ ಮಾತಾಡುವುದುಹಾಗೂ ಬರೆಯುವುದು ತಪ್ಪು. ಇದರಿಂದ ಇತರರಲ್ಲಿ ಅಡ್ರೆಂಟಿಸ್ಪರ ಬಗ್ಗೆ ತಪ್ಪು ಭಾವನೆಉಂಟಾಗುವುದಕ್ಕೆ ಅವಕಾಶ ಮಾಡಿದಂತಾಗುವುದು. ಸರ್ಕಾರದ ನಾಯಕರು ಮತ್ತುಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳು ಅಥವಾ ಮಾಡಿದ ಕಾರ್ಯಗಳ ಬಗ್ಗೆಯಾವಾಗಲೂ ತಪ್ಪು ಕಂಡುಹಿಡಿಯುವುದು ವಿವೇಕವಲ್ಲ. ಯಾವುದೇ ವ್ಯಕ್ತಿ ಅಥವಾಸಂಸ್ಥೆಗಳನ್ನು ಖಂಡಿಸುವುದು ನಮ್ಮ ಕೆಲಸವಲ್ಲ. ಸರ್ಕಾರಿ ಅಧಿಕಾರಿಗಳಿಗೆ ನಾವುವಿರುದ್ಧವಾಗಿದ್ದೇವೆಂಬ ಭಾವನೆ ಬಾರದಂತೆ ಬಹಳ ಎಚ್ಚರಿಕೆ ವಹಿಸಬೇಕು. ಕ್ರೈಸ್ತರಾದ ನಾವು ಮಾಡುವ ಹೋರಾಟವು ಆಕ್ರಮಣಕಾರಿ ಎಂಬುದು ನಿಜ. ಆದರೆ “ಕರ್ತನಾದಯೆಹೋವನು ಇಂತೆನ್ನುತ್ತಾನೆ ಎಂಬುದೇ ನಮ್ಮ ಆಯುಧವಾಗಿರಬೇಕು. ದೇವರಮಹಾಕೋಪದ ದಿನವಾದ ಕ್ರಿಸ್ತನ ಎರಡನೇ ಬರೋಣಕ್ಕೆ ಜನರನ್ನು ಸಿದ್ಧಪಡಿಸುವುದುತಮ್ಮ ಕರ್ತವ್ಯ ಕೈಸ್ತರಲ್ಲದವರಲ್ಲಿ ನಮ್ಮ ಬಗ್ಗೆ ವಿರೋಧತೆ ಹುಟ್ಟಿಸುವಂತೆ ಮಾಡುವುದಕ್ಕಾಗಲಿಅಥವಾ ಸಂಘರ್ಷ ಉಂಟುಮಾಡುವುದಕ್ಕೆ ನಾವು ಎಂದಿಗೂ ಉತ್ತೇಜನ ನೀಡಬಾರದು.KanCCh 398.2

    ಅಡ್ವೆಂಟಿಸ್ಟ್ ಸಹೋದರರು ಸರ್ಕಾರದ ವಿರುದ್ಧ ಯಾವುದೇ ಎಚ್ಚರಿಕೆಯಿಲ್ಲದೆಅಲಕ್ಷದಿಂದ ಮಾತಾಡುವುದರ ಮೂಲಕ ಅಥವಾ ಲೇಖನಗಳನ್ನು ಬರೆಯುವುದರಮೂಲಕ ಆರೋಪಣೆ ಮಾಡಿದಲ್ಲಿ, ಒಂದಲ್ಲಾ ಒಂದುದಿನ ನಮ್ಮ ವಿರೋಧಿಗಳುಇದನ್ನು ದುರುಪಯೋಗಪಡಿಸಿಕೊಂಡು ನಮ್ಮನ್ನು ಖಂಡಿಸುವ ದಿನಗಳು ಬರಲಿವೆ.ಈ ಖಂಡನೆಯು ಹೇಳಿಕೆ ನೀಡಿದವರು ಅಥವಾ ಲೇಖನ ಬರೆದವರ ಬಗ್ಗೆ ಮಾತ್ರವಲ್ಲ,ಎಲ್ಲಾ ಅಡ್ರೆಂಟಿಸ್ಪರ ಬಗ್ಗೆ ಸರ್ಕಾರಿ ಅಧಿಕಾರಿಗಳು ಆರೋಪ ಹೊರಿಸುವುದಕ್ಕೆಕಾರಣವಾಗುತ್ತದೆ. ತಾವು ಯಾವ ಉದ್ದೇಶವಿಟ್ಟು ಇಂತಹ ಹೇಳಿಕೆ ನೀಡಿರುವರೋ,ಅದಕ್ಕೆ ವಿರುದ್ಧವಾಗಿ ಅಪಾರ್ಥ ಉಂಟಾಗುವುದನ್ನು ನೋಡಿ ಅವರು ಸ್ವತಃಆಶ್ಚರ್ಯಪಡುವರು. ಇಂತಹ ಒಂದುದಿನದಲ್ಲಿ ಅಡ್ಡೆಂಟಿಸ್ಟ್ ಸಭೆಯ ಒಬ್ಬ ಜವಾಬ್ದಾರಿಯುಳ್ಳವ್ಯಕ್ತಿಯು ಸರ್ಕಾರದ ಕಾನೂನುಗಳ ವಿರುದ್ಧ ಇಂತಹ ಮಾತಾಡಿದನೆಂದು ನಮ್ಮಮೇಲೆ ಆರೋಪ ಹೊರಿಸುವವರು ಹೇಳುತ್ತಾರೆ. ನಮ್ಮ ಮೇಲೆ ಆರೋಪ ಹೊರಿಸುವವರುಅಡ್ರೆಂಟಿಸ್ಟರಲ್ಲಿ ಕೆಲವರು ಬೇಜವಾಬ್ದಾರಿಯಿಂದ ಸರ್ಕಾರದ ವಿರುದ್ಧ ಮಾಡಿದ ಟೀಕೆಗಳನ್ನುವಿರೋಧಿಗಳು ಹೇಗೆ ಉಪಯೋಗಿಸಿಕೊಳ್ಳುತ್ತಾರೆಂದು ತಿಳಿದು ದಿಗ್ದಮೆಗೊಳ್ಳುವರು.ಆದುದರಿಂದ ಅಡ್ಡೆಂಟಿಸ್ಟ್ ಕೆಲಸಗಾರರು, ನಾಯಕರು ಹಾಗೂ ಇತರರು ಎಲ್ಲಾಸಮಯಗಳಲ್ಲಿ ಮತ್ತು ಎಂತಹ ಪರಿಸ್ಥಿತಿಯಲ್ಲಿಯೂ ಮಾತನಾಡುವಾಗ ಎಚ್ಚರಿಕೆವಹಿಸಬೇಕು. ಆದುದರಿಂದ ಕರ್ತನ ಮಹಾಸಂಕಟದದಿನಕ್ಕೆ ಮೊದಲೇ ಸಭೆಗೆ ಬೇರೆಯಾವುದೇ ಕಷ್ಟದ ಕಾಲಉಂಟಾಗದಂತೆ ಅಡ್ವೆಂಟಿಸ್ಪರೆಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು.KanCCh 399.1

    ನಾವು ಹೇಗೆ ಕಾಣಿಸಿಕೊಳ್ಳುತ್ತೇವೆಯೋ, ಅದರಂತೆಯೇ ಲೋಕವು ನಮ್ಮನ್ನುಎಂತವರೆಂದು ತೀರ್ಪುಮಾಡುತ್ತದೆ. ಕ್ರಿಸ್ತನನ್ನು ಪ್ರತಿನಿಧಿಸಲು ಪ್ರಯತ್ನಪಡುತ್ತಿರುವವರೆಲ್ಲರೂ ಅಸಮಂಜಸವಾದ ಗುಣಸ್ವಭಾವವನ್ನು ತೋರಿಸಬಾರದು. ನಾವುಪವಿತ್ರಾತ್ಮ ಪ್ರೇರಿತರಾಗಿದ್ದಲ್ಲಿ, ನಾವು ಕೊಡುವ ನಿರ್ಣಾಯಕವಾದ ಸಂದೇಶವುಸರ್ಕಾರವನ್ನಾಗಲಿ ಅಥವಾ ಅಧಿಕಾರಿಗಳನ್ನಾಗಲಿ ತೀವ್ರವಾಗಿ ಖಂಡಿಸುವುದಿಲ್ಲ. ಆಗದೈವಸಂದೇಶದಲ್ಲಿ ನಂಬಿಕೆಯುಳ್ಳವರು ತಮ್ಮ ವಿರೋಧಿಗಳ ರಕ್ಷಣೆಯ ಬಗ್ಗೆಯೂಹೆಚ್ಚು ಕಳಕಳಿ ತೋರಿಸುವರು. ಸರ್ಕಾರ, ಅದರ ಅಧಿಕಾರಿಗಳ ಬಗ್ಗೆ ತೀರ್ಪು ಮಾಡುವವನುದೇವರು, ಆದುದರಿಂದ ನಾವು ದೀನಸ್ವಭಾವದಿಂದಲೂ ಹಾಗೂ ಪ್ರೀತಿಯಿಂದಲೂ ಕ್ರಿಸ್ತನ ಸತ್ಯದ ತತ್ವಗಳನ್ನು ಸಮರ್ಥಿಸಿಕೊಳ್ಳುವ ನಂಬಿಗಸ್ತರಾದ ಕಾವಲುಗಾರರಂತಿರಬೇಕು.KanCCh 399.2

    Larger font
    Smaller font
    Copy
    Print
    Contents